ವೀರಾಜಪೇಟೆ, ಸೆ. ೨೧: ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಅಮ್ಮತ್ತಿ-ಒಂಟಿಯAಗಡಿ, ೨೦೨೩-೨೪ನೇ ಸಾಲಿನಲ್ಲಿ ಒಟ್ಟು ರೂ. ೧೨.೧೨ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷÀ ಕರ್ನಲ್ ಕಂಡ್ರತAಡ ಸಿ. ಸುಬ್ಬಯ್ಯ ತಿಳಿಸಿದರು.
ಸಂಘದ ನೂತನ ಸಭಾಂಗಣದಲ್ಲಿ ನಡೆದ ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಸದಸ್ಯರಿಗೆ ಶೇ. ೭ ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದರು. ಸಂಘದಲ್ಲಿ ಒಟ್ಟು ೧೪೮೫ ಸದಸ್ಯರಿದ್ದು, ಪಾಲು ಬಂಡವಾಳ ರೂ. ೮೭.೦೪ಲಕ್ಷ ಆಗಿದೆ. ಸಂಘದಲ್ಲಿ ಕೆ.ಸಿ.ಸಿ. ಕೃಷಿ ಸಾಲ, ಸ್ವ-ಸಹಾಯ ಗುಂಪು ಸಾಲ, ವ್ಯಾಪಾರ ಸಾಲ, ಜಾಮೀನು ಸಾಲ, ಆಭರಣ ಸಾಲ, ಜಂಟಿ ಬಾಧ್ಯತಾ ಗುಂಪು ಸಾಲ, ನಿತ್ಯ ನಿಧಿ ಠೇವಣಿ ಸಾಲ, ನಿರಖು ಠೇವಣಿ ಸಾಲ ಹಾಗೂ ಸಂಬಳಾಧಾರಿತ ಸಾಲ ಸೇರಿ ಒಟ್ಟು ರೂ. ೧,೦೨೪.೩೯ ಲಕ್ಷಗಳಷ್ಟು ಸಾಲ ವಿತರಿಸಲಾಗಿದೆ, ಸಂಘವು ೨೦೨೩-೨೪ನೇ ಸಾಲಿನಲ್ಲಿ ರೂ. ೬,೭೦೪.೨೯ ಲಕ್ಷಗಳಷ್ಟು ವ್ಯವಹಾರ ನಡೆಸಿದ್ದು ದುಡಿಯುವ ಬಂಡವಾಳ ರೂ. ೧,೯೮೯.೭೫ ಲಕ್ಷಗಳಷ್ಟು ಆಗಿರುತ್ತದೆ ಎಂದು ತಿಳಿಸಿದರು.
ಸಂಘವು ನಿರಖು ಠೇವಣಿಗೆ ಶೇ. ೭ರ ಬಡ್ಡಿ ನೀಡುತ್ತಿದ್ದು ಹಿರಿಯ ನಾಗರಿಕರಿಗೆ ಶೇ. ೫೦ರ ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ. ಸದಸ್ಯರು ಸಂಘದಲ್ಲಿ ವ್ಯವಹರಿಸುವ ಮೂಲಕ ತಮ್ಮಲ್ಲಿರುವ ಹಣವನ್ನು ಸಂಘದಲ್ಲಿ ಠೇವಣಿ ನೀಡುವ ಮೂಲಕ ಸಂಘಕ್ಕೆ ಬಂಡವಾಳ ಕ್ರೋಢೀಕರಿಸಲು ಮತ್ತು ಸದಸ್ಯರುಗಳು ಸಂಘದಲ್ಲೇ ಮಾರಾಟ ಮಾಡುತ್ತಿರುವ ರಸಗೊಬ್ಬರ, ಇತ್ಯಾದಿಗಳನ್ನು ನಮ್ಮಲ್ಲಿಯೇ ಖರೀದಿಸಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುವಂತೆ ಕೋರಿದರು.
ಸಂಘದ ನಿರ್ದೇಶಕಿ ವಿ.ಆರ್. ಪ್ರಭಾವತಿ ಸ್ವಾಗತ ಭಾಷಣ ಮಾಡಿದರು ಮತ್ತು ನಿರ್ದೇಶಕರಾದ ಬೊಪ್ಪಂಡ ಪಿ. ಗಣಪತಿ ಅವರು ವಂದನಾರ್ಪಣೆ ಮಾಡಿದರು. ಸಂಘದ ಉಪಾಧ್ಯಕ್ಷ ವಿ.ಆರ್. ಹರೀಶ್ ಅವರು, ನಿರ್ದೇಶಕರುಗಳಾದ ಅಪ್ಪಾರಂಡ ಎಂ. ಕಾರ್ಯಪ್ಪ, ಕೊಪ್ಪಡ ಎಂ. ಗಣೇಶ್, ಕೆ.ಎಸ್. ದಿನೇಶ್, ಜಿಲ್ಲಂಡ ಸಿ. ಉತ್ತಪ್ಪ, ಪಿ.ಎ. ಮಂಜುನಾಥ, ಪೊರ್ಕೊಂಡ ಸವಿತಾ ಬೋಪಣ್ಣ, ಸಂಘದ ಮೇಲ್ವಿಚಾರಕರು ಟಿ.ಟಿ. ಗಣಪತಿ ಅವರು ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಾತಂಡ ಡಿ. ಭೀಮಯ್ಯ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.