ಮುಳ್ಳೂರು, ಸೆ. ೨೧: ‘ಸಹಕಾರಿ ಸದಸ್ಯರು ಸಂಘದಿAದ ದೊರೆಯುವ ಸಾಲಾ ಸೌಲ ಭ್ಯಗಳನ್ನು ಸದುಪ ಯೋಗಿಸಿಕೊಂಡು ಸಕಾಲದಲ್ಲಿ ಸಾಲವನ್ನು ಮರು ಪಾವತಿಸುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಸಹಕರಿಸಿ’ ಎಂದು ಸಮೀಪದ ಆಲೂರು ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಜೆ. ಪ್ರಸನ್ನಕುಮಾರ್ ಅಭಿಪ್ರಾಯಪಟ್ಟರು. ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಬೆಳವಣಿಗೆಗೆ ಸಹಕಾರಿ ಸದಸ್ಯರು ಸಹಕರಿಸಿದರೆ ಮಾತ್ರ ಸಂಘವು ಬೆಳವಣಿಗೆಯಾಗುತ್ತದೆ ನಮ್ಮ ಸಂಘವು ೨೦೨೩-೨೪ನೇ ಸಾಲಿನಲ್ಲಿ ರೂ. ೨೫,೩೪,೧೧೮ ನಿವ್ವಳ ಲಾಭಗಳಿಸಿದ್ದು, ಸಂಘವು ಮುಂದಿನ ಸಾಲಿನಲ್ಲಿ ಮತ್ತಷ್ಟು ಲಾಭಗಳಿಸಲು ಪ್ರಯತ್ನಿಸಲಾಗುವುದು. ಈ ನಿಟ್ಟಿನಲ್ಲಿ ಸಂಘದ ಸದಸ್ಯರು ಸಹಕರಿಸುವಂತೆ ಮನವಿ ಮಾಡಿದರು.
ಮಹಾಸಭೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಲೀಲಾಕುಮಾರ್ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆಯ ವರದಿ ಮತ್ತು ಲೆಕ್ಕ ಪರಿಶೋಧನಾ ವರದಿ ಮಂಡಿಸಿದರು. ಆಲೂರು ಸಿದ್ದಾಪುರ ಸಂಘದಲ್ಲಿ ೨೬೭೦ ಮಂದಿ ಸದಸ್ಯರಿದ್ದು ರೂ. ೧,೬೦,೫೯,೦೬೭ ‘ಎ’ತರಗತಿಯ ಪಾಲು ಹಣ ಇರುತ್ತದೆ. ಸಂಘದಲ್ಲಿ ಠೇವಣಿ ರೂ. ೯,೯೩,೪೬,೮೦೦ ಇರುತ್ತದೆ ಎಂದರು. ಸಂಘವು ೨೦೨೩-೨೪ನೇ ಸಾಲಿನಲ್ಲಿ ಕೆ.ಡಿ.ಸಿ.ಸಿ ಬ್ಯಾಂಕಿನಿAದ ರೂ. ೧೨,೦೫, ೦೭,೨೮೮ ಸಾಲ ಪಡೆದಿದ್ದು, ಸಂಘದಿAದ ಸದಸ್ಯರಿಗೆ ೨೦೨೩-೨೪ನೇ ಸಾಲಿಗೆ ರೂ. ೧೨,೮೭,೯೪,೪೯೫ ಸಾಲ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘದ ಮೂಲಕ ಸದಸ್ಯರಿಗೆ ವಾಹನ ಸಾಲ ಮತ್ತು ಆಭರಣ ಸಾಲವನ್ನು ರೂ. ೫ ಲಕ್ಷವರೆಗೆ ಕೊಡುವ ವ್ಯವಸ್ಥೆ ಬಗ್ಗೆ ಸದಸ್ಯರು ಸಭೆಯಲ್ಲಿ ಚರ್ಚಿಸಿದರು. ಸಂಘದ ಸದಸ್ಯರಿಗೆ ಶೇ೯ ರಷ್ಟು ಡಿವಿಡೆಂಡ್ ಹಣವನ್ನು ನೀಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು, ಸಭೆಯಲ್ಲಿ ಹಿರಿಯ ಸಹಕಾರಿ ಸದಸ್ಯರಾದ ಸಿ.ಕೆ. ಚಂದ್ರಶೇಖರ್, ಎಚ್.ಎಸ್. ಪ್ರೇಮ್ನಾಥ್, ಮುತ್ತಪ್ಪ, ಚಂದ್ರಶೇಖರ್ ಮುಂತಾದವರು ಚರ್ಚಿಸಿದರು.
ಸಭೆಯಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ಮೇಲ್ವಿಚಾರಕ ಎಸ್.ಡಿ.ಶಶಿಕುಮಾರ್ ಮಾಹಿತಿ ನೀಡಿದರು. ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಜಿ. ಹೊನ್ನಪ್ಪ, ನಿರ್ದೇಶಕರಾದ ಎಚ್.ಎಸ್. ಸುಂದರೇಶ್, ಎ.ಜಿ. ವಿಜಯ್, ಕೆ.ಇ. ಮಧು ಶಂಕರ್, ಕೆ.ಎಸ್. ಜಗದೀಶ್, ಎನ್.ಎಸ್. ಜಗದೀಶ್ವರಸ್ವಾಮಿ, ಹೆಚ್.ಎಸ್. ವೀಣಾ, ಯು.ಎನ್. ಕಲಾವತಿ, ಕೆ.ವಿ. ರಾಧಮಣಿ, ಬಿ.ಇ. ಧರ್ಮಪ್ಪ, ಎಚ್.ಕೆ. ಮಲ್ಲೇಶ್ ಸಂಘದ ಲೆಕ್ಕಾಧಿಕಾರಿ ಕೆ.ಡಿ. ಚಂದ್ರಮತಿ, ಕಂಪ್ಯೂಟರ್ ನಿರ್ವಾಹಕ ಟಿ.ಎಸ್. ಪ್ರವೀಣ್ ಮತ್ತು ಸಂಘದ ಸಿಬ್ಬಂದಿ ಇದ್ದರು.