ಗೋಣಿಕೊಪ್ಪಲು, ಸೆ. ೨೧: ಗೋಣಿಕೊಪ್ಪಲುವಿನ ಪ್ರಾಥಮಿಕ ಗ್ರಾಮಾಂತರ ಕೃಷಿ ಪತ್ತಿನ ಸಹಕಾರ ಸಂಘವು ರೂ. ೧.೩೧ ಕೋಟಿ ಲಾಭಾಂಶದಲ್ಲಿ ಮುಂದುವರೆಯುತ್ತಿದ್ದು ಪ್ರಸ್ತುತ ಸಾಲಿನ ಮಹಾಸಭೆ ರೂ. ೫ ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸ್ವಂತ ಕಟ್ಟಡದಲ್ಲಿ ನಡೆಯಿತು.
ಆದಷ್ಟು ಬೇಗನೆ ನೂತನ ಕಟ್ಟಡದಲ್ಲಿ ಮಲ್ಟಿಪ್ಲೇಕ್ಸ್ ಥಿಯೇಟರ್ ಆರಂಭವಾಗಲಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಂಘದ ಅಧ್ಯಕ್ಷ ಕುಪ್ಪಂಡ ಎಂ. ಚಿಟ್ಟಿಯಪ್ಪ ಮಹಾಸಭೆಯಲ್ಲಿ ತಿಳಿಸಿದರು. ಮಹಾಸಭೆಯಲ್ಲಿ ಹೆಚ್ಚಿನ ಸದಸ್ಯರು ಭಾಗವಹಿಸಿ, ಆಡಳಿತ ಮಂಡಳಿಯ ಉತ್ತಮ ಕಾರ್ಯಕ್ಕೆ ಒಕ್ಕೊರಲಿನ ಶ್ಲಾಘನೆಯನ್ನು ವ್ಯಕ್ತಪಡಿಸಿದರು.
ಸಹಕಾರ ಸಂಘಗಳ ನಿಬಂಧಕರಿAದ ಆಡಳಿತಾತ್ಮಕ ಅನುಮತಿ ಪಡೆಯುವ ಮೂಲಕ ಪಾರದರ್ಶಕವಾಗಿ ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ಹಲವು ಷರತ್ತುಗಳೊಂದಿಗೆ ಮೈಸೂರಿನ ಸಂಸ್ಥೆಗೆ ನೀಡಲಾಗಿತ್ತು. ನಿರೀಕ್ಷೆಗೂ ಮೀರಿ ಕಟ್ಟಡ ಕಾಮಗಾರಿ ಕೆಲಸ ನಡೆದಿದೆ. ಸಂಸ್ಥೆಯ ಸಿಇಓ, ಸಿಬ್ಬಂದಿಗಳು ಆಡಳಿತ ಮಂಡಳಿಯ ನಿರ್ದೇಶಕರು, ಕಾಮಗಾರಿ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಕುಪ್ಪಂಡ ಎಂ. ಚಿಟ್ಟಿಯಪ್ಪ ಮಹಾಸಭೆಗೆ ತಿಳಿಸಿದರು.
ಸಂಘವು ೨.೧೩ಕೋಟಿ ಪಾಲು ಬಂಡವಾಳದೊAದಿಗೆ ಯಶಸ್ವಿಯಾಗಿ ಮುಂದುವರೆಯುತ್ತಿದೆ. ಸಂಘವು ಎ ತರಗತಿಯನ್ನು ಹೊಂದಿದ್ದು ಕಳೆದ ೧೫ ವರ್ಷಗಳಿಂದ ಎ. ತರಗತಿಯನ್ನು ಪಡೆಯುತ್ತಿದೆ. ರೂ. ೭೮.೧೬ ಕೋಟಿ ಠೇವಣಿ ಸಂಗ್ರಹಣೆಯೊAದಿಗೆ ಸದಸ್ಯರುಗಳಿಗೆ ರೂ. ೫೯.೭೨ ಕೋಟಿ ಸಾಲವನ್ನು ನೀಡಲಾಗಿದೆ. ಸಂಘದಲ್ಲಿ ಹೊಸ ಕಟ್ಟಡ ಹಾಗೂ ಸುವರ್ಣ ಮಹೋತ್ಸವದ ಕೊಡುಗೆಯಾಗಿ ಸದಸ್ಯರಿಗೆ ಜಾಮೀನು ಸಾಲವನ್ನು ಒಂದು ಲಕ್ಷದಿಂದ ೨ ಲಕ್ಷದವರೆಗೆ ಹಾಗೂ ಮನೆ ನಿರ್ಮಾಣ ಸಾಲವನ್ನು ೩೦ ಲಕ್ಷದವರೆಗೆ ನೀಡಲು ಮಹಾಸಭೆಯು ಅಂಗಿಕಾರ ನೀಡಬೇಕು. ಸಂಘ ಹಾಲಿ ನಿರ್ವಹಿಸುತ್ತಿರುವ ಕಟ್ಟಡ ದುರಸ್ತಿಗೆ ಹಾಗೂ ಕೈಕೇರಿಯ ಜಾಗದಲ್ಲಿ ನೂತನ ಗೋದಾಮು ನಿರ್ಮಿಸಲು ಮಹಾಸಭೆಯು ಒಪ್ಪಿಗೆ ನೀಡಬೇಕೆಂದು ಅಧ್ಯಕ್ಷರು ಕೋರಿದರು. ಇದಕ್ಕೆ ಮಹಾಸಭೆಯು ಒಮ್ಮತ್ತದ ಒಪ್ಪಿಗೆ ಸೂಚಿಸಿತು.
ಶೇ. ೯೭ರಷ್ಟು ವಸೂಲಾತಿ ಮಾಡಲಾಗಿದೆ. ವ್ಯಾಪಾರ ವಿಭಾಗವು ಲಾಭದಲ್ಲಿದ್ದು ಸದಸ್ಯರುಗಳಿಗೆ ಅಗತ್ಯವಿರುವ ಗೊಬ್ಬರ ಹಾಗೂ ಹತ್ಯಾರು ಸಾಮಗ್ರಿಗಳನ್ನು ಸಂಘದಿAದಲೇ ಖರೀದಿಸಿ ಹೆಚ್ಚಿನ ಲಾಭ ಗಳಿಸಲು ಸಂಘದ ಸದಸ್ಯರು ಸಹಕರಿಸಿದ್ದಾರೆ. ಸದಸ್ಯರಿಗೆ ಶೇ. ೨೫ ಡಿವಿಡೆಂಡ್ ಹಾಗೂ ಊಟದ ಬಾಪ್ತು ೨೦೦೦ ನೀಡಲಾಗಿದೆ. ಸಂಘದಲ್ಲಿ ಮಧ್ಯಮಾವದಿ ಸಾಲ, ಕೃಷಿ ಕೆಲಸಗಳಿಗೆ ಶೇ. ೩ರ ಬಡ್ಡಿ ದರದಲ್ಲಿ ೧೦ ಲಕ್ಷಗಳ ವರೆಗೆ ೫ರಿಂದ ೭ ವರ್ಷಗಳಲ್ಲಿ ಮರು ಪಾವತಿಸುವಂತೆ ಸಾಲ ನೀಡಲಾಗುತ್ತಿದೆ. ರಾಜ್ಯದಲ್ಲಿಯೇ ಉತ್ತಮ ಸಹಕಾರ ಸಂಘ ಮಾಡಬೇಕೆಂಬ ಬಯಕೆ ನಮ್ಮದಾಗಿದೆ. ಮುಂದಿನ ದಿನದಲ್ಲಿ ನೂತನ ಕಟ್ಟಡವನ್ನು ಉದ್ಘಾಟಿಸಿ ಲೋಕಾರ್ಪಣೆ ಮಾಡಲಾಗುವುದು. ಸಂಘವು ೩೮೯.೨೯ ಕೋಟಿ ವ್ಯವಹಾರ ನಡೆಸಿ ೧.೩೧ ಕೋಟಿ ಲಾಭ ಗಳಿಸಿದ್ದು ಸಂಘದ ಸದಸ್ಯರಿಗೆ ಶೇ.೨೫ರ ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಅಧ್ಯಕ್ಷ ಕುಪ್ಪಂಡ ಎಂ. ಚಿಟ್ಟಿಯಪ್ಪ ತಿಳಿಸಿದರು.
ಮಹಾಸಭೆಯಲ್ಲಿ ಜಮ್ಮಡ ಮೋಹನ್, ಹಿರಿಯ ಸದಸ್ಯರಾದ ಕುಶ, ಬೋಪಣ್ಣ, ಮಾದಪ್ಪ, ಸೇರಿದಂತೆ ಇನ್ನಿತರ ಪ್ರಮುಖರು ಸಂಘದ ಅಭಿವೃದ್ಧಿಯ ಬಗ್ಗೆ ಚರ್ಚಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಕೆ. ಪ್ರತಾಪ್, ಕಾರ್ಯಕ್ರಮ ನಿರೂಪಿಸಿ, ಮಹಾಸಭೆಯ ವರದಿ ಮಂಡಿಸಿ ಅನುಮೋದನೆ ಪಡೆದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕಬ್ಬಚ್ಚಿರ ಎಂ. ಸುಬ್ರಮಣಿ, ನಿರ್ದೇಶಕರುಗಳಾದ ಜಮ್ಮಡ ಸಿ. ಮೋಹನ್, ಬೆಲ್ಲತಂಡ ಸಿ. ಮಾದಯ್ಯ, ಚೆಪ್ಪುಡೀರ ಟಿ. ಗಣಪತಿ, ಕಾಡ್ಯಮಾಡ ಪಿ. ದೇವಯ್ಯ, ವೇದಪಂಡ ಬಿ. ಕಿರಣ್, ಪಿ.ವಿ. ಶೋಭಿತ್, ಕೊಕ್ಕಲೆಮಾಡ ಪಾರ್ವತಿ, ಜಮ್ಮಡ ಸೌಮ್ಯ, ಜಮ್ಮಡ ಪ್ರಮೀಳ, ಹೆಚ್.ಎಸ್. ಗಣೇಶ್, ವೈ.ಬಿ. ಗಪ್ಪು, ಕುಲ್ಲಚಂಡ ಪ್ರಮೋದ್ ಗಣಪತಿ ಸೇರಿದಂತೆ ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕರಾದ ಗಿರೀಶ್ಕುಮಾರ್ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಸದಸ್ಯರಾದ ಚೇದಂಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಹಿರಿಯ ನಿರ್ದೇಶಕರಾದ ಬೆಲ್ಲತಂಡ ಸಿ. ಮಾದಯ್ಯ ವಂದಿಸಿದರು. ಮುಂದಿನ ಸಾಲಿನಿಂದ ಸದಸ್ಯರ ಮಕ್ಕಳು ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿದ ಸಂದರ್ಭ ಅವರನ್ನು ಗುರುತಿಸಿ, ಪ್ರೋತ್ಸಾಹಧನ ನೀಡಲು ಚಿಂತನೆ ನಡೆಸುವಂತೆ ಸಭೆಗೆ ಸದಸ್ಯರು ಸಲಹೆ ನೀಡಿದರು. ಅಧ್ಯಕ್ಷರು ಇದಕ್ಕೆ ಒಪ್ಪಿಗೆ ಸೂಚಿಸಿ ಮುಂದಿನ ಸಾಲಿನಿನಿಂದ ಅನುಷ್ಠಾನಕ್ಕೆ ತರುವ ಬಗ್ಗೆ ಭರವಸೆ ನೀಡಿದರು.