ನಾಪೋಕ್ಲು, ಸೆ. ೨೧: ಪೊನ್ನಾಡ್ ರೈತ ಉತ್ಪಾದಕ ಕಂಪನಿಯು ರೈತರ ಏಳಿಗೆಗಾಗಿ ಶ್ರಮಿಸುತ್ತಿದ್ದು ಸದಸ್ಯರ ಸಹಕಾರದಿಂದ ಅಭಿವೃದ್ಧಿಯನ್ನು ಹೊಂದಿದೆ ಎಂದು ಪೊನ್ನಾಡ್ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಎ.ಕೆ ಮನು ಮುತ್ತಪ್ಪ ಹೇಳಿದರು. ಇಲ್ಲಿನ ಕೊಡವ ಸಮಾಜದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಂಪೆನಿಯ ನಾಲ್ಕನೇ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೊನ್ನಾಡ್ ರೈತ ಉತ್ಪಾದಕ ಕಂಪನಿ ಕೇವಲ ೧೩ ಲಕ್ಷ ಬಂಡವಾಳದಿAದ ಆರಂಭಗೊAಡು ಇದೀಗ ೧೦ ಕೋಟಿ ರೂಪಾಯಿಗಳ ವ್ಯವಹಾರವನ್ನು ನಡೆಸುತ್ತಿರುವುದು ಹೆಮ್ಮೆಯ ವಿಷಯ. ಕಂಪೆನಿಯ ಬೆಳವಣಿಗೆಗೆ ನಬಾರ್ಡ್ ಸಂಪೂರ್ಣ ಸಹಕಾರ ಇದೆ. ರೈತರಿಗೆ ಅಗತ್ಯವಿರುವ ಕೃಷಿಗೆ ಪೂರಕವಾದ ಎಲ್ಲಾ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಸಂಸ್ಥೆಯ ವಹಿವಾಟುಗಳ ಎಲ್ಲಾ ಅಂಶಗಳನ್ನು ರೈತರಿಗೆ ಪಾರದರ್ಶಕವಾಗಿ ನೀಡಲಾಗುತ್ತಿದೆ. ಸದಸ್ಯರ ಸಹಕಾರದಿಂದ ರಾಜ್ಯ ಮಾತ್ರವಲ್ಲ ರಾಷ್ಟçದಲ್ಲೇ ಪ್ರಥಮ ಸ್ಥಾನ ಗಳಿಸುವಂತಹ ಉದ್ದೇಶವನ್ನು ಕಂಪನಿ ಹೊಂದಿದೆ ಎಂದರು. ಕಂಪನಿ ವಹಿವಾಟಿನ ಶೇರುಬೆಲೆ ೯೬ ರೂಪಾಯಿಗಳಿದ್ದು ಕಳೆದ ವರ್ಷ ನೂರು ರೂಪಾಯಿಗೇರಿದ್ದ ಶೇರು ಬೆಲೆ ಇಂದು ೧೩೪ ರೂಪಾಯಿ ಆಗಿದೆ. ರೈತರಿಗೆ ಕಾಫಿ ಖರೀದಿಯಲ್ಲಿ ಯೋಗ್ಯ ಬೆಲೆಯನ್ನು ನೀಡಲಾಗುತ್ತಿದೆ. ತೇವಾಂಶ ಹಾಗೂ ಔಟರ್ನ್ ಪರೀಕ್ಷೆಯನ್ನು ಸರಿಯಾಗಿ ನಿರ್ವಹಿಸಿ ಕಾಫಿಯನ್ನು ನೇರವಾಗಿ ಕಂಪೆನಿಗಳಿಗೆ ಕೊಟ್ಟು ದೊರೆತ ಲಾಭವನ್ನು ರೈತರಿಗೆ ನೀಡಲಾಗುತ್ತಿದೆ. ಅಲ್ಪಲಾಭ ಅಂಶವನ್ನು ಇಟ್ಟುಕೊಂಡು ರೈತರಿಗೆ ಅನುಕೂಲಕರವಾದ ಮಾರುಕಟ್ಟೆ ದರವನ್ನು ನೀಡಲಾಗುತ್ತಿದೆ ಎಂದರು.
ಕಂಪನಿಯ ಆಶ್ರಯದಲ್ಲಿ ಪೊನ್ನಾಡು ಸೂಪರ್ ಮಾರ್ಕೆಟ್ ಅನ್ನು ತೆರೆಯಲಾಗಿದೆ. ರೈತರಿಗೆ ಗುಣಮಟ್ಟದ ದಿನಸಿ ವಸ್ತುಗಳನ್ನು ಪೂರೈಸಲಾಗುತ್ತಿದೆ. ಸೂಪರ್ ಮಾರ್ಕೆಟ್ ಅಭಿವೃದ್ಧಿಗೊಳ್ಳಲು ಸದಸ್ಯರ ಸಹಕಾರ ಅತ್ಯಗತ್ಯ .ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಮಗ್ರ ಕಾಫಿ ಅಭಿವೃದ್ಧಿ ಯೋಜನೆ ಕುರಿತು ಮಡಿಕೇರಿ ಕಾಫಿ ಮಂಡಳಿಯ ವಿಸ್ತರಣಾ ಕಚೇರಿಯ ಉಪನಿರ್ದೇಶಕ ಚಂದ್ರಶೇಖರ್, ಕೃಷಿ ರಸಾಯನ ಶಾಸ್ತçಜ್ಞ ಡಾ. ನಡಫ್ ಅವರಿಂದ ತಾಂತ್ರಿಕ ಕಾರ್ಯಾಗಾರ ನಡೆಯಿತು. ರಾಜ್ಯ ಸಮನ್ವಯ ಅಧಿಕಾರಿ ರಾಮಪ್ರಿಯ, ಜಿಲ್ಲಾ ಸಮನ್ವಯಾಧಿಕಾರಿ ಪವಿತ್ರ, ನಬಾರ್ಡ್ ಡಿಡಿಎಂ ರಮೇಶ್ ಬಾಬು, ಈಶ ಔಟ್ರಿಚ್ನ ಸುಸರ್ಪಿಣಿ ,ದೇವಬಾಹು ಸುವಿರಾಜ ಉಪಸ್ಥಿತರಿದ್ದು ಮಾತನಾಡಿದರು.
ವೇದಿಕೆಯಲ್ಲಿ ನಿರ್ದೇಶಕರಾದ ಮುಕ್ಕಾಟಿರ ವಿನಯ್, ಕೋಡಿರ ಪ್ರಸನ್ನ, ಕಾಟುಮಣಿಯಂಡ ಉಮೇಶ್, ಕೇಟೋಳಿರ ರತ್ನಾ ಚರ್ಮಣ್ಣ, ಸಹನಿರ್ದೆಶಕರಾದ ಕಲ್ಯಾಟಂಡ ರಘು ತಮ್ಮಯ್ಯ, ಅಪ್ಪನೆರವಂಡ ರಾಜಾ ಪೂವಯ್ಯ, ಮಚ್ಚುರ ಯದುಕುಮಾರ್, ಕುಲ್ಲೇಟಿರ ಬನ್ಸಿ ಬೋಪಣ್ಣ ಉಪಸ್ಥಿತರಿದ್ದರು. ಈಶ ಫೌಂಡೇಶನ್ನ ಸಂಯೋಜಕಿ ಪವಿತ್ರ ವಾರ್ಷಿಕ ವರದಿ ವಾಚಿಸಿದರು. ರತ್ನಾ ಚರ್ಮಣ್ಣ ವಂದಿಸಿದರು.