ಬೆAಗಳೂರು, ಸೆ. ೧೯ : ಭೂ ವಿವಾದಕ್ಕೆ ಸಂಬAಧಿಸಿದ ಕೋರ್ಟ್ ಕೇಸ್ ವಿಚಾರಣೆಗೆ ಬಾಕಿ ಇರುವಾಗಲೇ ಕಾಫಿ ಬೆಳೆಗಾರರೊಬ್ಬರು ಕೋರ್ಟ್ ಅನುಮತಿಯಿಲ್ಲದೆಯೇ ಅಕ್ರಮವಾಗಿ ಮರ ಕಡಿದಿದ್ದು ಇದನ್ನು ಕೋರ್ಟು ಗಂಭೀರವಾಗಿ ಪರಿಗಣಿಸಿ ತೀವ್ರ ದಂಡನೆಗೆ ಗುರಿಮಾಡಿದೆ.
ಕಳೆದ ವಾರ ಪ್ರಕರಣವೊಂದರ ಮೇಲ್ಮನವಿಯನ್ನು ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್ ಅನುಮತಿ ಇಲ್ಲದೆ ಮರ ಕಡಿದದ್ದಕ್ಕೆ ೧೦ ಲಕ್ಷ ರೂಪಾಯಿ ಡೆಪಾಸಿಟ್ ಮಾಡಿ ಇಲ್ಲಾಂದ್ರೆ ಜೈಲಿಗೆ ಹೋಗಿ ಎಂದು ಆದೇಶಿಸಿದೆ. ವಿವಾದಿತ ಜಮೀನಿನಲ್ಲಿದ್ದ ೯೦ ಸಿಲ್ವರ್ಓಕ್ ಮರಗಳನ್ನು ಕಡಿದ ಕ್ರಮಕ್ಕೆ ಸಂಬAಧಿಸಿದAತೆ ಸಿವಿಲ್ ವಿವಾದದಲ್ಲಿ ನ್ಯಾಯಾಲಯದ ಮುಂದೆ ಮೇಲ್ಮನವಿ ಸಲ್ಲಿಸಿರುವ ವೀರಾಜಪೇಟೆಯ ಕಾಫಿ ಬೆಳೆಗಾರರೊಬ್ಬರನ್ನು ಜೈಲಿಗೆ ಕಳುಹಿಸುವುದು ಸೇರಿದಂತೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ನ್ಯಾಯಾಧೀಶರು ಎಚ್ಚರಿಕೆ ನೀಡಿರುವ ವೀಡಿಯೋ ಕ್ಲಿಪ್ ಸಾಮಾಜಿಕ ತಾಣ ಎಕ್ಸ್ನಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ಪ್ರಕ್ರಿಯೆಯ ವೀಡಿಯೋ ಪ್ರಕಾರ, ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು ನ್ಯಾಯಾಲಯದ ಆಯುಕ್ತರು (ಛಿouಡಿಣ ಛಿommissioಟಿeಡಿ) ತಮ್ಮ ಮುಂದೆ ಇರಿಸಿರುವ ಛಾಯಾಚಿತ್ರಗಳು ಕಾಫಿ ಎಸ್ಟೇಟ್ನಲ್ಲಿನ ಮರಗಳು ವಾಸ್ತವವಾಗಿ ಕಡಿಯಲ್ಪಟ್ಟಿವೆ ಮತ್ತು ಅರ್ಜಿದಾರರು ಹೇಳಿಕೊಂಡAತೆ ತಾವಾಗಿಯೇ ಬಿದ್ದಿಲ್ಲ ಎಂದು ಸೂಚಿಸುತ್ತವೆ.
ಯಾವುದೇ ಅನುಮತಿ ಪಡೆಯದೆ ಮರಗಳನ್ನು ಕಡಿಯಲು ಮುಂದಾದದ್ದು ಏಕೆ ಎಂದು ಪ್ರಶ್ನಿಸಿದ ನ್ಯಾಯಾಧೀಶರು, ತಕ್ಷಣವೇ ೧೦ ಲಕ್ಷ ರೂಪಾಯಿ ಠೇವಣಿ ಇಡುವಂತೆ ಅಥವಾ ಜೈಲಿಗೆ ಹೋಗುವಂತೆ ಆದೇಶಿಸಿದರು.
ಒಂದು ಹಂತದಲ್ಲಿ, ನ್ಯಾಯಾಧೀಶರು ಅಪೀಲುದಾರನನ್ನು ಕಸ್ಟಡಿಗೆ ತೆಗೆದುಕೊಳ್ಳಲು ಪೊಲೀಸರನ್ನು ಕರೆದರು ಮತ್ತು ಅವರ ವಕೀಲರು ಬಂದು ಅವನನ್ನು ಬಿಡುಗಡೆ ಮಾಡುತ್ತಾರೆ ಎಂದು ಹೇಳಿದರು. ನೀವು ನ್ಯಾಯಾಲಯದ ಆದೇಶದೊಳಗೆ ಮಧ್ಯಪ್ರವೇಶಿಸಿದ್ದೀರಿ. ೯೦ ಸಿಲ್ವರ್ ಓಕ್ಮರಗಳ ಮೌಲ್ಯ ನಮಗೆ ತಿಳಿದಿದೆ. ನೀವು ರೂ. ೧೦ ಲಕ್ಷ ಠೇವಣಿ ಮಾಡಿ ಅಥವಾ ಜೈಲಿಗೆ ಹೋಗಿ, ಎಂದು ನ್ಯಾಯಾಧೀಶರು ಮೇಲ್ಮನವಿದಾರರಿಗೆ ತಿಳಿಸಿದರು ಮತ್ತು ಅವರು ಮರ ಕಡಿದಿರುವುದಕ್ಕೆ ಯಾವುದೇ ಕಾರಣಗಳನ್ನು ನೀಡಬೇಡಿ ಅಥವಾ ಕಾರಣಗಳನ್ನು ಸೃಷ್ಟಿಸಬೇಡಿ ಎಂದು ಹೇಳಿದರು. ಆದರೆ ಆಸ್ಪತ್ರೆಗೆ ದಾಖಲಾದ ಕಾರಣ ಬೆಳೆಗಾರರ ಪರ ವಕೀಲರು ಕೋರ್ಟ್ಗೆ ಹಾಜರಾಗದ ಕಾರಣ ಅವರಿಗೆ ಕಾಲಾವಕಾಶ ನೀಡಲಾಯಿತು.