ಕುಶಾಲನಗರ, ಸೆ.೧೯: ಕುಶಾಲನಗರ ಪುರಸಭೆಯ ೨ನೇ ಅವಧಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಸಂಬAಧಿಸಿದAತೆ ಇಬ್ಬರು ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಿದ ಸಂಬAಧ ಪುರಸಭೆ ಬಿಜೆಪಿ ಸದಸ್ಯರು ಮತ್ತು ಪಕ್ಷದ ಪ್ರಮುಖರು ಕುಶಾಲನಗರ ತಾಲೂಕು ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಪಕ್ಷ ವಾಮಮಾರ್ಗ ಅನುಸರಿಸುತ್ತಿದೆ ಎಂದು ಆಕ್ಷೇಪಿಸಿದ ಬಿಜೆಪಿ ಪ್ರಮುಖರು ಈ ಬಗ್ಗೆ ನಿಯಮಗಳನ್ನು ಮರು ಪರಿಶೀಲಿಸುವಂತೆ ಕೋರಿದರು. ಈ ಬಗ್ಗೆ ಮರು ಪರಿಶೀಲಿಸುವ ಭರವಸೆಯನ್ನು ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ಅವರು ನೀಡಿದರು.

ಬಿಜೆಪಿ ನಗರ ಅಧ್ಯಕ್ಷ ಎಂ.ಎA. ಚರಣ್, ಕಾರ್ಯದರ್ಶಿ ಮಧುಸೂದನ್, ಪುರಸಭೆಯ ಬಿಜೆಪಿ ಸದಸ್ಯರಾದ ಡಿ.ಕೆ. ತಿಮ್ಮಪ್ಪ, ಅಮೃತ್ ರಾಜ್, ರೇಣುಕಾ, ಪ್ರಮುಖರಾದ ಕೆ.ಜಿ. ಮನು, ಎಂ.ಡಿ. ಕೃಷ್ಣಪ್ಪ, ಉಮಾ ಶಂಕರ್ ಮತ್ತಿತರರು ಇದ್ದರು.