*ಗೋಣಿಕೊಪ್ಪ, ಸೆ. ೧೯: ಕೆ.ಬಿ. ಪ್ರೌಢಶಾಲೆಯ ವಜ್ರಮಹೋತ್ಸವ ಆಚರಣೆ ಪ್ರಯುಕ್ತ ಹಲವು ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಕಂಜಿತAಡ ಕೆ. ಮಂದಣ್ಣ ತಿಳಿಸಿದ್ದಾರೆ.

೧೯೬೩ರಲ್ಲಿ ಸ್ಥಾಪನೆಯಾಗಿರುವ ಶಾಲೆ ೬೦ ವರ್ಷ ಪೂರೈಸಿದೆ. ಇದರಿಂದಾಗಿ ನವೆಂಬರ್ ತಿಂಗಳಲ್ಲಿ ಕ್ಲಬ್ ಹಾಕಿ, ಸ್ಥಳೀಯರಿಗೆ ಹಗ್ಗಜಗ್ಗಾಟ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸುದಿಗೋಷ್ಠಿಯಲ್ಲಿ ತಿಳಿಸಿದರು.

ಹಿರಿಯರ ಪ್ರಯತ್ನದಿಂದ ಕುತ್ತ್ನಾಡ್ ಮತ್ತು ಬೇರಳಿನಾಡ್ ನಿವಾಸಿಗಳು ಸೇರಿ ಶಾಲೆ ಆರಂಭಿಸಿದ್ದಾರೆ. ಅನುದಾನಿತ ಶಾಲೆಯ ಅಭಿವೃದ್ಧಿಗೆ ಪಣತೊಟ್ಟಿದ್ದು, ಮುಂದಿನ ದಿನಗಳಲ್ಲಿ ಹಂತಹAತವಾಗಿ ಮತ್ತಷ್ಟು ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದರು.

ಉಪಾಧ್ಯಕ್ಷ ಕೊಲ್ಲೀರ ಯು. ಬೋಪಣ್ಣ ಮಾತನಾಡಿ, ವಜ್ರಮಹೋತ್ಸವ ಅಂಗವಾಗಿ ಶಾಲೆಯ ಮೈದಾನದಲ್ಲಿ ಹಾಕಿ ಕೂರ್ಗ್ ಸಹಯೋಗದಲ್ಲಿ ಜಿಲ್ಲಾಮಟ್ಟದ ಹಾಕಿ ಟೂರ್ನಿಯನ್ನು ನವೆಂಬರ್ ತಿಂಗಳಲ್ಲಿ ಆಯೋಜಿಸಲಾಗಿದೆ. ನೋಂದಾಯಿತ ಕ್ಲಬ್‌ಗಳ ಪಾಲ್ಗೊಳ್ಳಲಿದ್ದು, ಕ್ರಮವಾಗಿ ೧ ಲಕ್ಷ, ೬೦ ಸಾವಿರ ಮತ್ತು ೪೦ ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ. ಜಿಲ್ಲಾಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಸ್ಥಳೀಯರಿಗೆ ಹಗ್ಗಜಗ್ಗಾಟ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.

ಖಜಾಂಚಿ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ಮಾತನಾಡಿ, ಹೊಸ ಆಡಳಿತ ಮಂಡಳಿಯಿAದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಹಿರಿಯರ ಶಿಕ್ಷಣ ಪ್ರೀತಿಯನ್ನು ಪೋಷಿಸಲಾಗುತ್ತಿದೆ. ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಲಾಗಿದೆ ಎಂದರು.

ಮುಖ್ಯ ಶಿಕ್ಷಕಿ ಕೆ.ಎ. ದ್ವೀಪ ಮಾತನಾಡಿ, ಶಾಲೆ ಎರಡು ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. ೧೦೦ ಸಾಧನೆ ಮಾಡಿದೆ. ಉತ್ತಮ ಸಾಧನೆಯ ಹಾದಿಯಲ್ಲಿದೆ ಎಂದು ತಿಳಿಸಿದರು.

ನಿರ್ದೇಶಕರಾದ ತೀತಿಮಾಡ ಜೆ. ಅಯ್ಯಪ್ಪ, ಅಪ್ಪಂಡೇರAಡ ಸುರೇಶ್ ಚಂಗಪ್ಪ, ಅಪ್ಪಂಡೇರAಡ ಭವ್ಯ ಚಿಟ್ಯಪ್ಪ, ಕಡೇಮಾಡ ಕಸುಮ ಜೋಯಪ್ಪ, ಮೂಕಚಂಡ ಟಿ. ಸುಬ್ಬಯ್ಯ, ಕಡೇಮಾಡ ಅನಿಲ್ ಕಾಳಪ್ಪ, ತೀತಿಮಾಡ ಜಿ. ಸುರೇಶ್, ಚಂದೂರ ಜಿ. ಬೋಪಣ್ಣ, ಕೆ.ವಿ. ಡೇವಿಡ್, ಕಾಳೇಂಗಡ ಪಿ. ತಿಮ್ಮಯ್ಯ, ಗೌರವ ಕಾರ್ಯದರ್ಶಿ ಹೆಚ್.ಕೆ. ಮನು ಇದ್ದರು.