ಮಡಿಕೇರಿ, ಸೆ. ೧೬: ಪಂಜಾಬ್‌ನ ಜಲಂಧರ್‌ನಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ ಜೂನಿಯರ್ ನ್ಯಾಷನಲ್ಸ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಹಾಕಿ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶಿಸಿದೆ.
ಇಂದು ನಡೆದ ರೋಚಕ ಕ್ವಾರ್ಟರ್ ಫೈನಲ್‌ನಲ್ಲಿ ಹಾಕಿ ಕರ್ನಾಟಕ ತಂಡ ಶೂಟೌಟ್‌ನಲ್ಲಿ ೭-೬ ಗೋಲುಗಳಿಂದ ಮಧ್ಯಪ್ರದೇಶ ವಿರುದ್ಧ ಜಯಗಳಿಸಿತು. ತಂಡದ ಆಟಗಾರ ಕೊಡಗಿನವರಾದ ತರುಣ್‌ಗಣಪತಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದರು. ಇದಕ್ಕೆ ಮುನ್ನ ನಡೆದಿದ್ದ ಪಂದ್ಯಾವಳಿಯಲ್ಲೂ ಕರ್ನಾಟಕ ಉತ್ತಮ ಸಾಧನೆ ತೋರಿತು.
ಕೇರಳ ವಿರುದ್ಧ ೬-೧ ಗೋಲು, ಡೆಲ್ಲಿ ವಿರುದ್ಧ ೬-೧ ಗೋಲಿನ ಅಂತರದ ಜಯಗಳಿಸಿತ್ತು. ಈ ಎರಡು ಪಂದ್ಯದಲ್ಲಿ ಕೊಡಗಿನ ಆಟಗಾರ ಆರ್ಯನ್ ಉತ್ತಪ್ಪ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದರು.
ತಾ. ೧೮ ರಂದು (ನಾಳೆ) ಹಾಕಿ ಕರ್ನಾಟಕ ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶ ತಂಡವನ್ನು ಎದುರಿಸಲಿದೆ.