Wish ಥಿou ಂ ಊಚಿಠಿಠಿಥಿ ಃiಡಿಣh ಆಚಿಥಿ ನಾಣಿ ಅಂಕಲ್!!
ಮೇರಿಯAಡ ಚಂಗಪ್ಪ ನಾಣಯ್ಯ (ಒಅಓ) ಕೊಡಗಿನ ರಾಜಕೀಯ ಇತಿಹಾಸದಲ್ಲಿ ಜನಜನಿತ ಹೆಸರು. ಕೊಡವ, ಕನ್ನಡ, ಇಂಗ್ಲೀಷ್ನಲ್ಲಿ ಉತ್ತಮ ವಾಗ್ಮಿ. ನೇರ -ನಿಷ್ಠುರ ನಡೆ. ಖಡಕ್ ಮಾತು. ಸಹಕಾರಿ ಧುರೀಣ. ರಾಜಕೀಯ ಜೀವನದುದ್ದಕ್ಕೂ ಭ್ರಷ್ಟಾಚಾರದ ಕಳಂಕ ಅಂಟಿಸಿಕೊಳ್ಳದ ನಿಷ್ಕಳಂಕ ವ್ಯಕ್ತಿತ್ವ.
ಇಂದು ಸೆಪ್ಟೆಂಬರ್ ೧೭ ಅವರ ಜನ್ಮದಿನ. ದೇಶದ ಪ್ರಧಾನಿ ನರೇಂದ್ರ ದಾಮೋದರ ದಾಸ್ ಮೋದಿ ಅವರ ಜನ್ಮದಿನವೂ ಹೌದು. ಮೋದಿ ೧೯೫೦ರಲ್ಲಿ ಜನಿಸಿದರೆ, ನಾಣಯ್ಯ, ಮೇರಿಯಂಡ ಚಂಗಪ್ಪ - ಪೊನ್ನಮ್ಮ ದಂಪತಿಯ ಮೂರನೇ ಪುತ್ರರಾಗಿ ೧೯೩೯ರಲ್ಲಿ ಜನಿಸಿದರು. ಇಂದು ಅವರಿಗೆ ೮೫ ವರ್ಷ ಪೂರ್ಣಗೊಂಡ ಸಂಭ್ರಮ.
ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದರಿಂದ ಮನೆಯ ಆರ್ಥಿಕ ಸ್ಥಿತಿ ಮನನ ಮಾಡಿಕೊಂಡ ನಾಣಯ್ಯ, ದುಂದುಗಾರಿಕೆಗೆ ಮನಸ್ಸು ಮಾಡಲಿಲ್ಲ. ಇದರಿಂದಲೇ ಸುದೀರ್ಘ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರದ ಗೊಡವೆ ಇಲ್ಲ.
ಅಪ್ಪ - ಅಮ್ಮನ ಆಸೆಯಂತೆ ವಕೀಲ ವೃತ್ತಿ. ಅದರಿಂದ ಹಣ- ಕೀರ್ತಿ ಪ್ರಾಪ್ತಿ. ಯಾವುದೇ ರಾಜಕೀಯ ಪಕ್ಷದ ಗೊಡವೆ ಇಲ್ಲದೆ, ಕೊಡಗಿನ ಏಲಕ್ಕಿ ಸೊಸೈಟಿ, ಮಡಿಕೇರಿ ಪುರಸಭೆ ಅಧ್ಯಕ್ಷರಾದರು. ಸಹಕಾರಿ ಕ್ಷೇತ್ರದಲ್ಲಿ ಬೆಳೆಯುತ್ತಾ ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ, ರಾಜ್ಯದ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿಯೂ ಗಮನಾರ್ಹ ಸೇವೆ ಇವರ ಹಿರಿಮೆ.
ಸುಮಾರು ೨೬ ವರ್ಷ, ರಾಜ್ಯದ ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರಾಗಿ ಸೇವೆ. ಸುಮಾರು ೯ ಮುಖ್ಯಮಂತ್ರಿಗಳ ಅವಧಿಯಲ್ಲಿ ಸಚಿವರಾಗಿಯೂ, ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ ಗರಿಮೆ ಈ ಹಿರಿಯ ಚೇತನದ್ದು.
ಎಂದಿಗೂ ತತ್ವ ಸಿದ್ಧಾಂತ ಬಿಟ್ಟು ಅಧಿಕಾರದ ಬೆನ್ನು ಹಿಡಿಯದ ರಾಜಕೀಯ ಮುತ್ಸದ್ದಿ ನಾಣಯ್ಯ, ಪ್ರಾಮಾಣಿಕತೆಗೆ ಒತ್ತು ನೀಡಿದರು. ಇಂತಹ ನಾಲ್ವರು ಸಚಿವರು ಸಚಿವ ಸಂಪುಟದಲ್ಲಿದ್ದರೆ ರಾಜ್ಯದ ಅಭಿವೃದ್ಧಿ ಖಂಡಿತ ಎಂಬ ಪ್ರಶಂಸೆ ರಾಜಕೀಯ ವಿಶ್ಲೇಷಕರದ್ದಾಗಿತ್ತು.
ಸಂಪುಟದ ಸದಸ್ಯರು ಇಕ್ಕಟ್ಟಿಗೆ ಸಿಲುಕಿದಾಗ ಮಾತಿನ ಚತುರ ನಾಣಯ್ಯ ಅವರನ್ನು ಪಾರು ಮಾಡುತ್ತಿದ್ದರು. ಅರಸು ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದಾಗ, ಕಾವೇರಿಕೊಳ್ಳ ಪ್ರದೇಶ ಬೋಳಾಗುವುದನ್ನು ತಡೆಗಟ್ಟಲು ಈ ಪ್ರದೇಶದಲ್ಲಿ ೫ ವರ್ಷ ಮರ ಕಡಿಯಬಾರದು ಎಂದು ಆದೇಶ ಹೊರಡಿಸಿದರು. ಜೆ.ಹೆಚ್. ಪಟೇಲ್ ಸಂಪುಟದಲ್ಲಿ ಕಾನೂನು ಸಚಿವರಾದಾಗ ಕಾನೂನು ಇಲಾಖೆಯಲ್ಲಿ ಸುಧಾರಣೆ ತರುವುದರ ಜೊತೆಗೆ ಜ್ಯುಡಿಷಿಯಲ್ ಅಕಾಡೆಮಿ ಅಸ್ತಿತ್ವಕ್ಕೆ ಕಾರಣರಾದರು.
ಆಯಾ ಭಾಷೆಗಳಿಗೆ ಪ್ರತ್ಯೇಕ ಅಕಾಡೆಮಿಗಳ ಅಗತ್ಯವಿಲ್ಲ ಎಂದು ಕನ್ನಡ ಸಂಸ್ಕೃತಿ ಸಚಿವೆ ಬಿ.ಟಿ. ಲಲಿತಾ ನಾಯಕ್ ರಚ್ಚೆ ಹಿಡಿದಾಗ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ಮರುಜೀವ ನೀಡಿದವರು ನಾಣಯ್ಯ. ಕೊಡಗಿಗೆ ಮಾರಕವಾದ ಕಂಬದಕಡ, ಬರಪೊಳೆ ಯೋಜನೆಗಳನ್ನು ವಿರೋಧಿಸಿ ಅವುಗಳನ್ನು ತಡೆಗಟ್ಟುವಲ್ಲಿ ಸಾಮರ್ಥ್ಯ ಮೆರೆದರು. ಇಡೀ ರಾಜ್ಯದಲ್ಲಿ ಹೆದ್ದಾರಿ ರಸ್ತೆ ವಿಸ್ತರಣೆ ಯೋಜನೆಯಡಿ ಮಡಿಕೇರಿ ರಸ್ತೆ ಅಗಲೀಕರಣಕ್ಕೆ ವಿನಾಯಿತಿ ದೊರಕಿಸುವಲ್ಲಿ ಅವರ ಪಾತ್ರ ಮಹತ್ವದ್ದು.
ಮಡಿಕೇರಿ ಪುರಸಭೆ ಅಧ್ಯಕ್ಷರಾಗಿದ್ದಾಗ ಜನರಲ್ ತಿಮ್ಮಯ್ಯ ಪ್ರತಿಮೆ ಸ್ಥಾಪನೆ, ಗಾಳಿಬೀಡುವಿನ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದರು. ಜಾತ್ಯತೀತ ನಿಲುವು, ಅಪ್ಪಟ ಸ್ವಾಭಿಮಾನ, ಕರ್ತವ್ಯ ನಿಷ್ಠೆ ಇವರ ವ್ಯಕ್ತಿಪರಿಚಯ. ಪುಚ್ಚಿಮಾಡ ರೂಪ ಅವರನ್ನು ವಿವಾಹವಾಗಿರುವ ನಾಣಯ್ಯ ಅವರದ್ದು ಆದರ್ಶ ದಾಂಪತ್ಯ.
ನಾಣಯ್ಯ ಅವರಿಗೆ ಹಳೆಯ ಕನ್ನಡ ಚಿತ್ರಗೀತೆಗಳನ್ನು ಆಲಿಸುವುದೆಂದರೆ ಪಂಚಪ್ರಾಣ. ಸಚಿವರಾಗಿದ್ದಾಗ ಮಡಿಕೇರಿಯಿಂದ ಬೆಂಗಳೂರಿಗೆ ಪ್ರಯಾಣಿಸಿದಾಗಲೂ ಸುಮಧುರ ಗೀತೆಗಳನ್ನು ಆಲಿಸಿ ಆಸ್ವಾದಿಸುತ್ತಿದ್ದರು. ಅದರಲ್ಲೂ ‘ಶುಭಮಂಗಳ’ ಚಿತ್ರದ ‘ಸೂರ್ಯಂಗೂ ಚಂದ್ರAಗೂ ಬಂದಾರೆ ಮುನಿಸು ನಗುತಾವ ಭೂತಾಯಿ ಮನಸು; ರಾಜಂಗೂ ರಾಣಿಗೂ ಮುರಿದೋದ್ರೆ ಮನಸು ಅರಮನೆಯಾ ಏನೈತೆ ಸೊಗಸು....' ಹಾಡು ಅವರಿಗೆ ಅಪ್ಯಾಯಮಾನ.
ಈ ಹಿರಿಯ ಜೀವಕ್ಕೆ ಇಂದು ೮೫ ವರ್ಷ ತುಂಬಿದ ಸಂಭ್ರಮ. ಕೊಡಗಿನ ಈ ಜನನಾಯಕ ಶತಾಯುಷಿಯಾಗಲಿ. ಅವರಿಗೆ ನಾಗರಿಕ ಸನ್ಮಾನ ನೀಡುವ ಕಾರ್ಯಕ್ರಮ ಪುರವಾಸಿಗಳಿಂದ ಆಗಲಿ. ‘‘ಊಚಿಠಿಠಿಥಿ ಃiಡಿಣh ಆಚಿಥಿ ನಾಣಿ ಅಂಕಲ್!!’’
-ಕಲ್ಲುಮಾಡAಡ ದಿನೇಶ್ ಕಾರ್ಯಪ್ಪ,
ಮಡಿಕೇರಿ.
ಮೊ. ೯೮೪೫೪೯೯೧೧೨