ಪೊನ್ನಂಪೇಟೆ, ಸೆ. ೧೬: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ಮತದಾನದ ಮೂಲಕ ಮಾಡಲಾಯಿತು.

ಸಂಘದ ಉಪಾಧ್ಯಕ್ಷರಾಗಿ ತೃತೀಯ ಬಿಸಿಎ ವಿದ್ಯಾರ್ಥಿ ಸಿ.ಬಿ. ಸಚಿನ್ ಅಯ್ಯಪ್ಪ, ಕಾರ್ಯದರ್ಶಿ ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಎಂ.ಎಫ್. ನಿಹಾರ್ ಫಾತಿಮ, ಸಾಂಸ್ಕೃತಿಕ ಕಾರ್ಯದರ್ಶಿ ತೃತೀಯ ಬಿಸಿಎ ವಿದ್ಯಾರ್ಥಿ ಸಿ.ವಿ. ಅನ್ವಿತ್ ಕುಮಾರ್, ಕ್ರೀಡಾ ಕಾರ್ಯದರ್ಶಿ ಯಾಗಿ ತೃತೀಯ ಬಿಸಿಎ ವಿದ್ಯಾರ್ಥಿ ಕೆ.ಬಿ. ದರ್ಶಿಕ್ ಮುತ್ತಣ್ಣ, ಜಂಟಿ ಕಾರ್ಯದರ್ಶಿಗಳಾಗಿ ದ್ವಿತೀಯ ಬಿಸಿಎ ವಿದ್ಯಾರ್ಥಿ ಬಿ.ಎನ್. ಅಭಿಷೇಕ್, ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಕೆ. ತಸ್ಮಾ ಬೆಳ್ಳಿಯಪ್ಪ ಅವರು ಚುನಾವಣೆಯ ಮೂಲಕ ಆಯ್ಕೆಯಾದರು. ಆಯ್ಕೆ ಪ್ರಕ್ರಿಯೆ ಸಂದರ್ಭ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ. ಎಂ.ಬಿ. ಕಾವೇರಿಯಪ್ಪ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಎಂ.ಡಿ. ರೇಷ್ಮ ಇದ್ದರು. ಚುನಾವಣಾಧಿಕಾರಿಯಾಗಿ ಉಪನ್ಯಾಸಕರಾದ ಸಿ.ಎಂ. ಕಿರಣ್, ಸಹ ಚುನಾವಣಾಧಿಕಾರಿಯಾಗಿ ಕೆ.ಎ. ಕಾವೇರಮ್ಮ, ಕೆ.ಕೆ. ಬೋಜಮ್ಮ, ಸಿ. ಅಕ್ಷತಾ, ಹೆಚ್.ವಿ. ದಿವ್ಯ ಕಾರ್ಯನಿರ್ವಹಿಸಿದರು.