*ಗೋಣಿಕೊಪ್ಪ, ಸೆ. ೧೬: ಗೋಣಿಕೊಪ್ಪ ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿನ (ಕೆ.ಎನ್.ಎಸ್.ಎಸ್) ನೂತನ ಅಧ್ಯಕ್ಷರಾಗಿ ವೇಣುಗೋಪಾಲ್ ಮೆನೊನ್, ಕಾರ್ಯದರ್ಶಿಯಾಗಿ ಸರಳ ಮಣಿಲಾಲ್ ಆಯ್ಕೆಯಾಗಿದ್ದಾರೆ. ಗೋಣಿಕೊಪ್ಪದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಸಿ.ಮೋಹನ್, ಜಂಟಿ ಕಾರ್ಯದರ್ಶಿಯಾಗಿ ಬಿ.ಎಸ್. ವಿಜಯಕುಮಾರ್, ಖಜಾಂಚಿಯಾಗಿ ಉತ್ತಮನ್, ನಿರ್ದೇಶಕರುಗಳಾಗಿ. ಪಿ. ಭಾಸ್ಕರ್, ಅಜಿತ್ ವೇಣುಕಣ್ಣನ್, ಉಣ್ಣಿ ಕೃಷ್ಣನ್, ಟಿ.ವಿ. ವಿಜಯಕುಮಾರ್, ಪಿ.ವಿ. ಚಂದ್ರ, ವಿನೋದ್ಕುಮಾರ್, ಸುರೇಶ್ ಬಾಬು, ರಾಧಾಕೃಷ್ಣ ಅವರುಗಳನ್ನು ಆಯ್ಕೆ ಮಾಡಲಾಯಿತು.