ಮಡಿಕೇರಿ, ಸೆ. ೧೬: ಪ್ರಜಾಪ್ರಭುತ್ವ ಬಲಪಡಿಸಲು ಸಾಕ್ಷರತೆ ಒಂದು ಪ್ರಮುಖ ಸಾಧನವಾಗಿದೆ ಎಂದು ಕೂಡಿಗೆಯ ಪ್ರಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಎಂ. ಚಂದ್ರಕಾAತ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಜೂನಿಯರ್ ಕಾಲೇಜಿನ ಆವರಣದಲ್ಲಿ ನಡೆದ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಅಂತರರಾಷ್ಟಿçÃಯ ಸಾಕ್ಷರತೆ ದಿನಾಚರಣೆ ಮತ್ತು ಸಪ್ತಾಹವನ್ನು ಜಿಲ್ಲಾ ವಯಸ್ಕರ ಶಿಕ್ಷಣ ಸಹಯೋಗದಲ್ಲಿ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಆಚರಿಸಲಾಯಿತು.
ಸಾಕ್ಷರತೆಯ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಇರಬೇಕು. ಆದ್ದರಿಂದ ಪ್ರತೀ ವರ್ಷ ವಿಶ್ವ ಸಾಕ್ಷರತಾ ದಿನಾಚರಣೆ ಆಚರಿಸಲಾಗುತ್ತದೆ ಎಂದರು.
ಆಲೋಚನೆಗಳು ಮತ್ತು ಭಾವನೆಗಳನ್ನು ಓದುವ ಮತ್ತು ಬರವಣಿಗೆ ಮೂಲಕ ತಿಳಿಸಲು ಸಾಕ್ಷರತೆ ಅತ್ಯವಶ್ಯಕವಾಗಿದೆ.
ಸಾಮಾಜಿಕ ಮತ್ತು ಮಾನವೀಯ ಅಭಿವೃದ್ಧಿಗೆ ಸಾಕ್ಷರತೆ ಒಂದು ಶಕ್ತಿಯಾಗಿದೆ ಎಂದು ಚಂದ್ರಕಾAತ್ ಅವರು ಅಭಿಪ್ರಾಯ ಪಟ್ಟರು. ಪ್ರತಿಯೊಬ್ಬರೂ ಸಾಮಾಜಿಕ, ಆರ್ಥಿಕ ಹಾಗೂ ವೈಯಕ್ತಿಕವಾಗಿ ಅರಿವು ಮೂಡಿ ಸುವುದು ಪ್ರಮುಖ ಉದ್ದೇಶ ವಾಗಿದೆ ಎಂದು ಎಂ. ಚಂದ್ರಕಾAತ್ ಅವರು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಡಿವೈಎಸ್ಪಿ ಮಹೇಶ್ ಕುಮಾರ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹೆಚ್.ಟಿ. ಶಶಿಕಲಾ, ಕೃಷ್ಣಪ್ಪ ಇತರರು ಇದ್ದರು. ಸಾಕ್ಷರತಾ ಗೀತೆ ಹಾಗೂ ಸಾಕ್ಷರತಾ ನಾಟಕವನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ನವ ಸಾಕ್ಷರರನ್ನು ಸನ್ಮಾನಿಸಲಾಯಿತು.