ಮಡಿಕೇರಿ, ಸೆ. ೧೬: ತಮಿಳುನಾಡಿನಲ್ಲಿ ನಡೆದ ರಾಷ್ಟçಮಟ್ಟದ ಐಸಿಎಸ್‌ಇ ವಿಭಾಗದ ಟೆಕ್ವಾಂಡೋ ಪಂದ್ಯಾವಳಿಯಲ್ಲಿ ಸಾಂಚ್ವಿ ಎಸ್ ಹಾನಗಲು ಚಿನ್ನದ ಪದಕವನ್ನು ಗಳಿಸಿದ್ದಾಳೆ.

ಸಾಂಚ್ವಿ ಸೋಮವಾರಪೇಟೆ ತಾಲೂಕಿನ ಹಾನಗಲು ಗ್ರಾಮದ, ಹೆಚ್.ಎಂ. ಸತೀಶ್ ಮತ್ತು ವಿದ್ಯಾರವರ ಪುತ್ರಿ. ಇವರು ಬೆಂಗಳೂರಿನ ವಿದ್ಯಾರಣ್ಯಪುರಂನಲ್ಲಿ ಎಂಇಎಸ್ ಕಿಶೋರ್ ಕೇಂದ್ರ ಪಬ್ಲಿಕ್ ಸ್ಕೂಲ್‌ನಲ್ಲಿ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಮಿನಿ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿದ್ದಾಳೆ.