ಮಡಿಕೇರಿ, ಸೆ. ೧೫: ಮಲಯಾಳಿ ಸಮುದಾಯದ ಪ್ರಮುಖ ಹಬ್ಬವಾದ ತಿರು ಓಣಂ ಅನ್ನು ಜಿಲ್ಲೆಯಾದ್ಯಂತ ಮಲಯಾಳಿ ಸಮುದಾಯದವರು ಸಡಗರದಿಂದ ಆಚರಿಸಿದರು. ಹೂವಿನ ರಂಗೋಲಿ (ಪೂಕಳಂ)ಯನ್ನು ಮನೆ ಎದುರು ರಚಿಸಿ ಮನೆ ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಓಣಂ ಹಬ್ಬದ ವಿಶೇಷ ಖಾದ್ಯಗಳನ್ನು ಮಾಡಿ ಸವಿದು ಹಬ್ಬಾಚರಣೆ ಮಾಡಿದರು.

ಪೊನ್ನಂಪೇಟೆ: ಪೊನ್ನಂಪೇಟೆಯಲ್ಲಿ ಓಣಂ ಹಬ್ಬವನ್ನು ಸಡಗರ ಸಂಭ್ರಮ ಹಾಗೂ ಶ್ರದ್ಧಾಭಕ್ತಿ ಯಿಂದ ಆಚರಿಸಲಾಯಿತು. ಮನೆಯ ಆವರಣದಲ್ಲಿ ರಂಗು ರಂಗಿನ ಹೂವಿನ ರಂಗೋಲಿ(ಪೂಕಳA) ರಚಿಸಿ ಸಂಭ್ರಮಿಸಿದರು.ಕೆಲವು ಮನೆಗಳಲ್ಲಿ ಅಕ್ಕ ಪಕ್ಕದ ಮನೆಯವರು, ಹಾಗೂ ಸ್ನೇಹಿತರನ್ನು ಮನೆಗೆ ಕರೆದು ಸಹ ಭೋಜನ ಮಾಡಿ ಖುಷಿಪಟ್ಟರು.ಇಲ್ಲಿನ ಕುಂದ ರಸ್ತೆಯಲ್ಲಿರುವ ನಾರಾಯಣ ಮತ್ತು ಸುನಂದ ದಂಪತಿಯ ಪುತ್ರಿಯರಾದ ಅಮೃತ ಮತ್ತು ಅರ್ಪಿತಾ ಸಹೋದರಿಯರು ಹೂವುಗಳಿಂದ ಬಿಡಿಸಿದ್ದ ರಂಗೋಲಿ ನೋಡುಗರ ಗಮನ ಸೆಳೆಯಿತು. ಇವರು ಓಣಂ ಪ್ರಯುಕ್ತ ತಮ್ಮ ಕುಟುಂಬ ಸದಸ್ಯರು, ಸಂಬAಧಿಕರು ಹಾಗೂ ಸ್ನೇಹಿತರಿಗೆ ವಿವಿಧ ಮನರಂಜನೆ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ನಂತರ ಎಲ್ಲರೂ ಸಹ ಭೋಜನ ಮಾಡಿ ಸಂಭ್ರಮಿಸಿದರು.

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಲೆಯಾಳಿ ಸಮುದಾಯದವರು ಸಂಭ್ರಮದಿAದ ಓಣಂ ಹಬ್ಬವನ್ನು ಆಚರಿಸಿದರು. ಬೆಳಿಗ್ಗೆ ಸಮೀಪದ ದೇವಾಲಯಗಳಿಗೆ ತೆರಳಿ ಪೂಜಾ ಕಾರ್ಯದಲ್ಲಿ ಭಾಗಿಯಾದರು. ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ನಂತರ ಮನೆಯಲ್ಲಿ ವಿಶೇಷ ಭಕ್ಷö್ಯ ಭೋಜನ ತಯಾರಿಸಿ ಸಂಬAಧಿಕರು, ಸ್ನೇಹಿತರೊಂದಿಗೆ ಸವಿದರು. ಮನೆಗಳ ಮುಂದೆ ವಿವಿಧ ಹೂವುಗಳಿಂದ ರಂಗೋಲಿ ರಚಿಸಿ, ಬಲಿ ಚಕ್ರವರ್ತಿಯನ್ನು ಸ್ಮರಿಸಿದರು.

(ಮೊದಲ ಪುಟದಿಂದ)

ಶನಿವಾರಸAತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಮಲಯಾಳಿ ಸಮುದಾಯದವರು ತಿರುಓಣಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಸಂಪ್ರದಾಯಬದ್ಧವಾಗಿ ಆಚರಿಸಿ ಸಂಭ್ರಮಿಸಿದರು. ಹಬ್ಬದ ಪುರಾಣ, ಇತಿಹಾಸದ ಹಿನ್ನಲೆ ರಾಜ ಮಹಾಬಲಿ ಭೂಮಿಗೆ ಬರುವನೆಂಬ ನಂಬಿಕೆ ತಿರುಓಣಂ ಆಚರಣೆೆ ಕಾರಣವಾಗಿದೆ.

ಮಲೆಯಾಳಿ ಸಮುದಾಯದವರು ಬೆಳಿಗ್ಗೆ ಅಭ್ಯಂಜನ ಸ್ನಾನ ಮಾಡಿ, ಸಾಂಪ್ರಾದಾಯಿಕ ಹೊಸ ವಸ್ತç ಧರಿಸಿ ಪೂಜೆ ಮಾಡಿದರು.ಪ್ರತಿ ಮನೆಯಂಗಳದಲ್ಲೂ ಹೆಣ್ಣುಮಕ್ಕಳು ವೈವಿಧ್ಯಮಯ ಬಣ್ಣಬಣ್ಣದ ಹೂಗಳಿಂದ ಆಕರ್ಷಕ ರಂಗೋಲಿ ಬಿಡಿಸಿದ್ದರು. ಓಣಂ ಅಂಗವಾಗಿ ಸದ್ಯ ಬೋಜನ ಸವಿದು ಸಂಭ್ರಮಿಸಿದರು.