ಮಡಿಕೇರಿ, ಸೆ. ೧೪: ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕುರುವಂಕ ಗ್ರಾಮದ ಶಾನಬೋಗ ಶ್ರೀ ದಾಸಪ್ಪ ದತ್ತಿ ವತಿಯಿಂದ ಹುಲಿತಾಳ ಉದಯಕುಮಾರ್ ಅವರಿಗೆ ರಜತ ಕೀರಿಟ ಸಮರ್ಪಣೆ ಹಾಗೂ ಜ್ಯೋತಿಷ್ಯ ರತ್ನಾಕರ ಪ್ರಶಸ್ತಿ ಪ್ರದಾನ ಸಮಾರಂಭ ತಾ. ೧೫ ರಂದು ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಶ್ರೀ ಲಕ್ಷಿö್ಮÃನರಸಿಂಹ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ ೧೧ ಗಂಟೆಗೆ ಅಖಿಲ ರವಿ ಆಯುರ್ ಶಾಲೆಯ ಡಾ. ಎ.ಆರ್. ರಾಜಾರಾಮ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಉದ್ಘಾಟಿಸಲಿದ್ದಾರೆ ಎಂದು ಶಾನ್ಬೋಗ್ ಶ್ರೀ ದಾಸಪ್ಪ ದತ್ತಿಯ ಕೆ.ಪಿ. ವೆಂಕಟೇಶ ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.