ಮಡಿಕೇರಿ, ಸೆ. ೧೪: ಖಾಸಗಿ ಸಂಸ್ಥೆ ಉದ್ಯೋಗಿಯಾಗಿದ್ದ ಕೇರಳ ಮೂಲದ ವಿಚ್ಛೇದಿತ ಮಹಿಳೆಗೆ ವಂಚನೆ ಮಾಡಿರುವ ಆರೋಪದ ಮೇಲೆ ಕೂಡಿಗೆ ನಿವಾಸಿ ಮೊಹಮ್ಮದ್ ರಾಫಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆ ಕುಶಾಲನಗರದಲ್ಲಿ ನೆಲೆಸಿದ್ದರು. ಬಸ್‌ನಲ್ಲಿ ಮಹಿಳೆಯ ಪರಿಚಯ ಮಾಡಿಕೊಂಡಿದ್ದ ಆರೋಪಿ ತನ್ನ ಧರ್ಮದ ಬಗ್ಗೆ ಸುಳ್ಳು ಹೇಳಿ ಆಕೆಗೆ ಹತ್ತಿರವಾಗಿದ್ದ. ನಂತರ ಆಕೆಯಿಂದ ಸುಮಾರು ರೂ. ೧೨ ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ಅವುಗಳನ್ನು ಗಿರವಿ ಇಟ್ಟು ಆ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹುಣಸೂರಿನ ಲಾಡ್ಜ್ನಲ್ಲಿ ತಂಗಿದ್ದ ವೇಳೆ ಆರೋಪಿಯ ಬ್ಯಾಗ್‌ನಲ್ಲಿದ್ದ ಆಧಾರ್ ಹಾಗೂ ಪ್ಯಾನ್‌ಕಾರ್ಡ್ ಅನ್ನು ಮಹಿಳೆ ಪರಿಶೀಲಿಸಿದಾಗ, ಆತ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂದು ಗೊತ್ತಾಗಿದೆ. ದಾಖಲೆಯೊಂದರಲ್ಲಿ ಸಿಕ್ಕ ದೂರವಾಣಿ ಸಂಖ್ಯೆಗೆ ಮಹಿಳೆ ಕರೆ ಮಾಡಿದಾಗ ಆತನಿಗೆ ಆಗಲೇ ವಿವಾಹವಾಗಿದ್ದ ವಿಷಯ ಗೊತ್ತಾಗಿದೆ. ಆತನ ಮೊದಲ ಹೆಂಡತಿಯಿAದ ಫೋನ್ ಮೂಲಕ ಸಂಪೂರ್ಣ ಮಾಹಿತಿ ಪಡೆದ ಬಳಿಕ ವಿವಾಹವಾಗಲು ಆಕೆ ನಿರಾಕರಿಸಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಲಾಡ್ಜ್ನಲ್ಲಿ ಮಹಿಳೆಯ ಮೇಲೆ ಆರೋಪಿ ಅತ್ಯಾಚಾರ ಹಾಗೂ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಆಕೆ ಜೋರಾಗಿ ಕೂಗಿಕೊಂಡಾಗ ಲಾಡ್ಜ್ ಸಿಬ್ಬಂದಿ ಸಹಾಯಕ್ಕೆ ಬಂದಿದ್ದಾರೆ. ನಮಗೆ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ತೆರಳಿ ಆತನನ್ನು ವಶಕ್ಕೆ ಪಡೆಯಲಾಯಿತು. ನಂತರ ಎಫ್‌ಐಆರ್ ದಾಖಲಿಸಿ ಆತನನ್ನು ಬಂಧಿಸಲಾಯಿತು. ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.