*ಗೋಣಿಕೊಪ್ಪ, ಸೆ. ೧೪ : ಗೋಣಿಕೊಪ್ಪ ದಸರಾ ಯಶಸ್ವಿಗೆ ಉಪ ಸಮಿತಿಗಳ ನಿರ್ವಹಣೆ ಮುಖ್ಯ ಎಂದು ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಹೇಳಿದರು.

ಗ್ರಾಮ ಪಂಚಾಯಿತಿ ಹಳೇ ಕಟ್ಟಡ ಸಭಾಂಗಣದಲ್ಲಿ ಆಯೋಜಿಸಿದ್ದ ದಸರಾ ಉಪ ಸಮಿತಿಗಳ ಪ್ರಮುಖರ ಸಭೆಯಲ್ಲಿ ಮಾತನಾಡಿ, ಚಾಮುಂಡೇಶ್ವರಿ ಆರಾಧನೆಯೊಂದಿಗೆ ಆಚರಿಸುವ ದಸರಾ ಜನೋತ್ಸವ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದರು. ಈಗಾಗಲೇ ಬಹುತೇಕ ಸಮಿತಿಗಳ ರಚನೆಯಾಗಿದ್ದು ತಂಡವಾಗಿ ಕಾರ್ಯಪ್ರವೃತ್ತವಾಗಿದೆ. ಉಳಿದ ಸಮಿತಿಗಳಿಗೆ ಸಂಚಾಲಕರ ಆಯ್ಕೆ ಮಾಡಲಾಗುವುದು. ಒಂದು ತಂಡವಾಗಿ ದಸರಾ ಯಶಸ್ವಿಗೆ ಕೈಜೋಡಸಬೇಕು ಎಂದರು ಮನವಿ ಮಾಡಿಕೊಂಡರು.

ಪೂಜಾ ಸಮಿತಿ, ಸ್ವಾಗತ ಸಮಿತಿ, ಸಾಂಸ್ಕೃತಿಕ, ಪ್ರಚಾರ ಸಮಿತಿ, ಆಹಾರ ಸಮಿತಿ, ಸ್ವಚ್ಚತೆ ಸಮಿತಿ, ವೇದಿಕೆ ಸಮಿತಿ, ಮಹಿಳಾ ದಸರಾ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ಪ್ರಮುಖರು ಭಾಗವಹಿಸಿದ್ದರು.

ಕಾವೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಂದಾ ದೇವಯ್ಯ, ಉಪಾಧ್ಯಕ್ಷರಾದ ಶಿವಾಜಿ, ಸ್ವಾಗತ ಸಮಿತಿ ಸಂಚಾಲಕ ಶರತ್‌ಕಾಂತ್, ಮಹಿಳಾ ದಸರಾ ಅಧ್ಯಕ್ಷೆ ಮಂಜುಳ, ಖಜಾಂಚಿ ಚೆಪ್ಪುಡಿರ ಧ್ಯಾನ್ ಸುಬ್ಬಯ್ಯ, ಸಲಹೆಗಾರ ಬಿ. ಎನ್. ಪ್ರಕಾಶ್ ಇದ್ದರು.