ಮಡಿಕೇರಿ, ಸೆ. ೧೧: ವನ್ಯಜೀವಿ ಹಾವಳಿ, ಹವಾಮಾನ ವೈಪರಿತ್ಯ ಸೇರಿದಂತೆ ಹಲವು ಸಂಕಷ್ಟ, ಸವಾಲುಗಳ ನಡುವೆ ಅರಣ್ಯ ಇಲಾಖೆ ಸಿಬ್ಬಂದಿ ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸಿ ಆಂತರಿಕ ಭದ್ರತೆ ಕಾಪಾಡುವುದರೊಂದಿಗೆ ಪರಿಸರ ಉಳಿವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಅರಣ್ಯ ಭವನದಲ್ಲಿ ನಡೆದ ರಾಷ್ಟಿçÃಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಚ ಅರ್ಪಿಸಿ ಮಾತನಾಡಿದ ಅವರು, ಅರಣ್ಯ, ಪರಿಸರ ಉಳಿವಿಗಾಗಿ ತ್ಯಾಗ, ಬಲಿದಾನಗೈದವರ ಸ್ಮರಿಸುವ ಉದ್ದೇಶದಿಂದ ಅರಣ್ಯ ಹುತಾತ್ಮರ ದಿನ ಆಚರಿಸಲಾಗುತ್ತಿದೆ. ದೇಶದ ಗಡಿ ರಕ್ಷಣೆಗಾಗಿ ವಿವಿಧ ಸೇನಾ ಪಡೆಗಳಿವೆ. ಆಂತರಿಕ ಭದ್ರತೆ ಕಾಯಲು ಅರಣ್ಯ ಇಲಾಖೆ ಬದ್ಧತೆಯಿಂದ ದುಡಿಯುತ್ತಿದೆ. ಜಿಲ್ಲೆಯಲ್ಲಿ ವನ್ಯಜೀವಿ ಹಾವಳಿ ಹೆಚ್ಚಿದ್ದು, ಸಂಕಷ್ಟ, ಸವಾಲಿನ ನಡುವೆ ಕೆಲಸ ಮಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಹವಾಮಾನ ವೈಪರಿತ್ಯದಂತಹ ಸನ್ನಿವೇಶದಲ್ಲೂ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹಗಲಿರುಳು ಶ್ರಮಿಸಿದ್ದಾರೆ. ಅಡ್ಡಿ-ಆಂತಕಗಳಿಗೆ ಜಗ್ಗದೆ ಪ್ರತಿಕೂಲ ಪರಿಣಾಮದ ನಡುವೆಯೂ ಧೈರ್ಯ, ಸಾಹಸದಿಂದ ಅರಣ್ಯ ಇಲಾಖೆ ಕಾರ್ಯಾಚರಿಸುತ್ತಿರುವುದು ಶ್ಲಾಘನೀಯ. ಅರಣ್ಯ ಇಲಾಖೆ ಸಿಬ್ಬಂದಿ ಕ್ಷೇಮಾಭಿವೃದ್ಧಿಗೆ ಜಿಲ್ಲಾಡಳಿತ, ಜಿ.ಪಂ. ಸಕರಾತ್ಮಕವಾಗಿ ಸಹಕರಿಸುತ್ತದೆ ಎಂದು ಭರವಸೆಯ ಮಾತುಗಳನ್ನಾಡಿದರು.
ಮಡಿಕೇರಿ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಮಾತನಾಡಿ, ೧೭೩೦ರ ಸೆಪ್ಟೆಂಬರ್ ೧೧ರ ಜೋಧಪುರ್ನ ಮಹರಾಜ ಅಭಯಸಿಂಗ್ನ ಹೊಸ ಅರಮನೆ ನಿರ್ಮಾಣಕ್ಕೆ
(ಮೊದಲ ಪುಟದಿಂದ) ಕೆಜ್ರಿ ಪ್ರಾಂತ್ಯದಲ್ಲಿ ಬೆಳೆದಿದ್ದ ಮರಗಳನ್ನು ಕಡಿಯಲು ವಿರೋಧ ವ್ಯಕ್ತಪಡಿಸಿದ್ದ ಬಿಷ್ಣೋಯಿ ಸಮುದಾಯದ ೨೬೩ ಮಂದಿಯನ್ನು ಸೈನಿಕರು ಹತ್ಯೆಗೈದಿದ್ದರು. ಬಿಷ್ಣೋಯಿಗಳ ತ್ಯಾಗ, ಬಲಿದಾನ ಸ್ಮರಿಸುವ ನಿಟ್ಟಿನಲ್ಲಿ ೧೯೬೬ರಲ್ಲಿ ಭಾರತ ಸರಕಾರ ಹುತಾತ್ಮರ ದಿನಾಚರಣೆ ಆರಂಭಿಸಿತು. ಅರಣ್ಯ ಸಂಪತ್ತು ಉಳಿವಿಗೆ ಹಲವು ಅರಣ್ಯ ಸಿಬ್ಬಂದಿಗಳು ಪ್ರಾಣಾರ್ಪಣೆ ಮಾಡಿದ್ದಾರೆ. ದಂತಚೋರ ವೀರಪ್ಪನ್ ಕುತಂತ್ರದಿAದ ಅರಣ್ಯಾಧಿಕಾರಿ ಶ್ರೀನಿವಾಸ್ ಮೃತಪಟ್ಟರು. ಈ ರೀತಿ ವಿವಿಧ ಕಾರ್ಯಾಚರಣೆ ಹಾಗೂ ಪರಿಸರ ಉಳಿವಿಗಾಗಿ ರಾಜ್ಯದ ಹಲವು ಅರಣ್ಯ ಇಲಾಖೆ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಕಾಡಾನೆ ಕಾರ್ಯಾಚರಣೆ ವೇಳೆ ಜಿಲ್ಲೆಯ ಅರಣ್ಯ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದರು.
೧೯೬೬ ರಿಂದ ಈವರಗೆ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರತರಾಗಿದ್ದಾಗ ಹುತಾತ್ಮರಾದ ರಾಜ್ಯದ ೬೧ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸ್ಮರಿಸಿ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪುಷ್ಪ ನಮನ : ಅರಣ್ಯ ಭವನದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಗಣ್ಯರು, ಅರಣ್ಯ ಇಲಾಖೆ ಸಿಬ್ಬಂದಿಗಳು ಪುಷ್ಪಗುಚ್ಚ ಅರ್ಪಿಸಿ ನಮನ ಸಲ್ಲಿಸಿದರು.
ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪವಿಭಾಗಾಧಿಕಾರಿ ವಿನಾಯಕ್ ನರ್ವಾಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಭಾಸ್ಕರ್, ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಹೆಚ್, ಜಗನ್ನಾಥ್, ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರು, ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೈಯದ್ ಅಹಮ್ಮದ್ ಷಾ ಹುಸೈನಿ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಪಿ. ಅಭಯಂಕರ್, ಸೋಮವಾರಪೇಟೆ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪಿ. ಗೋಪಾಲ್, ಭಾಗಮಂಡಲ ವಲಯ ಅರಣ್ಯಾಧಿಕಾರಿ ಟಿ.ಎಂ. ರವೀಂದ್ರ, ಮೀನುಕೊಲ್ಲಿ ಉಪವಲಯ ಅರಣ್ಯಾಧಿಕಾರಿ ಕೆ.ಎಸ್. ಸುಬ್ರಾಯ, ಗಸ್ತು ಅರಣ್ಯ ಪಾಲಕ ಜಗನ್ನಾಥ, ಅರಣ್ಯ ವೀಕ್ಷಕ ಯು.ಸಿ. ವಾಸುದೇವ್, ಕಚೇರಿ ಸಿಬ್ಬಂದಿ ಪರವಾಗಿ ಪಿ.ಪಿ. ಸರೋಜ, ಕ್ಷೇಮಾಭಿವೃದ್ಧಿ ನೌಕರರ ಪರವಾಗಿ ಎ.ಬಿ. ಸುಧಾ, ಡಿ. ದರ್ಜೆ ನೌಕರರ ಪರವಾಗಿ ಬಸವರಾಜು, ವಾಹನ ಚಾಲಕರ ಪರವಾಗಿ ಮಣಿ, ಹೊರಗುತ್ತಿಗೆ ನೌಕರರ ಪರವಾಗಿ ಜೀವನ್ ಪುಷ್ಪಗುಚ್ಚವನ್ನು ಅರ್ಪಿಸಿ ಹುತಾತ್ಮರಿಗೆ ಗೌರವ ಸಲ್ಲಿಸಿದರು.