ಕಣಿವೆ, ಸೆ. ೧೧ : ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲ್ಲಿ ಒಂದಾದ ದುಬಾರೆಯ ಸಾಕಾನೆ ಶಿಬಿರದಲ್ಲಿನ ಪ್ರವಾಸಿಗರ ಪ್ರವೇಶ ಶುಲ್ಕ ಸೇರಿದಂತೆ ಇನ್ನಿತರ ದರಗಳನ್ನು ದುಪ್ಪಟ್ಟು ಪ್ರಮಾಣದಲ್ಲಿ ಏರಿಕೆ ಮಾಡಿರುವ ಅರಣ್ಯ ಇಲಾಖೆಯ ಕ್ರಮದ ವಿರುದ್ಧ ಸ್ಥಳೀಯ ವ್ಯಾಪಾರಿಗಳು, ವರ್ತಕರು, ರ‍್ಯಾಫ್ಟಿಂಗ್ ಅಸೋಸಿಯೇಷನ್ ಹಾಗೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿದ್ದು ಈ ಹಿನ್ನೆಲೆ ಶಾಸಕ ಡಾ. ಮಂತರ್ ಗೌಡ ದುಬಾರೆಗೆ ಆಗಮಿಸಿ ಚರ್ಚಿಸಿದರು.

ಈ ಸಂದರ್ಭ ಸ್ಥಳೀಯ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಟ್ಟಡ್ಕ ವಿಶ್ವ ಮಾತನಾಡಿ, ದೂರದಿಂದ ದುಬಾರೆಗೆ ಧಾವಿಸುವ ಪ್ರವಾಸಿಗರಿಗೆ ಅರಣ್ಯಾಧಿಕಾರಿಗಳು ಮನಬಂದAತೆ ದರ ವಿಧಿಸಿ ವಸೂಲಿ ಮಾಡುತ್ತಿರುವು ದರಿಂದ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿದೆ.

ಇದರಿಂದ ಸ್ಥಳೀಯ ವ್ಯಾಪಾರ ಚಟುವಟಿಕೆಗಳ

(ಮೊದಲ ಪುಟದಿಂದ) ಮೇಲೆ ವೃತಿರಿಕ್ತ ಪರಿಣಾಮ ಬೀರುತ್ತಿದೆ. ನದಿ ದಾಟಿಸುವ ಅರಣ್ಯ ಇಲಾಖೆಯ ಯಾಂತ್ರಿಕ ದೋಣಿಗೆ ಮೊದಲು ಇದ್ದ ರೂ. ೧೦೦ ಬದಲು ಈಗ ಏಕಾಏಕಿ ರೂ. ೨೭೦ ಏರಿಕೆ ಮಾಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಇನ್ನು ಪ್ರವಾಸಿಗರು ಕ್ಯಾಮರಾದಲ್ಲಿ ಪೋಟೋ ಕ್ಲಿಕ್ಕಿಸಿದರೆ ರೂ. ೪೦೦, ಸಾಕಾನೆಗಳಿಗೆ ಫೀಡಿಂಗ್ ಮಾಡಲು ರೂ. ೨೦೦ ಹೀಗೆ ಇನ್ನೂ ವಿವಿಧ ದರ ಪಟ್ಟಿಗಳನ್ನು ಏರಿಸಲಾಗಿದೆ.

ಇದರಿಂದಾಗಿ ಕೊಡಗು ಜಿಲ್ಲೆಗೆ ಪ್ಯಾಕೇಜ್ ಮೇಲೆ ಬರುವ ಪ್ರವಾಸಿಗರನ್ನು ಪ್ರವಾಸಿ ಏಜೆನ್ಸಿಗಳು ದುಬಾರೆ ಹೊರತುಪಡಿಸಿ ಉಳಿಧೆಡೆಗಳಿಗೆ ಕರೆದೊಯ್ಯುತ್ತಿದ್ದಾರೆ ಎಂದು ಪಂಚಾಯಿತಿ ಅಧ್ಯಕ್ಷ ವಿಶ್ವ ಬೇಸರ ವ್ಯಕ್ತಪಡಿಸಿದರು.

ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ತೂಗು ಸೇತುವೆ ನಿರ್ಮಿಸಿ ಕೊಡುವ ಮೂಲಕ ಇಂತಹ ದಂಧೆಗಳನ್ನು ತಡೆಗಟ್ಟಬೇಕೆಂದು ವಿಶ್ವ ಶಾಸಕರಲ್ಲಿ ಒತ್ತಾಯಿಸಿದರು. ಈ ಸಂದರ್ಭ ಕುಶಾಲನಗರ ನಗರಾಭಿವೃದ್ದಿ ಅಧ್ಯಕ್ಷರೂ ಆದ ದುಬಾರೆಯ ವ್ಯಾಪಾರೋದ್ಯಮಿ ಪ್ರಮೋದ್ ಮುತ್ತಪ್ಪ ಶಾಸಕರೊಂದಿಗೆ ಕೆಲವೊಂದು ವಿಚಾರಗಳ ಕುರಿತು ವಿವರಣೆ ನೀಡಿದರು.

ಸಾರ್ವಜನಿಕರಿಂದ ಅಹವಾಲು ಆಲಿಸಿದ ಶಾಸಕ ಡಾ. ಮಂತರ್ ಗೌಡ ಪ್ರತಿಕ್ರಿಯಿಸಿ, ದುಬಾರೆಗೆ ಬರುವ ಪ್ರವಾಸಿಗರ ಸಂಖ್ಯೆ ಯಾವ ಕಾರಣಕ್ಕೂ ಕುಸಿತವಾಗಬಾರದು.

ಈಗಾಗಲೇ ಹೆಚ್ಚಳವಾಗಿರುವ ದರ ಪಟ್ಟಿಯ ಕುರಿತು ಮರುಪರಿಶೀಲನೆ ನಡೆಸುವಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನಕ್ಕೆ ಬರಲು ಹದಿನೈದು ದಿನಗಳ ಕಾಲಾವಕಾಶ ಕೊಡಿ ಎಂದು ಕೇಳಿಕೊಂಡರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕುಶಾಲನಗರ ತಾಲೂPÄ ಅಧ್ಯಕ್ಷ ವಿ.ಪಿ.ಶಶಿಧರ್ ಸೇರಿದಂತೆ ಇನ್ನಿತರರು ಇದ್ದರು.