ಮಡಿಕೇರಿ, ಆ. ೯: ಸ್ವಾತಂತ್ರೊö್ಯÃತ್ಸವದ ಅಂಗವಾಗಿ ಗೋಣಿಕೊಪ್ಪದ ಲಯನ್ಸ್ ಶಾಲೆ ವತಿ ಯಿಂದ ಆಯೋಜಿಸ ಲಾಗಿದ್ದ ತಾಲೂಕು ಮಟ್ಟದ ಅಂತರ ಶಾಲಾ

ದೇಶಭಕ್ತಿಗೀತೆ ಮತ್ತು ಭಾಷಣ ಸ್ಪರ್ಧೆಯಲ್ಲಿ ವೀರಾಜಪೇಟೆಯ ಕಾವೇರಿ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ, ವಿವಿಧ ವಿಭಾಗಗಳಲ್ಲಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

ಪ್ರೌಢಶಾಲಾ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ೧೦ನೇ ತರಗತಿಯ ವಿದ್ಯಾರ್ಥಿಗಳಾದ ಕ್ಷಮಾ ಕಾವೇರಮ್ಮ ಪಿ.ಪಿ. ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು, ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ ನಿಶಾನ್ ಎಂ.ಎನ್. ಪ್ರಥಮ ಸ್ಥಾನವನ್ನು, ದೇಶಭಕ್ತಿ ಗೀತೆಯಲ್ಲಿ ೮ನೇ ತರಗತಿಯ ಹನಿಯ ಎ. ತೃತೀಯ ಸ್ಥಾನವನ್ನು ಹಾಗೂ ೭ನೇ ತರಗತಿಯ ದಕ್ಷ್ ಬೋಜಣ್ಣ ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ಈ ಸಂದರ್ಭ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪಾರ್ವತಿ ಯು.ಪಿ. ಹಾಗೂ ಸಹ ಶಿಕ್ಷಕಿಯರಾದ ನಿಶಾ ಕೆ.ಎಸ್. ಮತ್ತು ಸುರಯ್ಯ ಎಂ.ಕೆ. ಉಪಸ್ಥಿತರಿದ್ದರು.