ನಾಪೋಕ್ಲು, ಸೆ. ೯: ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೩ -೨೪ ಸಾಲಿನಲ್ಲಿ ರೂ ೩೬.೨೯ ಲಕ್ಷ ಲಾಭ ಗಳಿಸಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಮಾಳೆಯಂಡ ಎಂ ಅಪ್ಪಚ್ಚ ಅವರು ತಿಳಿಸಿದರು. ಸಂಘದಲ್ಲಿ ೧೧೯೨ ಜನ ಸದಸ್ಯರಿದ್ದು ೧ ಕೋಟಿ ೭೧ ಲಕ್ಷ ರೂ ಶೇರು ಹಣ ಇರುತ್ತದೆ. ಸಂಘದಲ್ಲಿ ಒಟ್ಟು ದುಡಿಯುವ ಬಂಡವಾಳ ೨೦ ಕೋಟಿ ಇರುತ್ತದೆ, ಸಂಘವು ಕೃಷಿ ಸಾಲವನ್ನು ೪೮೦ ಜನ ರೈತರಿಗೆ ೧೦ ಕೋಟಿ ೪೪ ಲಕ್ಷ ಸಾಲ ವಿತರಿಸಿದ್ದು, ಜಾಮೀನು ಸಾಲ ಮತ್ತು ಗೊಬ್ಬರ ಸಾಲ ೯೦ ಲಕ್ಷ ರೂ ವಿತರಿಸಲಾಗಿದೆ.
ಸಂಘವು ಡಿಸಿಸಿ ಬ್ಯಾಂಕ್ ನಿಂದ ೧೦ ಕೋಟಿ ೪೦ ಲಕ್ಷ ರೂ. ಸಾಲ ಪಡೆದುಕೊಂಡು ಪೂರ್ತಿಯಾಗಿ ಹಣವನ್ನು ಪಾವತಿಸಿದೆ, ಸಂಘದ ಸದಸ್ಯರಿಗೆ ಶೇ. ೧೨ ಡಿವಿಡೆಂಡ್ ನೀಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು. ಸಂಘದಲ್ಲಿ ಗ್ರಾಹಕರಿಗೆ ಗೊಬ್ಬರ ಸೌಲಭ್ಯ ಹಾಗೂ ಕೃಷಿ ಉತ್ಪನ್ನಕ್ಕೆ ಬೇಕಾದ ಸಾಮಗ್ರಿಗಳು ದೊರೆಯುತ್ತದೆ ಹಾಗೂ ವಾಣಿಜ್ಯ ಮಳಿಗೆಗಳು ಬಾಡಿಗೆಗೆ ಲಭ್ಯವಿರುತ್ತದೆ ಎಂದು ಹೇಳಿದರು.ಮತ್ತು ಸಂಘದ ಸದಸ್ಯರುಗಳ ಮಕ್ಕಳು ೧೦ ನೇ ತರಗತಿ ಮತ್ತು ೨ ನೇ ಪಿ.ಯು.ಸಿ.ಎಲ್ಲಾ ಅಂತಿಮ ಪದವಿ ಹಾಗೂ ಪೋಸ್ಟ್ ಪದವಿಗಳ ಜೊತೆಗೆ ಮೆಡಿಕಲ್, ಇಂಜಿನಿಯರಿAಗ್, ಡೆಂಟಲ್ಗಳಲ್ಲಿ ಅಂತಿಮ ಪರೀಕ್ಷೆಯಲ್ಲಿ ಹೆಚ್ಚು ಅಂಕ ಸಂಪಾದಿಸಿ ತೇರ್ಗಡೆಯಾದ ಮೊದಲ ಮೂರು ವಿದ್ಯಾರ್ಥಿಗಳಗೆ ಬಹುಮಾನ ನೀಡುತ್ತೇವೆ. ದಿನಾಂಕ: ೧೫.೦೯.೨೦೨೪ರ ಒಳಗೆ ಸಂಘಕ್ಕೆ ಅಂಕಪಟ್ಟಿಯನ್ನು ತಲುಪಿಸಬೇಕೆಂದು ಹೇಳಿದರು. ಸಂಘದ ಮಹಾಸಭೆ ತಾ. ೨೨ರಂದು ಸಂಘದ ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಚೀಯಕಪೂವಂಡ ವಿ ರೀನಾ, ನಿರ್ದೇಶಕರುಗಳಾದ ಬದ್ದಂಜೆಟ್ಟಿರ ಎ ತಿಮ್ಮಯ್ಯ , ಎ ಜಿ ಟಿಂಶ, ಚೀಯಕಪೂವಂಡ ಡಿ ನಾಚಪ್ಪ, ಕರವಂಡ ಜಿ ಅಪ್ಪಣ್ಣ, ಮಚ್ಚುರ ಎಂ ರವೀಂದ್ರ, ಮಣವಟ್ಟೀರ ಬಿ ದೀಪಕ್ ಪೊನ್ನಪ್ಪ, ಮಣವಟ್ಟೀರ ಕೆ ದಯಾ ಚಿಣ್ಣಪ್ಪ, ಚೀಯಕಪೂವಂಡ ಎ ಸುನಿಲ್, ಅಪ್ಪುಮಣಿಯಂಡ ಬಿ ಕಾವೇರಮ್ಮ, ಪಿ ಎಂ ವಿಜು ಹಾಗು ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಮತ್ತು ಕೊಡಗು ಡಿ ಸಿ ಸಿ ಬ್ಯಾಂಕ್ ನ ಮೇಲ್ವಿಚಾರಕರು ಎಂ ಬಿ ಅಯ್ಯಪ್ಪನವರು ಹಾಗೂ ಸಂಘದ ಸಿಬ್ಬಂದಿಗಳು ಹಾಜರಿದ್ದರು.