ನಾಪೋಕ್ಲು: ಇಲ್ಲಿಗೆ ಸಮೀಪದ ಕುಂಜಿಲದ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಅತಿಥಿಯಾಗಿದ್ದ ಆಗಮಿಸಿದ ನಿವೃತ್ತ ಕನ್ನಡ ಶಿಕ್ಷಕರಾದ ಟಿ.ಆರ್ ಸುಬ್ಬಮ್ಮ, ಶಾಲಾ ಮುಖ್ಯೋಪಾಧ್ಯಾಯಿನಿ ಕವಿತಾ, ಶಾಲೆಯ ನಿರ್ವಾಹಕ ಅಧಿಕಾರಿಯಾದ ಶಾಹಿದ್ ಮಾತನಾಡಿದರು.

ಈ ಸಂದರ್ಭ ವಿದ್ಯಾರ್ಥಿಗಳಿಂದ ಭಾಷಣ, ಹಾಡು, ನೃತ್ಯ, ಕ್ರೀಡೆಗಳು ನಡೆದವು. ಸುಂಟಿಕೊಪ್ಪ: ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀಲತಾ ಅವರು, ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುವುದು ವಿದ್ಯಾರ್ಥಿಗಳು ಗುರುಗಳಿಗೆ ನೀಡುವ ಗೌರವವಾಗಿದೆ ಎಂದರು.

ಸಮಾರಂಭಕ್ಕೂ ಮೊದಲು ಸರ್ವಪಲ್ಲಿ ರಾಧಕೃಷ್ಣ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಸಲ್ಲಿಸಲಾಯಿತು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಉಪನ್ಯಾಸಕರಿಗೆ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಏರ್ಪಡಿಸಿದರು. ಅಲ್ಲದೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿದ್ಯಾರ್ಥಿಗಳು ಆಯೋಜಿಸಿದ ವಿವಿಧ ಚಟುವಟಿಕೆಗಳಲ್ಲಿ ಉಪನ್ಯಾಸಕರುಗಳಾದ ಅಭಿಷೇಕ್ ಮತ್ತು ಸುಚಿತ್ರ ಜಯಗಳಿಸಿ ಬಹುಮಾನ ಪಡೆದುಕೊಂಡರು. ಮಡಿಕೇರಿ: ಸ್ಕೆöÊಗೋಲ್ಡ್ ಅಂಡ್ ಡೈಮಂಡ್ ನ ಮಡಿಕೇರಿ ಶಾಖೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಹಿರಿಯ ಶಿಕ್ಷಕರಾದ ಮೇರಿ ಲೋಬೊ ಮತ್ತು ಸಿಸ್ಟರ್ ಗ್ರೆಟ್ಟ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಉದ್ಯಮಿ ದಿನೇಶ್ ಕಾರ್ಯಪ್ಪ ಭಾಗವಹಿಸಿ ಸನ್ಮಾನ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಈ ಸಂದರ್ಭ ಮಾತನಾಡಿದ ಅವರು ನಾವು ಕಾಣುತ್ತಿರುವ ಮಾಣಿಕ್ಯಗಳು ಶಿಕ್ಷಕರು. ಇಂತಹ ಶಿಕ್ಷಕರನ್ನು ಇನ್ನಷ್ಟು ಗುರುತಿಸುವ ಕೆಲಸ ಆಗಬೇಕಿದೆ ಎಂದರು. ಸನ್ಮಾನ ಸ್ವೀಕರಿಸಿದ ಸಿಸ್ಟರ್ ಮೇರಿ ಲೋಬೊ ಹಾಗೂ ಗ್ರೇಟ್ಟ ಅವರುಗಳು ಎಲೆ ಮರೆ ಕಾಯಿಯಂತೆ ನಾವು ಮಾಡಿದ ಕೆಲಸಕ್ಕೆ ನಮ್ಮನ್ನು ಗುರುತಿಸಿ ಸನ್ಮಾನಿಸಿರುವುದು ಹೆಚ್ಚು ಸಂತಸ ತಂದಿದೆ ಎಂದರು.

ವಿವಿಧೆಡೆಯಿಂದ ಆಗಮಿಸಿದ ಶಿಕ್ಷಕರಿಗಾಗಿ ವಿಭಿನ್ನ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಭಾಗವಹಿಸಿದ ಶಿಕ್ಷಕರು ತಮ್ಮ ವೃತ್ತಿ ಜೀವನದ ಅನುಭವದ ಜೊತೆಗೆ ಸ್ಕೆöÊಗೋಲ್ಡ್ ನೊಂದಿಗೆ ತಮ್ಮ ಸಂಬAಧವನ್ನು ಮನ ಬಿಚ್ಚಿ ಮಾತನಾಡಿ ಆಯೋಜಿಸಿದ್ದ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕಾರ್ಯಕ್ರಮ ದ ಮುಖ್ಯ ಆಕರ್ಷಣೆಯಾಗಿ ಕೂಪನ್ ಮೂಲಕ ಲಕ್ಕಿ ಟೀಚರ್ ಅನ್ನು ಆಯ್ಕೆ ಮಾಡಲಾಯಿತು . ಈ ಬಹುಮಾನವನ್ನು ಶಿಕ್ಷಕರಾದ ಈರಪ್ಪ ಅವರು ಪಡೆದುಕೊಂಡರು. ಭಾಗವಹಿಸಿದ ಎಲ್ಲಾ ಶಿಕ್ಷಕರಿಗೂ ಕಿರುಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಸ್ಕೆöÊಗೋಲ್ಡ್ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ನಾಪೋಕ್ಲು: ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಪ್ರಮುಖವಾದುದು. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕನ ಪಾತ್ರ ಬಹಳ ಮುಖ್ಯ ಎಂದು ನಿವೃತ್ತ ಪ್ರಾಂಶುಪಾಲರಾದ ಕಲ್ಯಾಟಂಡ ಪೂಣಚ್ಚ ಹೇಳಿದರು. ಇಲ್ಲಿನ ಶ್ರೀ ರಾಮಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಂಶುಪಾಲರಾದ ಬಿ.ಎಂ.ಶಾರದಾ ಡಾ.ರಾಧಾಕೃಷ್ಣನ್ ಅವರ ಜೀವನದ ಕುರಿತು ಹಾಗೂ ಶಿಕ್ಷಕಿ ಚಂದ್ರಕಲಾ ಗುರು ಎಂದರೆ ಯಾರು ಎಂಬ ಬಗ್ಗೆ ಮಾತನಾಡಿದರು. ವಿದ್ಯಾಸಂಸ್ಥೆಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವೃಂದದವರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾದವರೆಗೆ ಬಹುಮಾನವನ್ನು ವಿತರಿಸಿ ಅತಿಥಿಗಳು ಶುಭ ಹಾರೈಸಿದರು .

ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟ ವೇದಿಕೆಯಲ್ಲಿ ನಿರ್ದೇಶಕರಾದ ನಾಯಕಂಡ ದೀಪಕ್ ಚಂಗಪ್ಪ, ಬಿದ್ದಾಟಂಡ ಮುತ್ತಣ್ಣ, ಶಿಕ್ಷಕ ವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಬಿ.ಎನ್.ವಿಶಾಲಾಕ್ಷಿ ಸ್ವಾಗತಿಸಿದರು. ಕೃಪಾ ಡಿ.ಪಿ. ವಂದಿಸಿದರು. ಕಣಿವೆ : ಶಿಕ್ಷಕರು ಒಂದು ಅದ್ಭುತ ಶಕ್ತಿ. ಅತ್ಯಂತ ಶ್ರೇಷ್ಠ ವೃತ್ತಿಯಾಗಿರುವ ಶಿಕ್ಷಕ ವೃತ್ತಿಯಲ್ಲಿ ತ್ಯಾಗ ಮತ್ತು ಸಹಕಾರ ಬಹುಮುಖ್ಯವಾದುದು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ಅವರು ಅಭಿಪ್ರಾಯಿಸಿದರು.

ಜ್ಞಾನ ಕಾವೇರಿ ಕ್ಯಾಂಪಸ್, ಚಿಕ್ಕಅಳುವಾರ ಇಲ್ಲಿನ ಹಾರಂಗಿ ಸೆಮಿನಾರ್ ಹಾಲ್‌ನಲ್ಲಿ ಜರುಗಿದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಅತ್ಯಂತ ಶ್ರೇಷ್ಠವಾದ ಶಿಕ್ಷಕರ ವೃತ್ತಿಯಲ್ಲಿ ನ್ಯಾಯ ದೊರಕಿಸುವ ಪ್ರಯತ್ನ ಮಾಡಬೇಕು ಎಂದರು.

ಕೊಡಗು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಆದ ಪ್ರೊ. ಸುರೇಶ್ ಎಂ ಅವರು ಮಾತನಾಡಿ, ಆದರ್ಶ ಶಿಕ್ಷಕ ಈ ಸಮಾಜದ ಆಸ್ತಿ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಶಿಕ್ಷಕರು ಮುನ್ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಉಪನ್ಯಾಸಕರು, ಆಡಳಿತ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಡಾ. ಜಮೀರ್ ಅಹಮದ್ ಕಾರ್ಯಕ್ರಮ ನಿರೂಪಿಸಿದರು.

*ಗೋಣಿಕೊಪ್ಪ: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಮಕ್ಕಳಿಗೆ ಶ್ರೀ ಕೃಷ್ಣ ವೇಷ ಧರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಗೋಣಿಕೊಪ್ಪ ಹರಿಶ್ಚಂದ್ರಪುರ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆ ಲತಾ ಅವರ ಮುಂದಾಳತ್ವದಲ್ಲಿ ಗ್ರಾಮ ನೈರ್ಮಲ್ಯ ಸಭೆ, ತಾಯಂದಿರ ಸಭೆ, ಬಾಲ ವಿಕಾಸ ಸಮಿತಿ ಸಭೆ ನಡೆಸಲಾಯಿತು. ಗೋಣಿಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಕುಲಚಂಡ ಪ್ರಮೋದ್ ಗಣಪತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗ್ರಾಮ ಪಂಚಾಯತಿ ಸದಸ್ಯ ಅಫ್ಜಲ್, ಸಪುರ ಭಾನು, ಸಂಜೀವಿನಿ ಒಕ್ಕೂಟ ಸಂಪನ್ಮೂಲ ವ್ಯಕ್ತಿ ವರಲಕ್ಷಿö್ಮ, ಆರೋಗ್ಯ ಅಧಿಕಾರಿ ಪೃಥ್ವಿ, ಶಿವಮ್ಮ, ಅಂಗನವಾಡಿ ಕಾರ್ಯಕರ್ತೆಯರುಗಳಾದ ಲತಾ, ಸುಮತಿ, ಸಂಧ್ಯಾ, ಯಮುನಾ, ಆಶಾ ಕಾರ್ಯಕರ್ತೆಯರುಗಳಾದ ರತ್ನಕುಮಾರಿ, ಸುಧಾ, ಚಿತ್ರ, ಗೀತಾ, ಮಕ್ಕಳು ಮತ್ತು ಸ್ಥಳೀಯರು ಹಾಜರಿದ್ದರು.

ಮಡಿಕೇರಿ: ಶಿಕ್ಷಕರ ದಿನಾಚರಣೆಯ ಅಂಗವಾಗಿ ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆ ವತಿಯಿಂದ ನಾಲ್ವರು ಶಿಕ್ಷಕರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಭಾಗಮಂಡಲ ಕೆ.ವಿ.ಜಿ.ಐಟಿಐನ ಪದ್ಮಕುಮಾರ್ ರೈ, ನಾಪೋಕ್ಲು ಪಬ್ಲಿಕ್ ಶಾಲೆಯ ಉಷಾರಾಣಿ, ಪೆರಾಜೆ ಅಮೆಚೂರು ಪ್ರಾಥಮಿಕ ಶಾಲೆಯ ಲಾಲಿ ಮತ್ತು ಚೇರಂಬಾಣೆಯ ಅರುಣಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಅವರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹಾಜರಿದ್ದ ರೋಟರಿ ಅಸಿಸ್ಟೆಂಟ್ ಗವರ್ನರ್. ದೇವಣಿರ ಕಿರಣ್, ನೇಶನ್ ಬಿಲ್ಡರ್ ಪ್ರಶಸ್ತಿಯ ಇತಿಹಾಸ ಮತ್ತು ಮಹತ್ವವನ್ನು ವಿವರಿಸಿದರು. ರೋಟರಿ ವುಡ್ಸ್ ಕ್ಲಬ್ ಈ ಕಾರ್ಯಕ್ರಮ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ವಲಯ ಸೇನಾನಿ. ಅನಿತಾ ಪೂವಯ್ಯ ಮಾತನಾಡಿ ವುಡ್ಸ್ ಸಂಸ್ಥೆಯ ಪ್ರಮುಖ ಕಾರ್ಯಕ್ರಮಗಳನ್ನು ವಿವರಿಸಿದರು. ರೋಟರಿ ವುಡ್ಸ್ ಅಧ್ಯಕ್ಷ ಹರೀಶ್ ಕಿಗ್ಗಾಲ್ ಮಾತನಾಡಿ, ಅರ್ಹ ಶಿಕ್ಷಕರನ್ನು ಹುಡುಕಿ ರೋಟರಿ ವುಡ್ಸ್ ವತಿಯಿಂದ ಗೌರವಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕ್ಲಬ್ ಕಾರ್ಯದರ್ಶಿ ಕಿರಣ್ ಕುಂದರ್, ಸದಸ್ಯರಾದ ಪ್ರವೀಣ್, ರವಿಕುಮಾರ್, ಪ್ರಮಿಳಾ ಶೆಟ್ಟಿ, ವಸಂತ್ ಕುಮಾರ್, ರಂಜಿತ್ ಕಿಗ್ಗಾಲ್, ಪ್ರದೀಪ್ ಕಿಗ್ಗಾಲ್, ದಿವಾಕರ್ ರವಿ.ಪಿ, ವಿಶಾಲಾಕ್ಷಿ, ಪದ್ಮಾಗಿರಿ, ಜಹೀರ್ ಅಹ್ಮದ್, ಬೋಪಣ್ಣ ಭಾಗವಹಿಸಿದ್ದರು. ಇದೇ ಸಂದರ್ಭ ಕ್ಲಬ್‌ನ ಶಿಕ್ಷಕರ ದಿನಾಚರಣೆಯ ಪೋಸ್ಟರನ್ನು ಅಸಿಸ್ಟೆಂಟ್ ಗವರ್ನರ್ ದೇವಣಿರ ಕಿರಣ್ ಬಿಡುಗಡೆಗೊಳಿಸಿದರು.ಸಿದ್ದಾಪುರ: ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಿದ್ದಾಪುರ ಪ್ರೌಢಶಾಲೆಯಲ್ಲಿ ಹಲವು ವರ್ಷ ಸೇವೆ ಸಲ್ಲ್ಲಿಸಿ, ನಿವೃತ್ತರಾಗಿರುವ ಕೃಷ್ಣವೇಣಿ ಮತ್ತು ವೇಣುಗೋಪಾಲ್ ದಂಪತಿಯನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ ಶಿಕ್ಷಕಿ ಕೃಷ್ಣವೇಣಿ, ಗುರುಶ್ರೇಷ್ಠರಾದ ಭಾರತರತ್ನ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸುತ್ತಿದ್ದು, ತಮ್ಮ ಸೇವೆಯನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನಿವೃತ ಬದುಕಿನಲ್ಲಿ ಸಂತೋಷ ತಂದಿದೆ ಎಂದರು.

ಸಂಘದ ಅಧ್ಯಕ್ಷರಾದ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಜೀವನದ ಅಮೂಲ್ಯವಾದ ಸಂಪತ್ತು ವಿದ್ಯೆ. ವಿದ್ಯಾರ್ಥಿ ಜೀವನದಲ್ಲಿ ನಮ್ಮ ತಪ್ಪುಗಳನ್ನು ತಿದ್ದಿ, ಉತ್ತಮ ಭವಿಷ್ಯದೆಡೆಗೆ ದಾರಿ ತೋರಿಸಿದ ಶಿಕ್ಷಕರನ್ನು ಗೌರವಿಸಬೇಕು. ನೂರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ ಶಿಕ್ಷಕರಿಗೆ ಗೌರವ ನೀಡಬೇಕು ಎಂದರು.

ಈ ಸಂದರ್ಭ ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫ, ಉಪಾಧ್ಯಕ್ಷ ಪುತ್ತಂ ಪ್ರದೀಪ್, ಸದಸ್ಯರಾದ ಎ.ಎನ್ ವಾಸು, ಸುಬ್ರಮಣಿ, ಆಂಟೋನಿ, ಕೃಷ್ಣ ಹಾಜರಿದ್ದರು.

ಸಂತೋಷ ತಂದಿದೆ ಎಂದರು.

ಸಂಘದ ಅಧ್ಯಕ್ಷರಾದ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಜೀವನದ ಅಮೂಲ್ಯವಾದ ಸಂಪತ್ತು ವಿದ್ಯೆ. ವಿದ್ಯಾರ್ಥಿ ಜೀವನದಲ್ಲಿ ನಮ್ಮ ತಪ್ಪುಗಳನ್ನು ತಿದ್ದಿ, ಉತ್ತಮ ಭವಿಷ್ಯದೆಡೆಗೆ ದಾರಿ ತೋರಿಸಿದ ಶಿಕ್ಷಕರನ್ನು ಗೌರವಿಸಬೇಕು. ನೂರಾರು ವಿದ್ಯಾರ್ಥಿಗಳ ಬದುಕನ್ನು ರೂಪಿಸಿದ ಶಿಕ್ಷಕರಿಗೆ ಗೌರವ ನೀಡಬೇಕು ಎಂದರು.

ಈ ಸಂದರ್ಭ ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫ, ಉಪಾಧ್ಯಕ್ಷ ಪುತ್ತಂ ಪ್ರದೀಪ್, ಸದಸ್ಯರಾದ ಎ.ಎನ್ ವಾಸು, ಸುಬ್ರಮಣಿ, ಆಂಟೋನಿ, ಕೃಷ್ಣ ಹಾಜರಿದ್ದರು.

ಗೋಣಿಕೊಪ್ಪ : ಲಯನ್ಸ್ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಸಮಾರಂಭದಲ್ಲಿ ಶಾಲೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಇತ್ತೀಚೆಗೆ ನಿವೃತ್ತಿ ಹೊಂದಿದ ಮುಕ್ಕಾಟಿರ ಅಕ್ಕಮ್ಮ, ಮೇಕೇರಿರ ಜಾನ್ಸಿ ತಮ್ಮಯ್ಯ ಹಾಗೂ ಚೋಕಂಡ ದಮಯಂತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಇದೇ ವೇಳೆ ಲಯನ್ಸ್ ಸಂಸ್ಥೆ ವತಿಯಿಂದ ಮೂವರನ್ನು ಸನ್ಮಾನಿಸಲಾಯಿತು. ಇಪ್ಪತ್ತ ಮೂರು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಮುಖ್ಯ ಶಿಕ್ಷಕಿ ಅಕ್ಕಮ್ಮ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಾಪೋಕ್ಲು: ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳ ಜೊತೆಗೆ ಜೀವನ ಕೌಶಲ್ಯಗಳನ್ನು ಶಾಲೆಗಳಲ್ಲಿ ಕಲಿಸಲಾಗುತ್ತದೆ ಎಂದು ಚೆಶೈರ್ ಹೋಂ ಅಧ್ಯಕ್ಷೆ ಗೀತಾ ಚಂಗಪ್ಪ ಹೇಳಿದರು. ಬ್ರಹ್ಮಗಿರಿ ಸಹೋದಯದ ಕ್ಲಸ್ಟರ್ ವತಿಯಿಂದ ಅಂಕುರ್ ಪಬ್ಲಿಕ್ ಶಾಲೆಯ ಆಶ್ರಯದಲ್ಲಿ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಕೇವಲ ಕಲಿತರೆ ಸಾಲದು. ಬದುಕಿನಲ್ಲಿ ಯಶಸ್ವಿಯಾಗಬೇಕು. ಜೀವನದಲ್ಲಿ ಸವಾಲುಗಳನ್ನು ಎದುರಿಸಿ ಗೆಲುವು ಸಾಧಿಸುವಂತಾಗಬೇಕು ಎಂದರು.

ಅAಕುರ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಕೇಟೋಳಿರ ರಾಜಾಚರ್ಮಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಹಾಗೂ ಬ್ರಹ್ಮಗಿರಿ ಸಹೋದಯದ ಖಜಾಂಜಿ ರತ್ನ ಚರ್ಮಣ, ಎಸ್‌ಎಂಎಸ್ ಶಾಲೆಯ ಪ್ರಾಂಶುಪಾಲರಾದ ಕುಸುಮ್ ಟಿಟೋ, ಮಡಿಕೇರಿ ಎಎಲ್‌ಜಿ ಶಾಲೆಯ ಜಾಯ್ಸಿ , ಕೊಡಗು ವಿದ್ಯಾಲಯ ಶಾಲೆಯ ಪ್ರಾಂಶುಪಾಲೆ ಸುಮಿತ್ರ, ಜ್ಞಾನಗಂಗಾ ಶಾಲೆಯ ಸುಲೋಚನ, ಗೋಣಿಕೊಪ್ಪ ನ್ಯಾಷನಲ್ ಅಕಾಡೆಮಿ ಶಾಲೆಯ ಪ್ರಾಂಶುಪಾಲರಾದ ಪುಷ್ಪ, ಅಂಕುರ್ ಪಬ್ಲಿಕ್ ಶಾಲೆಯ ನಿರ್ದೇಶಕಿ ಗೌರಮ್ಮ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರಾದ ಕೊಡಗು ವಿದ್ಯಾಲಯದ ರೇಖಾ, ಕೆಎಎಲ್‌ಜಿ ಕ್ರೆಸೆಂಟ್ ಶಾಲೆಯ ಜ್ಯೋತಿ ಕೆ.ಎಸ್., ಎಸ್‌ಎಂಎಸ್ ವಿದ್ಯಾಪೀಠದ ಶೀಲಾವತಿ ಸಿ.ಬಿ, ಜ್ಞಾನ ಗಂಗಾ ಶಾಲೆಯ ನಾಗರಾಜ್ ಕೆ.ಸಿ., ನ್ಯಾಷನಲ್ ಅಕಾಡೆಮಿಯ ರೇಖಾ ನಾಣಯ್ಯ, ಅಂಕುರ್ ಪಬ್ಲಿಕ್ ಶಾಲೆಯ ತಾರಾ ಅವರುಗಳನ್ನು ಗೌರವಿಸಲಾಯಿತು. ಬಳಿಕ ಕೊಡಗಿನ ಆರು ಸಿಬಿಎಸ್‌ಸಿ ಶಾಲೆಗಳ ಶಿಕ್ಷಕ ವೃಂದದಿAದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದರು. ಅಂಕುರ್ ಪಬ್ಲಿಕ್ ಶಾಲೆಯ ಕೇಟೋಳಿರ ರತ್ನ ಚರ್ಮಣ ಸ್ವಾಗತಿಸಿ, ಶಿಕ್ಷಕಿಯರಾದ ಡಿಶ್ಮ ಮತ್ತು ರಿಷಿತ ನಿರೂಪಿಸಿದರು. ಬ್ರಹ್ಮಗಿರಿ ಸಹೋದಯದ ಕಾರ್ಯದರ್ಶಿ ಜಾಯ್ಸಿ ವಂದಿಸಿದರು.