ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ ಒಟ್ಟು ೨೯ ಪದಕಗಳು

ಪ್ಯಾರಿಸ್, ಸೆ. ೮: ಪ್ಯಾರಿಸ್‌ನಲ್ಲಿ ಮುಕ್ತಾಯವಾದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಐತಿಹಾಸಿಕ ಪ್ರದರ್ಶನ ನೀಡಿದ್ದು, ಇದೇ ಮೊದಲ ಬಾರಿಗೆ ಗರಿಷ್ಠ ಪದಕಗಳೊಂದಿಗೆ ಕ್ರೀಡಾಕೂಟದಲ್ಲಿ ತನ್ನ ಅಭಿಯಾನ ಮುಕ್ತಾಯಗೊಳಿಸಿದೆ. ಅಥ್ಲೀಟ್ ಪೂಜಾ ಓಜಾ, ಮಹಿಳೆಯರ ಪ್ಯಾರಾ ಕ್ಯಾನೋ ಏಐ೧ ೨೦೦ ಮೀಟರ್ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಫೈನಲ್ ರೇಸ್‌ನಿಂದ ಹೊರಬಿದ್ದರು. ಇದರೊಂದಿಗೆ ಭಾರತದ ಅಭಿಯಾನವೂ ಕೊನೆಗೊಂಡಿತು. ಆದಾಗ್ಯೂ ಈ ಬಾರಿಯ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ಇತಿಹಾಸ ಸೃಷ್ಟಿಸಿದ್ದು, ಈ ಬಾರಿಯ ಪ್ಯಾರಾಲಿಂಪಿಕ್ಸ್ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ ದಾಖಲೆಯ ೨೯ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಈ ಪೈಕಿ ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು ೧೩ ಕಂಚು ಸೇರಿವೆ. ವಾಸ್ತವವಾಗಿ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇಷ್ಟು ಸಂಖ್ಯೆಯ ಪದಕಗಳನ್ನು ಗೆದ್ದಿದ್ದು ಇದೇ ಮೊದಲು. ಇದಕ್ಕೂ ಮೊದಲು ಟೊಕಿಯೋ ಪ್ಯಾರಾಲಿಂಪಿಕ್‌ನಲ್ಲಿ ೧೯ ಪದಕಗಳನ್ನು ಗೆದ್ದಿದ್ದು, ಭಾರತದ ಅತ್ಯುತ್ತಮ ಪ್ರದರ್ಶನವಾಗಿತ್ತು.

ಭಾರತದಲ್ಲಿ ಮೊದಲ ಶಂಕಿತ ‘ಮಂಕಿಪಾಕ್ಸ್' ಪ್ರಕರಣ ಪತ್ತೆ

ನವದೆಹಲಿ, ಸೆ. ೮: ಇತ್ತೀಚೆಗೆ ಹೊರದೇಶದಿಂದ ಭಾರತಕ್ಕೆ ಬಂದ ವ್ಯಕ್ತಿಯೋರ್ವನಿಗೆ ‘ಮಂಕಿಪಾಕ್ಸ್’ ತಗುಲಿರುವುದಾಗಿ ಶಂಕಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ. ರೋಗಿಯನ್ನು ಆಸ್ಪತ್ರೆಯೊಂದರಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಆತನ ಆರೋಗ್ಯ ಸದ್ಯ ಸ್ಥಿರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಮಂಕಿಪಾಕ್ಸ್ ಇದೆಯೇ ಎಂಬುದನ್ನು ತಿಳಿಯಲು ರೋಗಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಶಿಷ್ಟಾಚಾರದ ಪ್ರಕಾರ ಪ್ರಕರಣವನ್ನು ನಿರ್ವಹಿಸಲಾಗುತ್ತಿದೆ ಮತ್ತು ಮಂಕಿಪಾಕ್ಸ್ ಮೂಲ ತಿಳಿಯಲು ಹಾಗೂ ದೇಶದೊಳಗೆ ಅದರ ಪರಿಣಾಮವನ್ನು ನಿರ್ಣಯಿಸಲು ಸಂಪರ್ಕ ಪತ್ತೆ ಹಚ್ಚುವಿಕೆ ಕಾರ್ಯ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಪ್ರಯಾಣ-ಸಂಬAಧಿತ ಪ್ರಕರಣಗಳನ್ನು ಎದುರಿಸಲು ದೇಶವು ಸಂಪೂರ್ಣವಾಗಿ ಸಿದ್ಧವಾಗಿದೆ. ಯಾವುದೇ ಸಂಭಾವ್ಯ ಅಪಾಯವನ್ನು ನಿರ್ವಹಿಸಲು ಮತ್ತು ತಗ್ಗಿಸಲು ದೃಢವಾದ ಕ್ರಮಗಳನ್ನು ಹೊಂದಿದೆಯೆAದು ಸಚಿವಾಲಯ ತಿಳಿಸಿದೆ.

ಮಣಿಪುರದಲ್ಲಿ ಪೊಲೀಸ್ ಭದ್ರತೆ ಹೆಚ್ಚಳ

ಇಂಫಾಲ್, ಸೆ. ೮: ಮಣಿಪುರದ ಜಿರಿಬಾಮ್‌ನಲ್ಲಿ ಶನಿವಾರ ನಡೆದ ಹಿಂಸಾಚಾರದಲ್ಲಿ ಐವರು ಮೃತಪಟ್ಟಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯದ ಪರಿಸ್ಥಿತಿಯು ಉದ್ವಿಗ್ನಗೊಂಡಿದ್ದರೂ, ನಿಯಂತ್ರಣದಲ್ಲಿದೆ ಎಂದಿದ್ದಾರೆ. ಭಾನುವಾರ ಹಿಂಸಾಚಾರ ನಡೆದ ಘಟನೆಗಳು ವರದಿಯಾಗಿಲ್ಲ. ಭದ್ರತಾಪಡೆಗಳ ಸಮನ್ವಯದೊಂದಿಗೆ ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಜಿರಿಬಾಮ್‌ನಲ್ಲಿ ಶನಿವಾರ ಮನೆಯೊಂದಕ್ಕೆ ನುಗ್ಗಿದ ಉಗ್ರರು, ನಿದ್ರಿಸುತ್ತಿದ್ದ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಕೊಲೆಯ ನಂತರ ಕಾದಾಡುತ್ತಿರುವ ಸಮುದಾಯಗಳ ಸದಸ್ಯರ ನಡುವೆ ಭಾರಿ ಗುಂಡಿನ ಕಾಳಗ ನಡೆದಿದ್ದು, ಶಸ್ತçಸಜ್ಜಿತ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಜಿರಿಬಾಮ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜನಾಂಗೀಯ ಹಿಂಸಾಚಾರಕ್ಕೆ ತತ್ತರಿಸಿರುವ ಮಣಿಪುರದಲ್ಲಿ ಇದೀಗ ಡ್ರೋನ್ ಬಳಸಿ ದಾಳಿ ನಡೆಸಲಾಗುತ್ತಿದೆ. ಇಂಫಾಲ್ ಪಶ್ಚಿಮ ಜಿಲ್ಲೆಯ ಕೌಟ್ರುಕ್ ಗ್ರಾಮದಲ್ಲಿ ಸೆ.೧ರಂದು ಮೊದಲ ಬಾರಿಗೆ ಡ್ರೋನ್ ಮೂಲಕ ದಾಳಿ ನಡೆಸಲಾಗಿದೆ. ಮರುದಿನ ಸೆಂಜಾಮ್ ಚಿರಾಂಗ್‌ನಲ್ಲಿ ಡ್ರೋನ್ ದಾಳಿ ನಡೆದಿದೆ. ಈ ಘಟನೆಗಳಲ್ಲಿ ಇಬ್ಬರು ಮೃತಪಟ್ಟು, ೧೨ ಜನರು ಗಾಯಗೊಂಡಿದ್ದಾರೆ.

ಒಲAಪಿಕ್ ಕೌನ್ಸಿಲ್ ಆಫ್ ಏಷ್ಯಾದ ಅಧ್ಯಕ್ಷರಾಗಿ ರಣಧೀರ್

ನವದೆಹಲಿ, ಸೆ. ೮: ಹಿರಿಯ ಕ್ರೀಡಾ ಆಡಳಿತಗಾರ ರಣಧೀರ್ ಸಿಂಗ್ ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ೪೪ನೇ ಸಾಮಾನ್ಯ ಸಭೆಯಲ್ಲಿ ರಣಧೀರ್ ಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಹುದ್ದೆಗೇರಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಐದು ಬಾರಿ ಒಲಂಪಿಕ್ ಶೂಟರ್ ಆಗಿರುವ ರಣಧೀರ್, ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಅರ್ಹ ಅಭ್ಯರ್ಥಿಯಾಗಿದ್ದರು. ಅವರ ಅಧಿಕಾರಾವಧಿ ೨೦೨೪ ರಿಂದ ೨೦೨೮ ರವರೆಗೆ ಇರಲಿದೆ.

ಭದ್ರತಾ ಸಲಹೆಗಾರ ಅಜಿತ್ ದೋವಲ್ ರಷ್ಯಾ ಭೇಟಿ

ವಾಷಿಂಗ್ಟನ್, ಸೆ. ೮: ಉಕ್ರೇನ್-ರಷ್ಯಾ ಸಂಘರ್ಷವನ್ನು ಅಂತ್ಯಗೊಳಿಸುವ ಸಲುವಾಗಿ ಚರ್ಚಿಸಲು ರಾಷ್ಟಿçÃಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಈ ವಾರ ರಷ್ಯಾಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ಅವರು ನಡೆಸಿದ ಸಂಭಾಷಣೆಯ ವೇಳೆ, ಶಾಂತಿ ಮಾತುಕತೆಗಾಗಿ ಅಜಿತ್ ದೋವಲ್ ಅವರು ರಷ್ಯಾಗೆ ಭೇಟಿ ನೀಡುವುದರ ಕುರಿತು ನಿರ್ಧಾರವಾಗಿತ್ತು ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿಮಾಡಿದೆ. ಯುದ್ಧವನ್ನು ಅಂತ್ಯಗೊಳಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಬಹುದು ಎಂದು ಕೆಲವು ದಿನಗಳ ಹಿಂದಷ್ಟೇ ರಷ್ಯಾ ಅಧ್ಯಕ್ಷ ಪುಟಿನ್ ಅಭಿಪ್ರಾಯಪಟ್ಟಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ದೋವಲ್ ಅವರ ರಷ್ಯಾ ಭೇಟಿ ಪ್ರಾಮುಖ್ಯ ಪಡೆದುಕೊಂಡಿದೆ. ಯುದ್ಧ ಕೊನೆಗೊಳಿಸಬೇಕು ಎಂಬ ಒತ್ತಾಯ ಹೆಚ್ಚಿತ್ತಿರುವ ಈ ಹೊತ್ತಿನಲ್ಲೇ ಬ್ರಿಕ್ಸ್ ದೇಶಗಳ ಭದ್ರತಾ ಸಲಹೆಗಾರರ ಶೃಂಗಸಭೆ ರಷ್ಯಾದಲ್ಲಿ ನಡೆಯಲಿದ್ದು, ಇದರಲ್ಲಿಯೂ ದೋವಲ್ ಭಾಗವಹಿಸಲಿದ್ದಾರೆ.

ಪ್ರಚಾರ ಆರಂಭಿಸಿದ ವಿನೇಶ್ ಫೋಗಟ್

ಹರಿಯಾಣ, ಸೆ. ೮: ಕುಸ್ತಿ ಪಟು ಹಾಗೂ ಹರಿಯಾಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ವಿನೇಶ್ ಫೋಗಟ್ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಜನರ ಆಶೀರ್ವಾದದೊಂದಿಗೆ ಪ್ರತಿ ಯುದ್ಧವನ್ನು ಗೆಲ್ಲುತ್ತೇನೆ ಎಂದು ಕುಸ್ತಿ ಪಟು ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ತಿಳಿಸಿದ್ದಾರೆ. ವಿನೇಶ್ ಫೋಗಟ್ (೩೦) ಹರಿಯಾಣ ವಿಧಾನಸಭಾ ಚುನಾವಣೆಗೆ ಜುಲಾನ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅ.೦೫ ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ೯೦ ಸದಸ್ಯರ ಸಾಮರ್ಥ್ಯವಿರುವ ವಿಧಾನಸಭೆಗೆ ನಡೆದ ಮತದಾನದ ಎಣಿಕೆ ಅ. ೮ ರಂದು ನಡೆಯಲಿದೆ.

ಬೋಟ್ ಮಗುಚಿ ಇಬ್ಬರು ಯೋಧರ ಸಾವು

ಮಹಾರಾಷ್ಟç ಸೆ. ೮: ಭಾರತೀಯ ಸೇನೆಯ ಕಮಾಂಡೋಗಳ ತರಬೇತಿ ವೇಳೆ ದುರಂತ ನಡೆದಿದ್ದು, ಬೋಟ್ ಮಗುಚಿ ಇಬ್ಬರು ಯೋಧರು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಮಹಾರಾಷ್ಟçದ ಕೊಲ್ಲಾಪುರ ಜಿಲ್ಲೆಯ ಚಂದಘಡ ತಾಲೂಕಿನ ಹಾಜಗೋಳಿ ಬಳಿ ಈ ಘಟನೆ ನಡೆದಿದ್ದು, ತರಬೇತಿ ವೇಳೆ ಬೋಟ್ ಮಗುಚಿ ಇಬ್ಬರು ಜೂನಿಯರ್ ಕಮಾಂಡೋಗಳು ಸಾವನ್ನಪ್ಪಿದ್ದಾರೆ. ಮೃತರನ್ನು ರಾಜಸ್ಥಾನದ ವಿಜಯಕುಮಾರ್(೨೮) ಮತ್ತು ಪಶ್ಚಿಮ ಬಂಗಾಳದ ದಿವಾಕರ್ ರಾಯ್(೨೬) ಎಂದು ಗುರುತಿಸಲಾಗಿದೆ. ಮೃತರಿಬ್ಬರೂ ಜೂನಿಯರ್ ಕಮಾಂಡೋಗಳಾಗಿದ್ದು, ತಿಲಾರಿ ಡ್ಯಾಂ ಹಿನ್ನೀರಿನಲ್ಲಿ ನದಿ ದಾಟುವ ತರಬೇತಿ ನೀಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಈ ತರಬೇತಿಯಲ್ಲಿ ಬೋಟ್‌ನಲ್ಲಿ ಒಟ್ಟು ಆರು ಜನರಿದ್ದರು ಎಂದು ತಿಳಿದುಬಂದಿದ್ದು, ಈ ಪೈಕಿ ಬೋಟ್‌ನಿಂದ ನಾಲ್ವರು ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಜೀನಾಮೆ ನೀಡಿದ ಟಿಎಂಸಿ ಸಂಸದ

ಕೋಲ್ಕತ್ತಾ, ಸೆ. ೮: ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ-ಕೊಲೆ ಮತ್ತು ಅದರ ಹಿನ್ನೆಲೆಯಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ತಮ್ಮದೇ ಟಿಎಂಸಿ ಸರ್ಕಾರದ ವಿರುದ್ಧ ಹಿರಿಯ ಸಂಸದ ತಿರುಗಿಬಿದ್ದು, ರಾಜೀನಾಮೆ ನೀಡಿದ್ದಾರೆ. ಪ್ರಕರಣವನ್ನು ಬಂಗಾಳ ಸರ್ಕಾರ ನಿರ್ವಹಿಸಿದ ಕ್ರಮವನ್ನು ವಿರೋಧಿಸಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸಂಸದ ಜವಾಹರ್ ಸಿರ್ಕಾರ್ ಭಾನುವಾರ ತಮ್ಮ ಸಂಸದೀಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಟಿಎಂಸಿ ನಾಯಕ ಜವಾಹರ್ ಸಿರ್ಕಾರ್ ಭಾನುವಾರ ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದು ರಾಜ್ಯಸಭೆಗೆ ರಾಜೀನಾಮೆ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.