ಮಡಿಕೇರಿ, ಸೆ. ೮: ಕೊಡಗು ಜಿಲ್ಲೆಯಾದ್ಯಂತ ಮಾತೆ ಮರಿಯಮ್ಮನವರ ಜನ್ಮ ದಿನಾಚರಣೆಯನ್ನು ಕ್ರಿಶ್ಚಿಯನ್ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಜಿಲ್ಲೆಯ ವಿವಿಧ ಚರ್ಚ್ಗಳಲ್ಲಿ ಈ ಸಂಬAಧ ವಿಶೇಷ ಪ್ರಾರ್ಥನೆ, ಬಲಿಪೂಜೆಗಳು ನಡೆದವು. ಕಳೆದ ಒಂದು ವಾರದಿಂದ ಪ್ರಾರ್ಥನೆಗಳ ಮೂಲಕ ವಿಶೇಷ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದ ಜನಾಂಗ ಬಾಂಧವರು, ಭಾನುವಾರ ಜನ್ಮದಿನಾಚರಣೆಯನ್ನು ಸಡಗರ, ಸಂಭ್ರಮದಿAದ ಆಚರಿಸಲಾಯಿತು. ಮಡಿಕೇರಿಯ ಸಂತ ಮೈಕಲರ ದೇವಾಲಯದಲ್ಲಿ ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಹಬ್ಬದ ಆಡಂಬರದ ಗಾಯನ, ಬಲಿಪೂಜೆ ನಡೆಯಿತು. ಫಾ. ದೀಪಕ್ ಬಲಿಪೂಜೆ ನೆರವೇರಿಸಿ ದಿನದ ಮಹತ್ವದ ಸಂದೇಶ ನೀಡಿದರು. ಧರ್ಮಗುರುಗಳಾದ ಫಾ. ಜಾರ್ಜ್ ದೀಪಕ್, ಫಾ. ಸಿಲ್ವಿ, ಫಾ.ಸಂಜಯ್ ಪಾಲ್ಗೊಂಡಿದ್ದರು. ಬಲಿಪೂಜೆ ಬಳಿಕ ಮಾತೆ ಮರಿಯಮ್ಮನವರ ಪಲ್ಲಕ್ಕಿಯೊಂದಿಗೆ ಮೆರವಣಿಗೆ ನಡೆಯಿತು. ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ಮಾತೆ ಮರಿಯಮ್ಮನವರ ಪ್ರತಿಮೆಗೆ ಪುಷ್ಪಾರ್ಚನೆ ಮೂಲಕ ಆರಾಧಿಸಲಾಯಿತು.
ನಾಪೋಕ್ಲು : ಇಲ್ಲಿನ ಮೇರಿ ಮಾತೆಯ ದೇವಾಲಯದಲ್ಲಿ ಮೇರಿಮಾತೆಯ ಜನ್ಮದಿನವನ್ನು ಭಾನುವಾರ ಆಚರಿಸಲಾಯಿತು,
ಹಬ್ಬದ ಅಂಗವಾಗಿ ದೇವಾಲಯದ ಆವರಣದಲ್ಲಿ ಮೇರಿಮಾತೆ ಮೂರ್ತಿಯನ್ನು ಪ್ರತಿಷ್ಠಾಪಿಸಿ ನವದಿನದ ಪ್ರಾರ್ಥನೆ ನೆರವೇರಿಸಿ ಹಾಡಿನೊಂದಿಗೆ ಸಮುದಾಯ ಬಾಂಧವರು ಪುಷ್ಪಾರ್ಚನೆಯನ್ನು ಶ್ರದ್ಧಾಭಕ್ತಿಯಿಂದ ಸಲ್ಲಿಸಿದರು.
ಈ ಸಂದರ್ಭ ಧರ್ಮಗುರುಗಳಾದ ಜ್ಞಾನ್ ಪ್ರಕಾಶ್ ಮಾತನಾಡಿ, ನಮ್ಮ ಬದುಕನ್ನು ಪರಿಪೂರ್ಣತೆಯಲ್ಲಿ ರೂಪಿಸಿಕೊಳ್ಳಬೇಕು. ನಿರ್ದಿಷ್ಟ ಗುರಿ ಇರಬೇಕು ಪ್ರಾರ್ಥನೆ, ದಾನ, ಧರ್ಮ, ಬೇರೆಯವರ ಕಷ್ಟಗಳನ್ನು ಅರ್ಥ ಮಾಡಿಕೊಂಡು, ಸಂತರ ಪುಸ್ತಕಗಳನ್ನು ಓದಿ ಅವರ ಪ್ರೇರಣೆ ಪಡೆದು ಬದುಕಬೇಕು ಎಂದು ನುಡಿದು ಹಬ್ಬದ ಶುಭಸಂದೇಶವನ್ನು ಸಾರಿದರು. ಈ ಸಂದರ್ಭ ಭಕ್ತಾದಿಗಳು , ಪಾಲನಾ ಸಮಿತಿಯ ಅಧ್ಯಕ್ಷರು, ಸದಸ್ಯರುಗಳು ಭಾಗವಹಿಸಿದ್ದರು.