ಚೆಯ್ಯಂಡಾಣೆ, ಸೆ. ೮: ಇಸ್ಲಾಂ ಶಾಂತಿಯ ಧರ್ಮವಾಗಿದೆ ಎಂದು ಕೊಡಗು ಜಿಲ್ಲಾ ಎಸ್ವೈಎಸ್ ಮಾಧ್ಯಮ ಕಾರ್ಯದರ್ಶಿ ಶಾಫಿ ಸಅದಿ ಸೋಮವಾರಪೇಟೆ ಹೇಳಿದರು.
ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆಯ ಅಂಗವಾಗಿ ಸುನ್ನಿ ಜಂಹಿಯ್ಯತುಲ್ ಮುಅಲ್ಲಿಮೀನ್ ನಾಪೋಕ್ಲು ಮತ್ತು ಎಮ್ಮೆಮಾಡು ಶಾಖೆಯ ಸಂಯುಕ್ತ ಆಶ್ರಯದಲ್ಲಿ ನಾಪೋಕ್ಲುವಿನಲ್ಲಿ ಆಯೋಜಿಸಿದ್ದ ಮಿಲಾದ್ ಸಂದೇಶ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರವಾದಿ ಮಹಮ್ಮದ್ ಪೈಗಂಬರ್ ಶಾಂತಿಯನ್ನು ಪ್ರತಿಪಾದಿಸಿದ ನಾಯಕರಾಗಿದ್ದಾರೆ. ತನ್ನ ಸಮುದಾಯದ ಯಾವುದೇ ಒಬ್ಬ ವ್ಯಕ್ತಿ ಅನ್ಯಾಯ ಮಾಡಿದರೆ ಅವನು ಮಾಡಿರುವುದು ಸರಿ ಎಂದು ವಾದಿಸುವುದಕ್ಕಿಂತ ದೊಡ್ಡ ಕೋಮುವಾದ ಬೇರೊಂದಿಲ್ಲ ಎಂದು ಮೊಹಮ್ಮದ್ ಪೈಗಂಬರ್ ಹೇಳಿದ್ದಾರೆ. ಆದ್ದರಿಂದ ಅನ್ಯಾಯದ ಕೆಲಸಗಳಿಗೆ ಇಸ್ಲಾಂ ಧರ್ಮ ಎಂದಿಗೂ ಪ್ರಚೋದಿಸುವುದಿಲ್ಲ ಎಂದು ಅವರು ನುಡಿದರು.ಎಸ್ವೈಎಸ್ ರಾಜ್ಯಾಧ್ಯಕ್ಷ ಅಬ್ದುಲ್ ಹಫೀಲ್ ಸಅದಿ ಕೊಳಕೇರಿ ಮಾತನಾಡಿ, ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಮಹಮ್ಮದ್ ಪೈಗಂಬರ್ ಅವರ ಆದರ್ಶಗಳನ್ನು ಎಲ್ಲರೂ ಕೂಡ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಹಳೇ ತಾಲೂಕು ಪ್ರಾಥಮಿಕ ಶಾಲಾ ಮೈದಾನದಿಂದ ಪ್ರಾರಂಭವಾದ ಜಾಥಾಕ್ಕೆ ಕೂರ್ಗ್ ಜಂಯಿಯ್ಯತುಲ್ ಉಲಮಾ ಕೋಶಾಧಿಕಾರಿ ಹುಸೈನ್ ಸಖಾಫಿ ಚಾಲನೆ ನೀಡಿದರು.
ಜಾಥಾದಲ್ಲಿ ವಿದ್ಯಾರ್ಥಿಗಳ ದಫ್ ಪ್ರದರ್ಶನ ಇತ್ಯಾದಿಗಳು ನಡೆದವು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿದ ಜಾಥಾ ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ಸಮಾಪನಗೊಂಡಿತು.
ನಾಪೋಕ್ಲು ಮಸೀದಿಯ ಖತೀಬರಾದ ಅಬ್ದುಲ್ಲಾ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ, ಕೊಟ್ಟಮುಡಿ ಜಮಾಅತ್ ಅಧ್ಯಕ್ಷ ಹೆಚ್.ಎ. ಹಂಸ, ನಾಪೋಕ್ಲು ಜಮಾಅತ್ ಅಧ್ಯಕ್ಷ ಅಬ್ದುಲ್ ರೆಹಮಾನ್ ಸಂದೇಶ ಜಾಥಾ ಕುರಿತು ಮಾತನಾಡಿದರು.
ಈ ಸಂದರ್ಭ ಕೂರ್ಗ್ ಜಂಯಿಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಅಬೂಬಕ್ಕರ್ ಸಖಾಫಿ, ಕೊಡಗು ಜಿಲ್ಲಾ ಎಸ್ಜೆಎಂ ಪ್ರಧಾನ ಕಾರ್ಯದರ್ಶಿ ಅಶ್ರಫ್ ಸಖಾಫಿ, ಜಿಲ್ಲಾ ಎಸ್ವೈಎಸ್ ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ, ಚೇರ್ಮೆನ್ ಅಬ್ದುಲ್ಲ ಸಖಾಫಿ, ಎಸ್ಎಸ್ಎಫ್ ಜಿಲ್ಲಾಧ್ಯಕ್ಷ ಝುಬೈರ್ ಸಅದಿ, ಕಾರ್ಯದರ್ಶಿ ಅಬ್ದುಲ್ ಜಲೀಲ್ ಹಿಂದದಿ, ಕನ್ವಿನರ್ ಹಂಝ ರಹ್ಮಾನಿ, ಷಂಶುದ್ದೀನ್ ಅಂಜ್ಜದಿ, ಅರಾಫತ್ ನಾಪೋಕ್ಲು, ಅಹ್ಮದ್, ಮುನೀರ್ ಮಲ್ಹರಿ ಸೇರಿದಂತೆ ಎಸ್ಎಸ್ಎಫ್, ಎಸ್ವೈಎಸ್, ಎಸ್ಜೆಎಂ, ಕೆಎಂಜೆ, ನಾಪೋಕ್ಲು ಓಎಸ್ಎಫ್ನ ಪದಾಧಿಕಾರಿಗಳು ಸದಸ್ಯರು ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.