ಕುಶಾಲನಗರ, ಆ. ೨೬: ಕುಶಾಲನಗರ ವಿವೇಕಾನಂದ ಬಡಾವಣೆ ನಿವಾಸಿ ರುಕ್ಸಾರ್ ಪಾಷಾ ನಾಪತ್ತೆಯಾಗಿರುವುದಾಗಿ ದೂರು ದಾಖಲಾಗಿದೆ. ಆಗಸ್ಟ್ ೧೧ ರಂದು ಬೆಳಿಗ್ಗೆ ೭ ಗಂಟೆಗೆ ಮುಳ್ಳುಸೋಗೆಯಲ್ಲಿನ ಮೀನು ಅಂಗಡಿಗೆ ಕೆಲಸಕ್ಕೆಂದು ತೆರಳಿದ್ದ ರುಕ್ಸಾರ್, ಇನ್ನು ಕೂಡ ಹಿಂತಿರುಗಿಲ್ಲ ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ವ್ಯಕ್ತಿಯ ಬಗ್ಗೆ ಸುಳಿವು ದೊರೆತಲ್ಲಿ ಕುಶಾಲನಗರ ನಗರ ಠಾಣೆ, ದೂ: ೦೮೨೭೬-೨೭೪೩೩೩ ಸಂಪರ್ಕಿಸಲು ಕೋರಿದೆ.