ಐಗೂರು, ಆ. ೨೬: ಕಾಜೂರು ಹಿ.ಪ್ರಾ. ಶಾಲಾ ಮೈದಾನದಲ್ಲಿ ನಡೆದ ಸೋಮವಾರಪೇಟೆ ವಲಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಐಗೂರಿನ ಸರಕಾರಿ ಪ್ರೌಢಶಾಲಾ ತಂಡವು ಮೊದಲ ಸ್ಥಾನವನ್ನು ಗಳಿಸಿತು.

ಸೋಮವಾರಪೇಟೆಯ ಓ.ಎಲ್.ವಿ. ಪ್ರೌಢಶಾಲಾ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಐಗೂರು ಶಾಲಾ ತಂಡದ ನಿತಿನ್, ಚಂದನ್ ತಲಾ ಒಂದು ಗೋಲು ದಾಖಲಿಸಿದ ಹಿನ್ನೆಲೆ ೨-೦ ಗೋಲು ಅಂತರದಿAದ ಗೆಲುವು ಸಾಧಿಸಿ ಮುಂದಿನ ವಲಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಗೊಂಡಿತು.

ಪ್ರಾರAಭದಲ್ಲಿ ಪ್ರಾ. ಶಾ. ಮು. ಶಿ. ಸರಳಕುಮಾರಿಯವರು ಪಂದ್ಯಾಟವನ್ನು ಉದ್ಘಾಟಿಸಿದರು. ಪತ್ರಕರ್ತ ಸುಕುಮಾರ್ ಪಂದ್ಯಾಟದ ಉದಯೋನ್ಮುಖ ಆಟಗಾರನಾದ ಐಗೂರು ಪ್ರೌಢಶಾಲಾ ತಂಡದ ನಿತಿನ್ ಅವರಿಗೆ ನಗದು ಪುರಸ್ಕಾರ ನೀಡಿದರು. ದ್ವಿತೀಯ ಸ್ಥಾನ ಗಳಿಸಿದ ಓ.ಎಲ್.ವಿ. ತಂಡಕ್ಕೆ ಭಾರತದ ಹಾಕಿ ತಂಡದ ಮಾಜಿ ಆಟಗಾರರಾದ ಕಾಳೇರಮ್ಮನ ರಾಯ್ ಅವರು ನಗದು ಪುರಸ್ಕಾರ ನೀಡಿದರು. ಕ್ರೀಡಾಕೂಟಕ್ಕೆ ಸ್ಥಳೀಯ ಟಾಟಾ ಕಾಫಿ ಸಂಸ್ಥೆ ಮತ್ತು ಐಗೂರು ಗ್ರಾಮ ಪಂಚಾಯಿತಿ ಸಹಕಾರ ನೀಡಿತು. ಕಾರ್ಯಕ್ರಮದಲ್ಲಿ ಐಗೂರು ಪ.ಪೂ. ಕಾಲೇಜಿನ ಪ್ರಾಂಶುಪಾಲ ಉಮೇಶ್, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಯಶವಂತ್, ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ಪ, ಶಿಕ್ಷಕ ಮಂಜುನಾಥ್, ಶಿಕ್ಷಕಿಯರಾದ ರಂಜನಿ, ಗುಲಾಬಿ, ಶಶಿಕಲಾ, ಸಂತ ಜೋಸೆಫರ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಮೃತ್ ಮತ್ತು ಓ.ಎಲ್.ವಿ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶುÈತಿ ಭಾಗವಹಿಸಿದ್ದರು.