ಮುಳ್ಳೂರು, ಆ. ೨೬: ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ೫ನೇ ಅಂತರರಾಷ್ಟಿçÃಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶನಿವಾರಸಂತೆ ಸೆಕ್ರೇಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಷರೀಣಿ ಎ.ಶೆಟ್ಟಿ ಹಾಗೂ ೧ನೇ ತರಗತಿಯ ವಿದ್ಯಾರ್ಥಿನಿ ವಿವಿಕ್ತ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ಕಥಾ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಇವರಿಬ್ಬರು ಟ್ರೆಡಿಷನಲ್ ಶೋಟೋಕಾನ್ ಸಂಸ್ಥೆಯ ಎಂ.ಸಿ.ಸುದರ್ಶನ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.