ಕೂಡಿಗೆ: ಇಲ್ಲಿಗೆ ಸಮೀಪದ ಶಿರಂಗಾಲ ಗ್ರಾಮ ಪಂಚಾಯಿತಿ ವತಿಯಿಂದ ತೆರಿಗೆ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೇಮಲತಾ ಸೇರಿದಂತೆ ಸಿಬ್ಬಂದಿ ವರ್ಗದ ತಂಡವರು ಗ್ರಾಮ ವ್ಯಾಪ್ತಿಯ ಅಂಗಡಿ ಮಳಿಗೆಗಳಲ್ಲಿನ ವ್ಯಾಪಾರಸ್ಥರ ತೆರಿಗೆ, ಮನೆಗಳ ತೆರಿಗೆ ವಸೂಲಿ ಕ್ರಮ ಸಂಬAಧಿಸಿದAತೆ ಗ್ರಾಮ ವ್ಯಾಪ್ತಿಯ ಮನೆಗಳಿಗೆ ತೆರಳಿ ಕಂದಾಯ ವಸೂಲಿ ಮಾಡುವಲ್ಲಿ ತೊಡಗಿದ್ದಾರೆ. ಈ ಸಂದರ್ಭ ಕಾರ್ಯದರ್ಶಿ ಕೆ.ಸಿ. ರವಿ, ಕರವಸೂಲಿಗಾರ ಲೋಕೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ನೀರಿನ ದರ ಹಾಗೂ ಕರ ವಸೂಲಾತಿ ಅಭಿಯಾನಕ್ಕೆ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಹಾಗೂ ಪಿಡಿಓ ವಿ.ಜಿ. ಲೋಕೇಶ್ ಚಾಲನೆ ನೀಡಿದರು. ಈ ಹಿಂದಿನಿAದಲೂ ಹಲವಷ್ಟು ಮಂದಿ ನೀರಿನ ತೆರಿಗೆ ಹಾಗೂ ಮನೆಯ ಕಂದಾಯವನ್ನು ಪಾವತಿಸದೆ ಸಾವಿರಾರು ರೂಪಾಯಿ ಬಾಕಿ ಉಳಿಸಿಕೊಂಡಿದ್ದು ಪಂಚಾಯಿತಿ ಸಿಬ್ಬಂದಿಗಳಿಗೆ ವೇತನ, ವಿವಿಧ ವಾರ್ಡ್ಗಳಿಗೆ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯುಂಟಾಗಿದೆ. ಚೆಸ್ಕಾಂ ಇಲಾಖೆಗೆ ಬೀದಿ ದೀಪ, ನೀರು ಸರಬರಾಜು ವಿದ್ಯುತ್ ಬಿಲ್ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ಪಾವತಿಸಬೇಕಾಗಿದ್ದು, ಪಂಚಾಯಿತಿಗೆ ಅನುದಾನದ ಕೊರತೆ ಒಂದೆಡೆಯಾದರೆ ಪಂಚಾಯಿತಿ ಮೂಲಭೂತ ಸೌಲಭ್ಯಗಳಿಗೆ ಬೇಕಾಗಿರುವ ಸಂಪನ್ಮೂಲದ ಕೊರತೆಯು ಸಹ ಬಹಳವಾಗಿ ಕಾಡುತ್ತಿದೆ.

ಈ ದಿಸೆಯಲ್ಲಿ ಸಂಪನ್ಮೂಲವನ್ನು ಕ್ರೋಢೀಕರಿಸಬೇಕಾಗಿರುವುದರಿಂದÀ ಪಂಚಾಯಿತಿ ವತಿಯಿಂದ ಮನೆ ಮನೆಗೆ ಪಂಚಾಯಿತಿಯ ವತಿಯಿಂದ ಮನೆ ಹಾಗೂ ನೀರಿನ ತೆರಿಗೆಯನ್ನು ಪಾವತಿಸುವಂತೆ ಪಂಚಾಯಿತಿ ಸಿಬ್ಬಂದಿಗಳಾದ ಶ್ರೀನಿವಾಸ್ ಹಾಗೂ ಡಿ.ಎಂ. ಮಂಜುನಾಥ್ ಅವರುಗಳು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಗ್ರಾಮಸ್ಥರು ತೆರಿಗೆಯನ್ನು ಪಾವತಿಸುವ ಮೂಲಕ ಪಂಚಾಯಿತಿಯ ಮೂಲಭೂತ ಸಲವತ್ತು, ವೇತನ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸುವಂತೆ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಗ್ರಾಮಸ್ಥರಲ್ಲಿ ಮನವಿಕೊಂಡಿದ್ದಾರೆ. ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯ ಶಬ್ಬೀರ್ ಮತ್ತಿತರರು ಇದ್ದರು.ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ತೆರಿಗೆ ವಸೂಲಿ ಮಾಸಾಚರಣೆ ಕಾರ್ಯಕ್ರಮ ನಡೆಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕಿ ಇರುವ ಮನೆ, ನೀರು ಸೇರಿದಂತೆ ಇನ್ನಿತರÀ ತೆರಿಗೆಗಳನ್ನು ಪಾವತಿಸುವಂತೆ ಸಾರ್ವಜನಿಕರಿಗೆ ಮನೆ ಮನೆಗೆ ತೆÀರಳಿ ಮನವಿ ಮಾಡಲಾಯಿತು.

ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಎಸ್. ಮಂಜುಳ, ಕಾರ್ಯದರ್ಶಿ ಬಿ.ಎಸ್. ಪುನೀತ್‌ಕುಮಾರ್, ಕಂದಾಯ ವಸೂಲಿಗಾರ ಅನಿಲ್ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಬಾಪು ಇದ್ದರು.