ಗೋಣಿಕೊಪ್ಪಲು, ಆ. ೨೭: ಎಲ್ಲಾ ಜಾತಿ, ಧರ್ಮವನ್ನು ಮೀರಿ ಎಲ್ಲಾರು ಒಂದೇ ಎಂದು ಸಂದೇಶ ಸಾರಿದ್ದ ಶ್ರೀ ನಾರಾಯಣ ಗುರೂಜಿಗಳ ಆದರ್ಶ ಗುಣಗಳು ನಿರಂತರವಾಗಿ ಪಾಲನೆಯಾಗಬೇಕು, ಇದರಿಂದ ತಾರತಮ್ಯ ಭಾವನೆ ಕಡಿಮೆ ಆಗಲಿದೆ.
ಇತ್ತೀಚಿನ ದಿನಗಳಲ್ಲಿ ಸಂಘಟನೆಯೊಳಗೆ ಅನ್ಯ ಸಂಘಟನೆ ಒಳ ನುಸುಳುವಿಕೆ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಇವುಗಳಿಗೆ ಸಂಘಟ ಕರು ಅವಕಾಶ ನೀಡಬಾರದು, ಆ ಮೂಲಕ, ಶ್ರೀ ನಾರಾಯಣ ಗುರುಗಳ ಆದರ್ಶ ಹಾಗೂ ಮೂಲ ಉದ್ದೇಶ ವನ್ನು ಪಾಲನೆ ಮಾಡುವಂತಾಗಬೇಕು ಎಂದು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಕಿವಿಮಾತು ಹೇಳಿದರು.
ಗೋಣಿಕೊಪ್ಪಲುವಿನ ಶ್ರೀ ನಾರಾಯಣ ಧರ್ಮ ಪರಿಪಾಲನಾ ಶಾಖ ಯೋಗಂ ವತಿಯಿಂದ ಸ್ಥಳಿಯ ಎಸ್‌ಎನ್‌ಡಿಪಿ ಸಭಾಂಗಣ ದಲ್ಲಿ ಆಯೋಜನೆಗೊಂಡಿದ್ದ ೧೭೦ನೇ ಶ್ರೀ ನಾರಾಯಣ ಗುರು ಜಯಂತಿಯಲ್ಲಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಎಸ್‌ಎನ್‌ಡಿಪಿ ಸಂಘಟನೆ ಉತ್ತಮ ಸಂಘಟನೆಯಾಗಿ ಹೊರಹೊಮ್ಮಿದೆ. ಆದರೆ ಸಂಘಟನೆ ಒಳಗೆ ಅನ್ಯ ಸಂಘಟನೆಗಳು ಒಳ ಪ್ರವೇಶ ಮಾಡುವುದು ಸರಿಯಾದ ಕ್ರಮವಲ್ಲ. ಇಂತಹ ಪ್ರಕ್ರಿಯೆಯಿಂದ ಸಂಘಟನೆಯ ಮೂಲ ಉದ್ದೇಶಕ್ಕೆ ಧಕ್ಕೆ ಎದುರಾಗುವುದನ್ನು ಮನಗಾಣಬೇಕೆಂದರು.
ಶ್ರೀನಾರಾಯಣ್ ಗುರು ಜಯಂತಿ ಆಚರಣಾ ಸಮಿತಿಯ ಅಧ್ಯಕ್ಷ ಪಿ.ಜಿ. ರಾಜಶೇಖರ್ ಅಧ್ಯಕ್ಷತೆ ಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಕಾರ್ಯದರ್ಶಿಯಾದ ಕೆ.ವಿ. ಭಾಸ್ಕರ್ ಮಾತನಾಡಿ, ನಾರಾಯಣ ಗುರುಗಳ ಆದರ್ಶ ಗುಣಗಳನ್ನು ಸಮಾಜ ಬಾಂಧವರು ಮೈಗೂಡಿಸಿಕೊಂಡು ಮುಂದೆ ಸಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್.ಎನ್.ಡಿ.ಪಿ. ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಭಾರತ ದೇಶದಲ್ಲಿ ೩೨ ಲಕ್ಷ ಎಸ್‌ಎನ್‌ಡಿಪಿ ಸದಸ್ಯರಿದ್ದಾರೆ. ಕೊಡಗಿನಲ್ಲಿ ೧೮ ಸಾವಿರ ಮಂದಿ ನೊಂದಾಯಿತ ರಾಗಿದ್ದು, ಸಂಘಟನೆ ಅಗತ್ಯತೆ ಬಗ್ಗೆ ನೂರಾರು ವರ್ಷಗಳ ಹಿಂದೆಯೇ ನಾರಾಯಣ ಗುರುಗಳು ಚಿಂತನೆ ಹರಿಸಿದ್ದರು. ಇದೀಗ ಸಂಘಟನೆ ಹಂತ ಹಂತವಾಗಿ ಜಿಲ್ಲೆಯಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ಸಂಕಷ್ಟಕ್ಕೆ ಸಿಲುಕಿದ ಸಮುದಾಯ ಬಾಂಧವರ ಕಷ್ಟಕ್ಕೆ ಎಸ್‌ಎನ್‌ಡಿಪಿ ಸದಾ ಸ್ಪಂದಿಸುವ ಕೆಲಸ ನಿರಂತರವಾಗಿ ಮಾಡುತ್ತಿದೆ.
ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ, ಸಮಾಜ ಬಾಂಧವರ ಪಾಲ್ಗೊಳ್ಳುವಿಕೆ ಅತಿ ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದ ಮಾಜಿ ನಿರ್ದೇಶಕ ಬಿ.ಎನ್.ಪ್ರಕಾಶ್ ಮಾತನಾಡಿದರು. ಶ್ರೀ ನಾರಾಯಣ ಗುರುಗಳ ಆದರ್ಶ ಗುಣಗಳ ಬಗ್ಗೆ ತಲಚೇರಿಯ ನಿವೃತ್ತ ಶಿಕ್ಷಕರಾದ ಎಸ್.ಕೆ. ವಿನಯನ್ ವಿಚಾರ ಮಂಡನೆ ಮಾಡಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಗೋಣಿಕೊಪ್ಪ ಗ್ರಾ.ಪಂ. ಸದಸ್ಯರಾದ ಸಿ.ಡಿ. ಧ್ಯಾನ್ ಸುಬ್ಬಯ್ಯ, ಶ್ರೀ ನಾರಾಯಣ್ ಗುರು ಧರ್ಮ ಪಾಲನಾ ಶಾಖಾ ಯೋಗಂನ ಗೋಣಿಕೊಪ್ಪ ಅಧ್ಯಕ್ಷ ಟಿ.ಕೆ. ಪುರುಷೋತ್ತಮ್, ಶ್ರೀ ನಾರಾಯಣ್ ಗುರು ಧರ್ಮ ಪಾಲನಾ ಶಾಖಾ ಯೋಗಂನ ಮಹಿಳಾ ಅಧ್ಯಕ್ಷೆ ರಮಾವತಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಪ್ರೋತ್ಸಾಹ ಮಾಡಲಾಯಿತು. ಸಭಾ ಕಾರ್ಯಕ್ರಮದ ನಂತರ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಗಳು ಗಮನ ಸೆಳೆದವು. ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಆರAಭದಲ್ಲಿ ವಿದ್ಯಾರ್ಥಿಗಳ ಸ್ವಾಗತ ನೃತ್ಯದೊಂದಿಗೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು. ರಜನಿ ಮಧುರಾಜ್ ಪಾರ್ಥಿಸಿ, ಎಂ.ಎಸ್. ಸುಬ್ರಮಣಿ ಹಾಗೂ ಡಾ. ದೀಪ್ತಿ ಸುರೇಂದ್ರ ಅವರುಗಳು ಕಾರ್ಯಕ್ರಮ ನಿರೂಪಿಸಿ, ಪಿ.ಆರ್. ಸುರೇಂದ್ರ (ಸೂರ್ಯ) ಸ್ವಾಗತಿಸಿ, ಶಾಜಿ ಅಚ್ಚುತ್ತನ್ ವಂದಿಸಿದರು. ಕಾರ್ಯಕ್ರಮಲ್ಲಿ ವಿ.ವಿ. ಅರುಣ್ ಕುಮಾರ್, ಸುನೀಲ್, ಶಾಂತ ರವಿ, ಕೆ.ಡಿ. ಸುನೀಲ್, ಪ್ರದೀಪ್, ಟಿ.ವಿ. ಪ್ರೇಮನ್, ಯು.ಆರ್. ಮೋಹನ್ ರಾಜ್, ರಾಜೀತ್, ಪಿ.ಕೆ. ಪ್ರವೀಣ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.