ಕೂಡಿಗೆ, ಆ. ೨೭: ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನಿವೃತ್ತ ನೌಕರರ ಸಂಘದ ವತಿಯಿಂದ ಕುಶಾಲನಗರ ಟೌನ್ ಕಾಲೋನಿಯ ಸಂಘದ ಕಚೇರಿಯಲ್ಲಿ ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರ ೧೬೮ನೇ ಜನ್ಮ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮವನ್ನು ಬುದ್ಧವಂದನೆ ಹಾಗೂ ಪುಷ್ಪಾರ್ಚನೆಯೊಂದಿಗೆ ಸಂಘದ ಸದಸ್ಯರಾದ ಬಿ.ಎಸ್.ಎಫ್. ನಿವೃತ್ತ ಯೋಧ ರಮೇಶ್ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸಿದ್ದಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ನಾರಾಯಣ ಗುರುಗಳು ಸಾಮಾನ್ಯ ಬಡ ಜನರ ಜತೆ ಬೆರೆತು, ತಮ್ಮ ವೈಯಕ್ತಿಕ, ಸಾಮಾಜಿಕ ಹಾಗೂ ರಾಜಕೀಯ ಬದುಕಿನಲ್ಲಿ ತಲೆಯೆÄತ್ತಿ ನಿಲ್ಲುವಂತೆ ಮಾಡಲು ನಿರಂತರವಾಗಿ ದುಡಿದಿದ್ದಾಗಿ ಸ್ಮರಿಸಿದರು. ಸಂಘದ ಕಾರ್ಯದರ್ಶಿ ಯು.ಟಿ. ರಾಮಯ್ಯ ಸ್ವಾಗತಿಸಿ, ಉಪಾಧ್ಯಕ್ಷ ಬಿ.ಸಿ. ರಾಜು ವಂದಿಸಿದರು.