ವೀರಾಜಪೇಟೆ, ಆ. ೨೬: ಐತಿಹಾಸಿಕ ಪಟ್ಟಣವಾಗಿರುವ ವೀರಾಜಪೇಟೆಯಲ್ಲಿ ಗೌರಿ-ಗಣೇಶೋತ್ಸವ ವೈಭವದ ಸಂಭ್ರಮಕ್ಕೆ ದಿನಗಣನೆ ಆರಂಭಗೊAಡಿದೆ. ಪಟ್ಟಣದ ೨೨ ಕಡೆಗಳಲ್ಲಿ ಗೌರಿ-ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಆಗಲಿದ್ದು, ಸೆ. ೧೭ ರ ರಾತ್ರಿ ಶೋಭಾಯಾತ್ರೆ ಆರಂಭಗೊAಡು ೧೮ರ ಬೆಳಿಗ್ಗೆ ಸಾಮೂಹಿಕ ವಿಸರ್ಜನೋತ್ಸವ ಮೂಲಕ ಉತ್ಸವಕ್ಕೆ ತೆರೆ ಬೀಳಲಿದೆ.
ಈಗಾಗಲೇ ಸಮಿತಿಗಳು ಸಕಲ ತಯಾರಿಯಲ್ಲಿ ತೊಡಗಿಸಿಕೊಂಡಿದ್ದು, ವೀರಾಜಪೇಟೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗುತ್ತಿದೆ. ವೀರಾಜಪೇಟೆಯ ಗೌರಿ ಗಣೇಶೋತ್ಸವ ಪ್ರಖ್ಯಾತಿ ಪಡೆದಿದ್ದು ಇತಿಹಾಸದ ಪುಟಗಳಲ್ಲಿ ಸುಮಾರು ೧೮೯೦ರಿಂದಲೇ ಆಚರಣೆ ಆರಂಭಗೊAಡಿರುವ ಉಲ್ಲೇಖವಿದೆ. ೨೦೦ಕ್ಕೂ ಅಧಿಕ ವರ್ಷಗಳಿಂದ ಉತ್ಸವವನ್ನು ಆಚರಿಸ ಲಾಗುತ್ತಿದೆ ಎಂದು ಹೇಳಲಾಗುತ್ತದೆ. ಇಂದಿಗೂ ಸಾಂಪ್ರದಾಯಕವಾಗಿ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದ್ದು, ವಿಸರ್ಜನೋತ್ಸವ ಜಿಲ್ಲೆಯ ಗಮನ ಸೆಳೆಯುತ್ತದೆ.
ಭಾದ್ರಪದ ಶುದ್ಧ ಚತುರ್ಥಿ ದಿನದಂದು ಆರಂಭವಾಗುವ ಉತ್ಸವವು ಅನಂತಪದ್ಮನಾಭ ವ್ರತದಂದು ಸಾಮೂಹಿಕವಾಗಿ ವಿದ್ಯುತ್ ಅಲಂಕೃತ ಮಂಟಪಗಳು ಶೋಭಾಯತ್ರೆಯಲ್ಲಿ ಸಾಗಿ ವಿಸರ್ಜನೆ ಗೊಳ್ಳುತ್ತದೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ನಾಡಿನೆಲ್ಲೆಡೆಯಿಂದ ಜನರು ಸಾಗರೋಪಾದಿಯಲ್ಲಿ ಆಗಮಿಸುತ್ತಾರೆ.
ನಗರದ ರಾಜ ಬೀದಿ ಎಂದು ಖ್ಯಾತಿ ಪಡೆದ ಮುಖ್ಯ ಬೀದಿಯ ಜೈನರ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದ ಗೌರಮ್ಮ ದೇವಿಯ ಪಲ್ಲಕ್ಕಿ ಉತ್ಸವ ನಗರದ ಎಲ್ಲೆಡೆ ಸಂಚರಿಸಿ ಭಕ್ತರಿಂದ ಪೂಜೆಗಳನ್ನು ಸ್ವೀಕರಿಸಿ ದೇವಾಲಯ ಕ್ಕೆ ಆಗಮನವಾಗಿ ಉತ್ಸವ ಮೂರ್ತಿಯು ಪ್ರತಿಷ್ಠಾಪನೆಗೊಳ್ಳುತ್ತದೆ.
ಚತುರ್ಥಿಯಂದು ನಗರಕ್ಕೆ ಕಳಸಪ್ರಾಯದಂತಿರುವ ಶ್ರೀಮಹಾ ಗಣಪತಿ ದೇವಾಲಯದಲ್ಲಿ ಲಂಭೋದರನ ಉತ್ಸವ ಮೂರ್ತಿಯು ಪ್ರತಿಪ್ಠಾಪನೆಗೊಂಡ ಬಳಿಕ ಸಿಡಿಮದ್ದು ಸಿಡಿಸಿ ತಿಳಿಸಿದ ನಂತರ ಇತರ ಸ್ಥಳಗಳಲ್ಲಿ ಗಜಾನನ ಉತ್ಸವಮೂರ್ತಿಯು ಪ್ರತಿಷ್ಠಾಪನೆ ಗೊಳ್ಳುವುದು ವಾಡಿಕೆಯಾಗಿದೆ.
ನಡೆದು ಬಂದ ಹಾದಿ
೧೯೬೦ ರಲ್ಲಿ ಕೇವಲ ಎರಡು ಉತ್ಸವ ಸಮಿತಿಗಳು ಮಾತ್ರ ಗೌರಿ ಗಣೇಶನ ಉತ್ಸವವನ್ನು ಹತ್ತು ದಿನಗಳ ಕಾಲ ಆಚರಿಸಿ ಅದರಂತೆ ಅನಂತ ಪದ್ಮನಾಭ ವೃತದಿನದಂದು ಸಾಮೂಹಿಕ ಮೆರವಣಿಗೆಯಲ್ಲಿ ಉತ್ಸವ ಮೂರ್ತಿಗಳನ್ನು ವಿಸರ್ಜಿಸುತ್ತಿದ್ದವು. ೧೯೬೪-೬೫ ರಿಂದ ಉತ್ಸವಕ್ಕೆ ಇನ್ನೆರಡು ಸಮಿತಿಗಳು ಸೇರಿದಂತೆ ೨೦೦೦ದ ವೇಳೆಗೆ ಸುಮಾರು ೧೩ ಉತ್ಸವ ಸಮಿತಿಗಳು ೨೦೧೬ರ ಹೊತ್ತಿಗೆ ೧೮ ನಂತರ ೨೦೨೨ ರ ವೇಳೆಗೆ ೨೨ ಉತ್ಸವ ಸಮಿತಿಗಳು ಗೌರಿ ಗಣೇಶನನ್ನು ಪ್ರತಿಷ್ಠಾಪಿಸಿ ಹತ್ತು ದಿನಗಳ ಕಾಲ ರಾತ್ರಿ ಪೂಜಿಸಿ ಅನಂತ ಪದ್ಮನಾಭ ವ್ರತದ ದಿನದಂದು ಸಾಮೂಹಿಕ ಮೆರವಣಿಗೆ ನಡೆಸಿ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಬಳಿಯಿರುವ ಪವಿತ್ರವಾದ ಗೌರಿಕೆರೆಯಲ್ಲಿ ಶಾಸ್ತೊçÃಕ್ತವಾಗಿ ಎಲ್ಲ ಉತ್ಸವ ಮೂರ್ತಿಗಳನ್ನು ವಿಸರ್ಜಿÀಲಾಗುತ್ತಿದೆ.
ಈ ವರ್ಷದ ಪಂಚಾAಗದAತೆ ಸೆಪ್ಟೆಂಬರ್ ತಿಂಗಳ ೬ ರಂದು ಗೌರಿ ವೃತ, ೭ ರಂದು ಗಣೇಶ ಚತುರ್ಥಿ ನಿಗದಿಯಾಗಿದೆ. ಈಗಾಗಲೇ ವಿವಿಧ ಸಮಿತಿಗಳ ಸದಸ್ಯರುಗಳು ಗಣೇಶೋತ್ಸವ ಆಚರಣೆ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಗೌರಿ-ಗಣೇಶೋತ್ಸವ ಸಮಿತಿಗಳು
ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿಯು ತನ್ನ ಬೆಳ್ಳಿ ಹಬ್ಬವನ್ನು ವಿಶೇಷವಾಗಿ ಆಚರಿಸಿ ಜನಮನದಲ್ಲಿ ಹೆಸರುಗಳಿಸಿ ೩೪ನೇ ವರ್ಷದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತ್ತಿದೆ. ಮಂಗಳೂರಿನ ವಿದ್ಯುತ್ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಗಳಿಂದ ಆರಾಧಿಸಿ ಅನಂತ ಪದ್ಮನಾಭ ವ್ರತದಂದು ವಿಸರ್ಜನೆ ಮಾಡಲಿದೆ. ಕೊನೆಯ ದಿನದಂದು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ.
ಪಂಜರಪೇಟೆಯ ಶ್ರೀ ವಿನಾಯಕ ಸೇವಾ ಸಮಿತಿ ೩೦ನೇ ವರ್ಷದ ಸಂಭ್ರಮದಲ್ಲಿದೆ. ಸಮಿತಿಯು ಉತ್ಸವ ಮೂರ್ತಿಯನ್ನು ಮಂಗಳೂರಿನ ವಿದ್ಯುತ್ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಗಳಿಂದ ಆರಾಧಿಸಿ ಅನಂತ ಪದ್ಮನಾಭ ವ್ರತದಂದು ವಿಸರ್ಜನೆ ಮಾಡಲಾಗುತ್ತದೆ.
ಪಂಜರಪೇಟೆ ಗಣಪತಿ ಬೀದಿಯ ಶ್ರೀ ಮಹಾ ಗಣಪತಿ ಸೇವಾ ಸಂಘ ಸಮಿತಿಯು ತನ್ನ ೩೨ನೇ ವರ್ಷವನ್ನು ಪೂರೈಸುತ್ತಿದೆ. ಸಮಿತಿಯು ಉತ್ಸವ ಮೂರ್ತಿಯನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ವಿಶೇಷ ಪೂಜೆಗಳಿಂದ ನವ ರಾತ್ರಿಗಳಲ್ಲಿ ಆರಾಧಿಸಿ ಅಂತಿಮ ದಿನದಂದು ವಿಸರ್ಜನೆ ಮಾಡುತ್ತದೆ.
ಅಪ್ಪಯ್ಯ ಸ್ವಾಮಿ ರಸ್ತೆಯ ಶ್ರೀ ಬಾಲಾಂಜನೇಯ ವಿನಾಯಕ ಉತ್ಸವ ಸಮಿತಿಯು ೮ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದೆ. ಜೈನರ ಬೀದಿಯ ಶ್ರೀಬಸವೇಶ್ವರ ದೇವಾಲಯ ಸಮಿತಿ ಇತಿಹಾಸದಿಂದ ಆರಂಭವಾದ
(ಮೊದಲ ಪುಟದಿಂದ) ಗೌರಿ-ಗಣೇಶೋತ್ಸವ ಆಚರಣೆಯು ಇಂದಿಗೂ ಸುಲಲಿತವಾಗಿ ನಡೆಸಿಕೊಂಡು ಬರುತ್ತಿದೆ, ನವ ದಿನಗಳಲ್ಲಿ ಸಂಸ್ಕೃತಿಗೆ ಅನುಗುಣವಾಗಿ ಸಾಂಪ್ರಾದಾಯಿಕ ಶೈಲಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಉತ್ಸವ ಮೂರ್ತಿಗಳನ್ನು ಅನಂತ ಪದ್ಮನಾಭ ವ್ರತದಂದು ವಿಸರ್ಜನೆ ಮಾಡುತ್ತದೆ.
ಗಡಿಯಾರ ಕಂಬದ ಬಳಿಯ ಮಹಾಗಣಪತಿ ದೇವಾಲಯ ೧೮೫೫ರಲ್ಲಿ ತಮಿಳುನಾಡಿನ ಶ್ರೀ ರಾಮಸ್ವಾಮಿ ಪಿಳ್ಳೆಯವರಿಂದ ಗಣಪತಿ ಮೂರ್ತಿಯನ್ನು ಸಣ್ಣದಾದ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಿ ಸುಮಾರು ೧೬೨ ವರ್ಷಗಳು ಸಂದಿವೆೆ. ಇಲ್ಲಿ ನಡೆಯುವ ಉತ್ಸವ ಆಧುನಿಕತೆಯ ಮೆರುಗು ಇಲ್ಲದೆ ಅಪ್ಪಟ್ಟ ಸಂಪ್ರದಾಯಕ್ಕೆ ಒತ್ತು ನೀಡಿ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಕೊನೆಯ ದಿನ ಹೂವಿನ ಮಂಟಪದಲ್ಲಿ ಉತ್ಸವ ಮೂರ್ತಿಯನ್ನು ಕೊಂಡೊಯ್ದು ವಿಸರ್ಜಿಸುವುದು ವಿಶೇಷವಾಗಿದೆ.
ಅರಸು ನಗರದ ಶ್ರೀ ವಿಘ್ನೇಶ್ವರ ಸೇವಾ ಸಮಿತಿ ೪೪ ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದೆ. ಅಂಗಾಳ ಪರಮೇಶ್ವರಿ ದೇವಸ್ಥಾನ ತೆಲುಗು ಶೆಟ್ಟರ ಬೀದಿಯ ವಿನಾಯಕ ಭಕ್ತ ಮಂಡಳಿ ಶಕ್ತಿ ದೇವತೆಯಾದ ಅಂಗಾಳ ಪರಮೇಶ್ವರಿ ದೇವಾಲಯದಲ್ಲಿ ನಡೆಯುತ್ತಿರುವ ಉತ್ಸವವು ೩೯ನೇ ವರ್ಷಕ್ಕೆ ಕಾಲಿರಿಸಿದೆ. ನವ ದಿನಗಳಲ್ಲಿ ಗಣಪತಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಲಾಗಿ ಕೊನೆಯ ದಿನ ವಿಸರ್ಜಿಸಲಾಗುವುದು. ನೆಹರು ನಗರದ ನೇತಾಜಿ ಯುವಕ ಸಂಘದಿAದ ಆಚರಿಸಲಾಗುವ ಉತ್ಸವವು ೩೩ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಯುವಕ ಸಂಘವು ತನ್ನ ಜನಪರ ಕಾರ್ಯಕ್ರಮಗಳನ್ನು ಮಾಡುತ್ತ ಗಣೇಶೋತ್ಸವವನ್ನು ವಿಶೇಷವಾಗಿ ಆಚರಿಸುತ್ತದೆ.
ದಖ್ಖನಿ ಮೊಹಲ್ಲದ ವಿಜಯ ವಿನಾಯಕ ಉತ್ಸವ ಸಮಿತಿ ೩೫ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಉತ್ಸಾಹಿ ಯುವಕರಿಂದ ತುಂಬಿದ ಸಮಿತಿಯು ಉತ್ಸವ ಮೂರ್ತಿಯನ್ನು ಮಂಗಳೂರಿನ ವಿದ್ಯುತ್ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಗಳಿಂದ ಆರಾಧಿಸಿ ಅನಂತ ಪದ್ಮನಾಭ ವ್ರತದಂದು ವಿಸರ್ಜನೆ ಮಾಡಲಾಗುವುದು. ಮಲೆತಿರಿಕೆ ಬೆಟ್ಟದ ಕಣ್ಮಣಿ ಯುವಕ ಸಂಘ ಜನಪರ ಕಾರ್ಯಕ್ರಮಗಳನ್ನು ಮುಂದುವರಿಸಿಕೊAಡು ಇಂದಿನ ೩೦ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದೆ. ಅಂತಿಮ ದಿನದಂದು ಸಾಮೂಹಿಕವಾಗಿ ಪ್ರಸಿದ್ಧ ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು.
ಸುಂಕದಕಟ್ಟೆಯ ಸರ್ವಸಿದ್ಧಿ ವಿನಾಯಕ ಉತ್ಸವ ಸಮಿತಿ ೨೫ನೇ ವರ್ಷಕ್ಕೆ ಪಾದಾರ್ಪಣೆಗೈದಿದೆ. ಗಾಂಧಿನಗರದ ಶ್ರೀ ಗಣಪತಿ ಸೇವಾ ಸಮಿತಿ ೩೨ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದೆ ಕೆ.ಬೋಯಿಕೇರಿಯ ಶ್ರೀ ವಿಘ್ನೇಶ್ವರ ಸೇವಾ ಸಮಿತಿಯು ತನ್ನ ೩೬ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.
ಚಿಕ್ಕಪೇಟೆಯ ಜಲದರ್ಶಿನಿ ಗಣೇಶೋತ್ಸವ ಸಮಿತಿ ಗಣೇಶೋತ್ಸವ ಆಚರಣೆ ೨೭ನೇ ವರ್ಷಕ್ಕೆ ಕಾಲಿರಿಸಿದೆ.
ಪಟ್ಟಣ ಪಂಚಾಯಿತಿಯ ಪೌರ ಸೇವಾ ನೌಕರರ ಸಂಘದ ಗಣಪತಿ ಸೇವಾ ಸಮಿತಿ ತಮ್ಮ ೨೦ನೇ ವರ್ಷದ ಉತ್ಸವವನ್ನು ಆಚರಿಸುತ್ತಿದೆ. ಮೀನುಪೇಟೆಯ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ ೧೩ನೇ ವರ್ಷದ ಸಂಭ್ರಮದಲ್ಲಿದೆ. ಹರಿಕೆರೆ ಸುಣ್ಣದ ಬೀದಿಯ ಶ್ರೀ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ ತನ್ನ ೨೫ನೇ ವರ್ಷದ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದೆ. ಕುಕ್ಲೂರು ಶ್ರೀ ವಿನಾಯಕ ಯುವಕರ ಸಮಿತಿ ೨೪ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದೆ. ಇತಿಹಾಸ ಪ್ರಸಿದ್ದ ಗೌರಿಕೆರೆಯ ಪಕ್ಕ ಇರುವ ಗೌರಿಕೆರೆ ಸೇವಾ ಸಮಿತಿ ಅಂತಿಮ ದಿನದಂದು ಸಾಮೂಹಿಕವಾಗಿ ಗೌರಿಕೆರೆಯಲ್ಲಿ ಉತ್ಸವ ಮೂರ್ತಿಯನ್ನು ವಿಸರ್ಜನೆ ಮಾಡಲಿದೆ ಶಿವಕೇರಿ ಶ್ರೀ ವಿನಾಯಕ ಉತ್ಸವ ಸಮಿತಿ ಮೂರನೇ ಬಾರಿಗೆ ಶೋಭಾಯಾತ್ರೆಯಲ್ಲಿ ಭಾಗವಹಿಸುತ್ತಿದೆ.
ನಗರದ ೨೨ ಸ್ಥಳಗಳಲ್ಲಿ ವಿದ್ಯುಕ್ತವಾಗಿ ಚತುರ್ಥಿಯಂದು ವಿಘ್ನ ವಿನಾಯಕನ ವಿವಿಧ ಭಂಗಿಗಳಲ್ಲಿರುವ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುವುದು. ನಗರದ ಆಯ್ದ ಸಮಿತಿಗಳು ೯ ದಿನಗಳ ಕಾಲ ವಿಶೇಷವಾಗಿ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿರುತ್ತದೆ. ಅಲ್ಲದೇ ಕೆಲವು ಸಮಿತಿಯಿಂದ ಭಕ್ತರಿಗೆ ಪ್ರತಿದಿನ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಎಲ್ಲಾ ಸಮಿತಿಗಳ ಉತ್ಸವ ಮೂರ್ತಿಗಳನ್ನು ಅನಂತಪದ್ಮನಾಭ ವೃತದಂದು ಅಂದರೆ ಸೆಪ್ಟೆಂಬರ್ ೧೭ರ ರಾತ್ರಿ ವಿದ್ಯುತ್ ಅಲಂಕೃತ ಪಂಟಪದಲ್ಲಿ ಕುಳ್ಳಿರಿಸಿ ಶೋಭಾಯತ್ರೆಯ ಮೂಲಕ ಮುಖ್ಯ ಬೀದಿಗಾಗಿ ಸಾಗಿ ಅಂದು ಮುಂಜಾನೆ ಗೌರಿಕೇರೆಯಲ್ಲಿ ವಿಸರ್ಜನೆ ಮಾಡುತ್ತವೆ.
ವೀರಾಜಪೇಟೆ ನಗರ ವ್ಯಾಪ್ತಿಯಲ್ಲಿ ಸುಮಾರು ೩೧ ಬಡಾವಣೆ, ನಗರದ ಹೊರವಲಯಗಳಲ್ಲಿ ಮನೆಗಳಲ್ಲಿ ಸೇರಿದಂತೆ ಸುಮಾರು ೧೦೦ಕ್ಕೂ ಹೆಚ್ಚು ಕಡೆಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವುದು ಗಮನಾರ್ಹ ವಾಗಿದೆ. ರಾತ್ರಿ ವೇಳೆ ಕಂಗೊಳಿಸುವ ಬೆಳಕಿನ ಚಿತ್ತಾರ, ಕುಣಿತ ಸಂಭ್ರಮ ವಿಸರ್ಜನೋತ್ಸವದ ಕಳೆಯನ್ನು ದುಪ್ಪಟ್ಟುಗೊಳಿಸುತ್ತದೆ.