ಕಣಿವೆ, ಆ. ೨೬: ಬಡವರ ಬಾದಾಮಿ, ರೈತರ ಅಲ್ಪಾವಧಿಯ ದುಡಿಮೆಯ ಸಿಹಿಗೆಣಸು ಫಸಲಿಗೆ ಹಿಂದೆAದೂ ಸಿಗಲಾರದ ಮುಂದೆಯೂ ದೊರಕಲಾರದ ಅತ್ಯಂತ ಅಚ್ಚರಿಯ ದರ ನಿಗಧಿಯಾಗಿದ್ದು ಬೆಳೆಗಾರ ರೈತ ಫುಲ್ ಖುಷಿಯಾಗಲು ಕಾರಣವಾದ ಅಂಶವಾಗಿದೆ.
ಅAದರೆ ಒಂದು ಕೆಜಿ ಸಿಹಿ ಗೆಣಸಿಗೆ ಮಾರುಕಟ್ಟೆಯಲ್ಲಿ ೫೦ ರೂ. ೬೦ ಕೆಜಿ ತೂಕವುಳ್ಳ ಚೀಲವೊಂದಕ್ಕೆ ೩೦೦೦ ರೂ ಹಣ ದೊರಕಲಾರಂಭಿಸಿದೆ. ಈ ಹಿಂದೆAದೂ ಇಂತಹ ಗರಿಷ್ಠ ದರ ರೈತರಿಗೆ ದೊರಕಿರಲಿಲ್ಲ.
ಪುನರ್ವಸು -ಪುಷ್ಯ ಮಳೆಯ ಕಾಟ :
ಎಕರೆಯೊಂದಕ್ಕೆ ಗರಿಷ್ಠ ೪೦ ಸಾವಿರ ಖರ್ಚು ತಗಲುವ ಹಾಗೂ ಕನಿಷ್ಟ ೪ ತಿಂಗಳಿAದ ಗರಿಷ್ಠ ೬ ತಿಂಗಳ ಅವಧಿಯಲ್ಲಿ ಬೆಳೆಯುವ ಈ ಸಿಹಿ ಗೆಣಸು ಬೆಳೆಗೆ ಈ ಬಾರಿ ಸುರಿದ ಗರಿಷ್ಟ ಪ್ರಮಾಣದ ಮಳೆಯಿಂದಾಗಿ ಗೆಣಸು ಫಸಲಿನ ಇಳುವರಿ ಪೂರ್ಣ ಪ್ರಮಾಣದಲ್ಲಿ ಕುಂಠಿತವಾಗಲು ಕಾರಣ ಎನ್ನಲಾಗಿದೆ.
ಕುಶಾಲನಗರ ತಾಲೂಕಿನ ಕೂಡಿಗೆ, ತೊರೆನೂರು, ಹೆಬ್ಬಾಲೆ ಹಾಗೂ ಶಿರಂಗಾಲ ಗ್ರಾಮ ಪಂಚಾಯಿತಿಗಳ ಮೂವತ್ತಕ್ಕೂ ಅಧಿಕ ಗ್ರಾಮಗಳಲ್ಲಿ ಕೈಗೊಳ್ಳುವ ಈ ಬೆಳೆ ಈ ಬಾರಿ ಇಳುವರಿ ಕಟ್ಟದೇ ಶೀತಕ್ಕೆ ಸಿಲುಕಲು ಕಾರಣವಾಯಿತು ಎಂದು ಸಿಹಿ ಗೆಣಸು ಬೆಳೆಗಾರರಾದ ತೊರೆನೂರು ಗ್ರಾ.ಪಂ. ಅಧ್ಯಕ್ಷರೂ ಆಗಿರುವ ಬೆಳೆಗಾರ್ತಿ ಶೋಭಾ ಪ್ರಕಾಶ್, ಅಳುವಾರದ ಪ್ರೇಮಕುಮಾರ್ ಇತರರು ನೊಂದು ನುಡಿದರು.
ಎಕರೆಗೆ ಕೇವಲ ಒಂದು ಟನ್ ಇಳುವರಿ :
ಮಳೆಗಾಲದ ಪೂರ್ವದಲ್ಲಿ ಉತ್ತಮವಾಗಿ ಬೆಳೆಯುವ ಸಿಹಿ ಗೆಣಸು ಫಸಲು ಎಕರೆಗೆ ೫ ರಿಂದ ೭ ಟನ್ ನಿರೀಕ್ಷಿಸಬಹುದಾದರೂ ಈ ಬಾರಿ ಕೇವಲ ಒಂದರಿAದ ಒಂದೂವರೆ ಟನ್ ಇಳುವರಿ ಮಾತ್ರ ಸಿಗುತ್ತಿದೆ.
ಹೀಗಾಗಿ ಬೇಡಿಕೆಗೆ ಬೇಕಾದ ಈ ಉತ್ಪನ್ನವನ್ನು ಪೂರೈಸಲು ಸಾಧ್ಯವಾಗದ ಕಾರಣ ಈ ಬಾರಿ ಈ ಗೆಣಸಿಗೆ ಐತಿಹಾಸಿಕವಾದ ಸಾರ್ವಕಾಲಿಕವಾದ ದಾಖಲೆಯ ದರ ದೊರೆತಿದೆ ಎಂದು ಅರಿಶಿನಗುಪ್ಪೆಯ ಪ್ರಗತಿಪರ ಕೃಷಿಕರಾದ ಎಂ.ಟಿ.ಬೇಬಿ ಹಾಗೂ ತೊರೆನೂರು ಗ್ರಾಮದ ರೈತ ಮಹಿಳೆ ರೂಪ ಮಹೇಶ್ ಹೇಳುತ್ತಾರೆ.
೨೦ರ ಗಡಿ ದಾಟಿದಾಗ ಬಹುತೇಕ ರೈತರು ಕಟಾವು :
ಸಾಮಾನ್ಯವಾಗಿ ಸಿಹಿಗೆಣಸು ಫಸಲಿಗೆ ೧೫ ರಿಂದ ೨೦ ರೂ. ಗಳೇ ಇದೂವರೆಗಿನ ಅತ್ಯುನ್ನತ ದರ. ಆದರೆ ಕಳೆದ ಹದಿನೈದು ದಿನಗಳ ಹಿಂದೆ ಇದು ೨೦ ರೂ. ದಾಟಿದಾಗ ಅಳುವಾರದ ಶಿವಪ್ಪ ಎಂಬವರು ಗೆಣಸಿನ ದರ ಕೇಳಿ ಹಿರಿ ಹಿರಿ ಹಿಗ್ಗಿ ಕೂಡಲೇ ಕಟಾವು ಮಾಡಿ ಕೈ ತುಂಬಾ ಕಾಸು ಎಣಿಸಿದ್ದರು.
ಆದರೆ ಇದೇ ಫಸಲು ಕೇವಲ ಹತ್ತೇ ದಿನಗಳ ಅಂತರದಲ್ಲಿ ೫೦ ರೂ. ದಾಟಿದ್ದು ನೋಡಿ ಇದೀಗ ತಾವೊಬ್ಬರೇ ಕೈ ಕೈ ಹಿಸುಕಿ ಕೈಗೆ ಬಂದದ್ದು ಕಣ್ಣೆದುರೇ ಹೋಯ್ತಲ್ಲಪ್ಪಾ ಎಂದು ಗ್ರಾಮ ದೇವತೆ ಅಳುವಾರದಮ್ಮನ ಬೇಡಿ ತಮಗೆ ತಾವೇ ಸಮಧಾನ ಪಡುತ್ತಿದ್ದಾರೆ. ಅಂದರೆ ಯಾವೊಬ್ಬ ಬೆಳೆಗಾರನೂ ಊಹಿಸಲಾರದ ಅತ್ಯಂತ ಗರಿಷ್ಟ ದರದ ನಾಗಾಲೋಟಕ್ಕೆ ಇದರ ಬೆಲೆ ಏರುತ್ತಲೇ ಇದೆ.
ಎಲ್ಲಿಗೆ ಸಾಗಾಟ - ಮತ್ತು ಇದರ ಉಪಯೋಗ :
ರೈತರು ಮಳೆಗಾಲದಲ್ಲಿ ಬೆಳೆಯುವ ಸಾಮಾನ್ಯವಾದ ಅಲ್ಪಾವಧಿಯ ಈ ಸಿಹಿ ಗೆಣಸು ಫಸಲನ್ನು ತಮಿಳುನಾಡು, ಬಾಂಬೆ, ಕೇರಳ ಹಾಗೂ ಮಹಾರಾಷ್ಟçಗಳಿಗೆ ಸಾಗಾಟ ಮಾಡಲಾಗುತ್ತದೆ. ಅತ್ಯಂತ ಜನಪ್ರಿಯ ತಿನಿಸಾದ ಈ ಸಿಹಿ ಗೆಣಸಿನಲ್ಲಿ ಮನುಷ್ಯನ ದೇಹಕ್ಕೆ ಮುಖ್ಯವಾಗಿ ಬೇಕಾದ ಅನೇಕ ಪೌಷ್ಟಿಕಾಂಶಗಳ ಆಗರವೇ ಇದೆ ಎನ್ನಲಾಗುತ್ತಿದೆ. ಸಿಹಿಗೆಣಸು ಸೇವಿಸುವುದರಿಂದ ಸಣ್ಣಗೆ ತೆಳ್ಳಗೆ ಇರುವವರ ದೇಹದ ತೂಕ ಆರೋಗ್ಯ ದಾಯಕವಾಗಿ ಹೆಚ್ಚಳವಾಗುತ್ತದೆ.
ಕಿಡ್ನಿ ಕ್ಯಾನ್ಸರ್ ನಿವಾರಕ, ಶ್ವಾಸಕೋಶದ ತೊಡಕು ಹಾಗೂ ಗಂಟಲು ನೋವು, ಅಸ್ತಮಾ ಸಮಸ್ಯೆಯನ್ನೂ ನಿವಾರಿಸುತ್ತದೆ. ಇದರ ಸೇವನೆಯಿಂದಾಗಿ ಮ್ಯಾಗ್ನೇಷಿಯಂ, ಸತು ಪ್ರೋಟೀನ್ ಗಳು ಹೆಚ್ಚಳವಾಗಿವೆ. ಹಾಗೂ ಇದರಲ್ಲಿ ವಿಟಮಿನ್ ಬಿ ಮತ್ತು ಸಿ ನಿಚ್ಚಳವಾಗಿದೆ ಎನ್ನಲಾಗುತ್ತಿದೆ.
ಬೆಲೆ ಬಂದರೆ ಒಂದೇ ಬೆಳೆಯತ್ತ ರೈತರ ಚಿತ್ತ :
ಈ. ವರ್ಷದ ಮಳೆಗಾಲದಲ್ಲಿ ಇರುವ ಸಿಹಿ ಗೆಣಸಿನ ಐತಿಹಾಸಿಕವಾದ ಈ ಬೆಲೆಯನ್ನು ಕಂಡ ಬಹಳಷ್ಟು ಕೃಷಿಕರು ಮತ್ತೆ ಇದೇ ಬೆಲೆಯ ನಿರೀಕ್ಷೆಯಲ್ಲಿ ಯಥೇಚ್ಚವಾಗಿ ಬೆಳೆಯುವ ಕಾರಣ ಮತ್ತೆ ಮುಂದಿನ ಅವಧಿಯ ಬೆಳೆಯ ಹೊತ್ತಿಗೆ ಗಣನೀಯವಾಗಿ ಕುಸಿದರೂ ಅಚ್ಚರಿ ಪಡುವಂತಿಲ್ಲ.
ಏಕೆAದರೆ ಈಗ ಕೆಜಿ ಗೆ ೫೦ ರಿಂದ ೫೫ ರೂ ನೋಡಿರುವ ಹಳ್ಳಿಯ ಬಡ ರೈತ ಕಳೆದ ಎರಡು ಮೂರು ವರ್ಷಗಳ ಹಿಂದೆ ಇದೇ ಸಿಹಿ ಗೆಣಸನ್ನು ಕೆಜಿಗೆ ಕೇವಲ ೩ ರೂಪಾಯಿಗೂ ಮಾರಾಟ ಮಾಡಿರುವುದುಂಟು.
ಹಾಗಾಗಿ ಕೃಷಿಕರು ವೈವಿಧ್ಯಮಯವಾದ ಕೃಷಿ ಫಸಲನ್ನು ಬೆಳೆದರೆ ಯಾವಾಗಲೂ ಬೆಳೆ ಹಾಗೂ ಬೆಲೆಗಳನ್ನು ಸಮನಾಂತರವಾಗಿ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಈ ವರ್ಷ ಭೂಮಿಗೆ ಯಥೇಚ್ಚವಾದ ಮಳೆಯ ನೀರು ಸುರಿದು ಹರಿದ ಪರಿಣಾಮವಾಗಿ ಇಳುವರಿ ಕುಂಠಿತವಾಗಲು ಕಾರಣ ಎನ್ನುತ್ತಾರೆ ಸಿದ್ದಲಿಂಗಪುರದ ಎಂ.ಟಿ.ಬೇಬಿ. -ವಿಶೇಷ ವರದಿ : ಕೆ.ಎಸ್.ಮೂರ್ತಿ