ವೀರಾಜಪೇಟೆ, ಆ. ೨೬: ವೀರಾಜಪೇಟೆ ಪಟ್ಟಣ ಸೇರಿದಂತೆ ಕ್ಷೇತ್ರದ ವಿವಿಧೆಡೆ ನಡೆಯುವ ಗಣೇಶೋತ್ಸವ ಆಚರಣೆ ಕಾನೂನು ಪಾಲನೆಯೊಂದಿಗೆ ನಡೆಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ ಆಡಳಿತದೊಂದಿಗೆ ಕೈಜೋಡಿಸುವಂತೆ ವೀರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಕರೆ ನೀಡಿದರು.

ವೀರಾಜಪೇಟೆ ಗೌರಿ-ಗಣೇಶ ಜನೋತ್ಸವ ಸಮಿತಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ ಪೂರ್ವ ಭಾವಿ ಸಭೆಯು ವೀರಾಜಪೇಟೆ ಪುರಸಭೆಯ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪೊನ್ನಣ್ಣ, ಪ್ರಖ್ಯಾತ ವಾಗಿರುವ ವೀರಾಜಪೇಟೆಯ ಐತಿಹಾಸಿಕ ಗೌರಿ- ಗಣೇಶ ಉತ್ಸವವು ವಿಜೃಂಭಣೆಯಿAದ ಆಚರಿಸಿಕೊಂಡು ಬರಲಾಗುತ್ತಿದೆ. ಕಾನೂನು, ನಿಯಮ ಪಾಲನೆ ಮಾಡುವುದರೊಂದಿಗೆ ಈ ಬಾರಿಯೂ ಅಚರಣೆಯಾಗಬೇಕು. ಆಹಿತಕರ ಘಟನೆಗಳಿಗೆ ಅನುವು ಮಾಡಿ ಕೊಡದೆ ಸಾಮರಸ್ಯದ ಹಬ್ಬ

ಆಚರಣೆಯಾಗಬೇಕು ಎಂದು ಹೇಳಿದರು. ಜೈನರ ಬೀದಿಯ ಬಸವೇಶ್ವರ ಗೌರಿ-ದೇಗುಲದ ಸಮಿತಿಯ ಸದಸ್ಯ ನರೇಂದ್ರ ಕಾಮತ್ ಮಾತನಾಡಿ, ನಗರದಲ್ಲಿ ರಾತ್ರಿ ೮ ಗಂಟೆಗೆ ಮಹಾಪೂಜೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ. ಅದರೆ, ಕಾರ್ಯಕ್ರಮ ನಡುವಿನಲ್ಲಿ ಇಲಾಖೆಯ ಆಧಿಕಾರಿಗಳು ಕಾರ್ಯಕ್ರಮ ಸ್ಥಗಿತಗೊಳಿಸುವಂತೆ ತಾಕೀತು ಮಾಡುತ್ತಾರೆ. ಈ ಹಿನ್ನೆಲೆ ಸಮಯ ಅವಕಾಶ ನೀಡುವಂತಗಾಬೇಕು ಎಂದು ಹೇಳಿದರು.

ಕಾವೇರಿ ಗಣೇಶೋತ್ಸವ ಸಮಿತಿಯ ನಂಬುಡಮಾಡ ರಾಜಪ್ಪ ಮಾತನಾಡಿ, ಸ್ಥಳೀಯ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟನಲ್ಲಿ ರಾತ್ರಿ ವೇಳೆಯಲ್ಲಿ ಕಾರ್ಯಕ್ರಮಗಳನ್ನು ಸತತ ೩೦ ವರ್ಷಗಳಿಂದ ಹಮ್ಮಿಕೊಂಡು ಬರಲಾಗುತ್ತಿದೆ. ಆದರೆ, ಸರ್ಕಾರಿ ಅದೇಶದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಅಯೋಜನೆ ಮಾಡುವುದು ಕಷ್ಟ ಸಾಧ್ಯವಾಗಿದ್ದು, ಶಾಸಕರು ಕಲಾವಿದರ ಮತ್ತು ಶಾಲಾ ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.

ಪುರಸಭೆಯ ಮುಖ್ಯಾಧಿಕಾರಿ ಚಂದ್ರಕುಮಾರ್ ಮಾತನಾಡಿ, ಜಲ ಮಾಲಿನ್ಯ ಮಂಡಳಿಯ ಆದೇಶದಂತೆ ಪಿ.ಓ.ಪಿ ಮೂರ್ತಿಗಳನ್ನು ನಿಷೇಧÀ ಮಾಡಲಾಗಿದ್ದು, ಮಣ್ಣಿನ ಮೂರ್ತಿಗಳನ್ನು ಎಲ್ಲಾ ಸಮಿತಿಗಳು ಬಳಸಬೇಕು. (ಮೊದಲ ಪುಟದಿಂದ) ವಿಸರ್ಜನೆ ವೇಳೆ ಕೆರೆಯಲ್ಲಿ ಮೂರ್ತಿಯನ್ನು ಬಿಡಬೇಕು. ಹೂವು ಹಾಗೂ ಇತರ ವಸ್ತುಗಳನ್ನು ನದಿ ಹಾಗೂ ಕೆರೆಗಳಲ್ಲಿ ಹಾಕುವಂತಿಲ್ಲ ಎಂದರು. ಆರ್ಜಿ ವಿಲೇವಾರಿಗಾಗಿ ಏಕಗಾವಕ್ಷಿ ಕೇಂದ್ರ ರಚಿಸಲಾಗಿದೆ. ಉತ್ಸವವು ಯಶಸ್ವಿಗಾಗಿ ಪುರಸಭೆಯು ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಹೇಳಿದರು. ವೀರಾಜಪೇಟೆ ಪೊಲೀಸ್ ಉಪ ವಿಭಾಗದ ಅಧೀಕ್ಷಕ ಮೋಹನ್ ಕುಮಾರ್ ಮಾತನಾಡಿ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ೧೦೧ ಸ್ಥಳಗಳಲ್ಲಿ ಸಾರ್ವಜನಿಕ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಉತ್ಸವಕ್ಕೆ ಧ್ವನಿವಧÀðಕ ಅಳವಡಿಕೆಯ ಕುರಿತು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಬೆಳಿಗ್ಗೆ ೬ ರಿಂದ ರಾತ್ರಿ ೧೦ ರವರೆಗೆ ಬಳಕೆ ಮಾಡಬಹುದು. ರಾತ್ರಿ ೧೦ ರಿಂದ ಮುಂಜಾನೆ ೬ ರವರೆಗೆ ಯಾವುದೇ ಧ್ವನಿವರ್ಧಕ ಅಳವಡಿಸಲು ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಗೌರಿ- ಗಣೇಶೋತ್ಸವ ಜನೋತ್ಸವ ಸಮಿತಿಯ ಕಾರ್ಯದರ್ಶಿ ಶಬರೀಶ್ ಶೆಟ್ಟಿ, ತಹಶೀಲ್ದಾರ್ ರಾಮಚಂದ್ರ ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ.ರಾಜೇಶ್ ಅವರು ಮಾತನಾಡಿದರು. ಸಭೆಯಲ್ಲಿ ಚೆಸ್ಕಾಂ ಅಭಿಯಂತರ ಸುರೇಶ್, ಲೋಕೋಪಯೋಗಿ ಇಲಾಖೆಯ ಅಭಿಯಂತರ ಲಿಂಗರಾಜ್ ಆಗ್ನಿ ಶಾಮಕ ಇಲಾಖೆಯ ಅಧಿಕಾರಿಗಳಾದ ಮಂಜೇಗೌಡ, ವೀರಾಜಪೇಟೆ ವೃತ್ತ ನೀರಿಕ್ಷಕ ಶಿವರುದ್ರ, ಕುಟ್ಟ ವೃತ್ತ ನೀರಿಕ್ಷಕ ಮಂಜಪ್ಪ ಸಿ.ಎ. ವೀರಾಜಪೇಟೆ ನಗರ ಠಾಣಾಧಿಕಾರಿಗಳಾದ ಪ್ರಮೋದ್ ಕುಮಾರ್, ಗಾಮಾಂತರ ಠಾಣೆಯ ಪಿ.ಎಸ್.ಐ. ಮಂಜುನಾಥ್, ಪುರಸಭೆಯ ಚುನಾಯಿತ ಪ್ರತಿನಿಧಿಗಳು, ಸರ್ಕಾರ ನಾಮ ನಿರ್ದೇಶಿತ ಸದಸ್ಯರು, ಉಪಸ್ಥಿತರಿದ್ದರು.