ಮಡಿಕೇರಿ, ಆ. ೨೬: ಸಿರಿಗನ್ನಡ ವೇದಿಕೆ ಮಹಿಳಾ ಘಟಕ ಕೊಡಗು ಜಿಲ್ಲೆ ಇವರ ವತಿಯಿಂದ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಗಾಯನ ಸ್ಪರ್ಧೆಯ ಫಲಿತಾಂಶ ಇಂತಿದೆ. ಭಾಗಿಯಾಗಿದ್ದ ಒಟ್ಟು ಸ್ಪರ್ಧಿಗಳು ನಲವತ್ತೆರಡು, ಪ್ರಥಮ ಸುಪ್ರೀತ ದಿಲೀಪ್, ದ್ವಿತೀಯ ವಿದ್ಯಾ ಜಗದೀಶ್ ಪುತ್ತಾಮನೆ, ತೃತೀಯ ಶರ್ಮಿಳಾ ರಮೇಶ್ ಮತ್ತು ಲೀಲಾವತಿ ಪಿ. ಸೋಮಣ್ಣ ಪಡೆದುಕೊಂಡಿದ್ದಾರೆ. ಚೋವಂಡ ಜಮುನಾ ಸುರೇಶ್ ಹಾಗೂ ಗೋವಿಂದ ರಾಜು ಮೆಚ್ಚುಗೆ ಗಳಿಸಿದ್ದಾರೆ. ಇತರ ೨೦ ಮಂದಿಯ ಗಾಯನ ಉತ್ತಮ ರೀತಿಯಲ್ಲಿತ್ತು. ತೀರ್ಪುಗಾರರಾಗಿ ಮೇವಡ ಕಾವೇರಿ ಸೋಮಯ್ಯ ಕಾರ್ಯನಿರ್ವಹಿಸಿದರು.
ವಿಜೇತರಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ಮತ್ತು ಇತರ ಸ್ಥಾನ ಪಡೆದ ಗಾಯಕರಿಗೆ ಪ್ರಶಸ್ತಿ ಪತ್ರಗಳನ್ನು ಆನ್ಲೈನ್ ಮುಖಾಂತರ ಕಳುಹಿಸಲಾಗುವುದು ಎಂದು ಸಿರಿಗನ್ನಡ ಮಹಿಳಾ ಘಟಕದ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ ಅವರು ತಿಳಿಸಿದ್ದಾರೆ