ಮಡಿಕೇರಿ, ಆ.೨೬ : ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ನವದೆಹಲಿ ಅವರು ಪ್ರಧಾನಮಂತ್ರಿ ಜನಜಾತಿಯ ಆದಿವಾಸಿ ನ್ಯಾಯ ಮಹಾ ಯೋಜನೆಯಡಿ(ಪಿಎಂ-ಜನ್‌ಮನ್) ಕಾರ್ಯಕ್ರಮಗಳನ್ನು ಪಿವಿಟಿಜಿ ಸಮುದಾಯವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪ್ರಯೋಜನ ಪಡೆಯಲು ದೇಶದಾದ್ಯಂತ ಪಿಎಂ-ಜನ್‌ಮನ್ ಪೇಸ್ ೨ (Pಒ-ಎಂಓಒAಓ ಠಿhಚಿse II) ಕಾರ್ಯಕ್ರಮದಡಿ ಅರಿವು ಮೂಡಿಸುವ ಶಿಬಿರ/ಫಲಾನುಭವಿಗಳ ಸ್ಯಾಚುರೇಷನ್ ಕ್ಯಾಂಪ್‌ಗಳನ್ನು ಸೆಪ್ಟೆಂಬರ್ ೧೦ ರವರೆಗೆ ವಿಸ್ತರಿಸಲಾಗಿದೆ.

ಕೊಡಗು ಜಿಲ್ಲೆಯ ಬುಡಕಟ್ಟು ಸಮುದಾಯವಾದ ಜೇನುಕುರುಬ ಸಮುದಾಯದವರಿಗೆ ಪಿಎಂ-ಜನ್‌ಮನ್ ಪೇಸ್ ೨ (PಒಎಂಓಒAಓ Phಚಿse-II) ರಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು/ ಬ್ಲಾಕ್ ನೋಡೆಲ್ ಅಧಿಕಾರಿಗಳ ತಂಡ ರಚಿಸಲಾಗಿದೆ.

ತಾ. ೨೩ ರಿಂದ ಸೆಪ್ಟೆಂಬರ್ ೧೦ ರ ಅವಧಿಯಲ್ಲಿ ಜೇನುಕುರುಬ ಜನಾಂಗದವರಿಗೆ ಆಧಾರ್ ಕಾರ್ಡ್ ನೋಂದಣಿ, ಪಿ.ಎಂ ಜನ್‌ಧನ್ ಬ್ಯಾಂಕ್ ಖಾತೆ, ಆಯುಷ್ಮಾನ್ ಭಾರತ್ ಕಾರ್ಡ್, ಸಿಕೆಲ್‌ಸೆಲ್ ಅನೆಮಿಯಾ ಖಾಯಿಲೆ ಸ್ಕಿçÃನಿಂಗ್ ಪರೀಕ್ಷೆ, ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜೇನುಕುರುಬ ಜನಾಂಗದವರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವುದು.

ಹೆಚ್ಚಿನ ಮಾಹಿತಿಗೆ ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ ಇವರ ಕಚೇರಿ ದೂರವಾಣಿ ಸಂಖ್ಯೆ ೦೮೨೭೨-೨೦೦೫೦೦, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ವೀರಾಜಪೇಟೆ ತಾಲೂಕು (೯೯೦೧೪೮೨೭೬೩) ಹಾಗೂ ಸಹಾಯಕ ನಿರ್ದೇಶಕರು(ಗ್ರೇಡ್-೨), ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ತಾಲೂಕು (೭೨೫೯೫೫೨೬೫೫) ರವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ತಿಳಿಸಿದ್ದಾರೆ.