ಕುಶಾಲನಗರ, ಆ. ೨೬: ಕುಶಾಲನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶನಿ ದೇವರ ಕಥಾ ಶ್ರವಣ, ಗಣಪತಿ ಹೋಮ, ಮೃತ್ಯುಂಜಯ ಹೋಮ ಮತ್ತು ಆಯುಷ್ಯ ಹೋಮ ಹವನಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ದೇವಸ್ಥಾನದ ಅರ್ಚಕರಾದ ಯೋಗೀಶ್ ಭಟ್ ಮತ್ತು ಗಿರೀಶ್ ಭಟ್ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು. ಪೂಜಾ ಕಾರ್ಯಕ್ರಮಗಳ ನಂತರ ವಿಶ್ವಶಾಂತಿಗಾಗಿ ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು.
ರಿಜಿಡ್ ಗ್ರೂಪ್ನ ಪ್ರಮುಖರಾದ ನಾಗ ಪ್ರವೀಣ್ ಕಾರ್ಯಕ್ರಮ ನಿರ್ದೇಶಕ ಎನ್.ವಿ. ಬಾಬು, ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಬಿ.ಎಲ್. ಉದಯ್ ಕುಮಾರ್, ರಿಜಿಡ್ ಗ್ರೂಪ್ನ ಎ.ಎಸ್. ಕುಮಾರ್, ವಿ.ಆರ್. ಮಂಜುನಾಥ್, ಎಸ್.ಎಂ. ನಾಗೇಂದ್ರ, ಪಿ.ಕೆ. ರಘು, ವಿ.ವಿ. ತಿಲಕ್, ಜಿ. ರಾಘವೇಂದ್ರ, ಚಿತ್ರ, ಪ್ರತಿಮಾ, ದೀಪಾ, ಶ್ವೇತ, ಹೇಮಾ ಮತ್ತಿತರರು ಇದ್ದರು.