ಸೋಮವಾರಪೇಟೆ,ಆ.೨೫: ಮಾದಾಪುರವನ್ನು ಹೋಬಳಿಯನ್ನಾಗಿ ಮೇಲ್ದರ್ಜೆಗೇರಿಸುವುದು ಹಾಗೂ ಮಾದಾಪುರದಲ್ಲಿ ಕಂದಾಯ ಇಲಾಖೆ ಕಚೇರಿ ಸ್ಥಾಪನೆ ಸಂಬAಧ ಆಡಳಿತದ ಗಮನ ಸೆಳೆಯುವ ನಿಟ್ಟಿನಲ್ಲಿ, ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಾದಾಪುರದ ವಿ.ಎಸ್.ಎಸ್.ಎನ್. ಸಭಾಂಗಣದಲ್ಲಿ, ಸ್ಥಳೀಯ ಪ್ರಮುಖರನ್ನು ಒಳಗೊಂಡAತೆ ಪೂರ್ವಭಾವಿ ಸಭೆ ನಡೆಯಿತು.
ಮೂವತ್ತೊಕ್ಲು ಗ್ರಾಮದ ಗಣೇಶ್ ಮಾತನಾಡಿ, ಸೋಮವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಗೆ ಮಾದಾಪುರ, ಗರ್ವಾಲೆ, ಹರದೂರು ಗ್ರಾಮ ಪಂಚಾಯಿತಿಯನ್ನು ಸೇರಿಸಿದ್ದು, ಈ ಮೂರು ಗ್ರಾಮ ಪಂಚಾಯಿತಿಯನ್ನು ಸೇರಿಸಿ ಮಾದಾಪುರ ಹೋಬಳಿಯನ್ನಾಗಿ ಮಾಡಿದರೆ ಸ್ಥಳೀಯ ಜನರಿಗೆ ಅನುಕೂಲವಾಗುತ್ತದೆ ಎಂದರು.
ಮಾದಾಪುರ, ಗರ್ವಾಲೆ ಭಾಗದ ವ್ಯಾಪ್ತಿಯ ಬಹುತೇಕ ಗ್ರಾಮಗಳು ಬೆಟ್ಟ ಗುಡ್ಡಗಳಿಂದ ಕೂಡಿದ್ದು ಈ ಭಾಗಕ್ಕೆ ಸೋಮವಾರಪೇಟೆಯಿಂದ ಕಂದಾಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲು ವಿಳಂಬವಾಗುತ್ತಿದೆ. ಆದ್ದರಿಂದ ಮಾದಾಪುರವನ್ನು ಹೋಬಳಿಯನ್ನಾಗಿ ಮಾಡಿ ಇಲ್ಲೇ ಕಂದಾಯ ಇಲಾಖೆ ಕಚೇರಿ ನಿರ್ಮಿಸಬೇಕು ಎಂದರು.
ಕಂದಾಯ ನಿರೀಕ್ಷರು ಹಾಗೂ ಗ್ರಾಮ ಆಡಳಿತ ಅಧಿಕಾರಿ ಮೊದಲು ಈ ಭಾಗಕ್ಕೆ ಬರುತ್ತಿದ್ದರು. ಇತ್ತೀಚೆಗೆ ಬರುತ್ತಿಲ್ಲ. ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಯಾವುದೇ ಕೆಲಸಗಳು ಆಗಬೇಕೆಂದರೆ ತಹಶೀಲ್ದಾರ್ ಕಚೇರಿಗೆ ಬರಲು ತಿಳಿಸುತ್ತಾರೆ. ಕೆಲವರಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಯಾರೆಂಬುದು ಈವರೆಗೂ ತಿಳಿಯದ ಪರಿಸ್ಥಿತಿ ಇದೆ ಎಂದು ಮಾದಾಪುರ ವಿಎಸ್ಎಸ್ಎನ್ ಅಧ್ಯಕ್ಷ ಉಮೇಶ್ ಉತ್ತಪ್ಪ ಹೇಳಿದರು.
ಇಗ್ಗೋಡ್ಲು ಗ್ರಾಮದ ದೇವಯ್ಯ ಮಾತನಾಡಿ, ಮಾದಾಪುರ ಹೋಬಳಿ ಮಾಡಲು ಗ್ರಾಮ ಸಭೆಯಲ್ಲಿ ಚರ್ಚೆಗಳು ನಡೆದಿವೆ. ಮನವಿಗಳನ್ನು ಸಂಬAಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿದ್ದರೂ ಈವರೆಗೆ ಯಾವುದೇ ಪ್ರಯೋಜನಗಳಾಗಿಲ್ಲ ಎಂದು ಸಭೆಯ ಗಮನ ಸೆಳೆದರು.
ಸೂರ್ಲಬ್ಬಿ, ಮಂಕ್ಯಾ ಭಾಗಗಳಿಗೆ ಅಧಿಕಾರಿಗಳು ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಈ ಗ್ರಾಮಗಳು ಇರುವುದನ್ನೇ ಮರೆತಿದ್ದಾರೆ. ಇವೆರಡು ಗ್ರಾಮಗಳನ್ನು ಮಾದಾಪುರ ಅಥವಾ ಸೋಮವಾರಪೇಟೆ ವೃತ್ತಕ್ಕೆ ಸೇರಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕಂದಾಯ ವೃತ್ತದ ಬಗ್ಗೆ ಸ್ಥಳೀಯರಿಗೆ ಸ್ಪಷ್ಟನೆ ನೀಡಬೇಕು. ಸೂರ್ಲಬ್ಬಿ, ಗರ್ವಾಲೆ ಭಾಗದ ಜನರಿಗೆ ಮಾದಾಪುರ ಹತ್ತಿರವಾಗಿದ್ದು, ನಾಡ ಕಚೇರಿ ಸ್ಥಾಪನೆಯಾದರೆ ಈ ಎರಡೂ ಗ್ರಾಮಗಳನ್ನು ಮಾದಾಪುರ ಹೋಬಳಿ ವ್ಯಾಪ್ತಿಗೆ ಒಳಪಡಿಸಬೇಕೆಂದರು.
ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಕಾಳಪ್ಪ ಮಾತನಾಡಿ, ಮಾದಾಪುರ ಹೋಬಳಿ ರಚನೆಯಾದರೆ ಸ್ಥಳೀಯರಿಗೆ ಸೋಮವಾರಪೇಟೆಗೆ ತೆರಳುವ ಅವಶ್ಯಕತೆ ಇರುವುದಿಲ್ಲ. ಮಾದಾಪುರ, ಹರದೂರು, ಗರ್ವಾಲೆ ಪಂಚಾಯಿತಿಗಳು ಈ ಹೋಬಳಿ ವ್ಯಾಪ್ತಿಗೆ ಸೇರಲಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಗಮನ ಸೆಳೆಯುವ ಕೆಲಸ ಆಗಬೇಕಿದೆ ಎಂದರು.
ಮಾದಾಪುರದಲ್ಲಿ ಪೊಲೀಸ್ ಉಪಠಾಣೆ, ಆಸ್ಪತ್ರೆ, ಪೆಟ್ರೋಲ್ ಬಂಕ್ ಇದ್ದು, ವಾರದಲ್ಲಿ ಒಂದು ದಿನ ಸಂತೆಯೂ ನಡೆಯುತ್ತಿದೆ. ಈ ಭಾಗದಲ್ಲಿ ಬಸ್ಗಳ ಮಾರ್ಗವು ಉತ್ತಮವಾಗಿದ್ದು ಸೋಮವಾರಪೇಟೆ-ಮಡಿಕೇರಿ ಇವೆರಡು ತಾಲೂಕುಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಯ ಮಧ್ಯದಲ್ಲಿ ಮಾದಾಪುರವಿದೆ. ಎಲ್ಲಾ ರೀತಿಯ ಮೂಲಭೂತ ವ್ಯವಸ್ಥೆಗಳಿವೆ. ಹೋಬಳಿ ಕೇಂದ್ರವಾದರೆ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಹೋರಾಟ ಸಮಿತಿಯಿಂದ ಮುಂದಿನ ದಿನಗಳಲ್ಲಿ ಸಂಬAಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನ ಸೆಳೆಯಲಾಗುವುದು. ಅಗತ್ಯ ಬಿದ್ದಲ್ಲಿ ಹೋರಾಟಕ್ಕೂ ಮುಂದಾಗಬೇಕಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಉಪಾಧ್ಯಕ್ಷ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಸೋಮವಾರಪೇಟೆ ತಾಲೂಕು ರೈತ ಸಂಘದ ಉಪಾಧ್ಯಕ್ಷ ಜಿ.ಎಂ.ಹೂವಯ್ಯ, ನಿವೃತ್ತ ತಹಶೀಲ್ದಾರ್ ಜಯರಾಮ್, ಮಾದಾಪುರ ಗ್ರಾ.ಪಂ. ಅಧ್ಯಕ್ಷ ಮನು ಬಿದ್ದಪ್ಪ, ಹರದೂರು ಗ್ರಾ.ಪಂ ಅಧ್ಯಕ್ಷೆ ಉಷಾ, ಗರ್ವಾಲೆ ಗ್ರಾ.ಪಂ ಮಾಜಿ ಅಧ್ಯಕ್ಷ ಸುಭಾಶ್, ಹರದೂರು ಗ್ರಾ.ಪಂ ಮಾಜಿ ಅಧ್ಯಕ್ಷ ಸತೀಶ್, ಗೌತಮ್, ನಾಗಂಡ ಭವಿನ್ ಸೇರಿದಂತೆ ಇತರರು ಭಾಗವಹಿಸಿದ್ದರು.