ಮಡಿಕೇರಿ, ಆ. ೨೫: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಮುಂಗಾರಿನ ಛಾಯೆ ಮರೆಯಾಗಿ ಬಿಸಿಲಿನ ವಾತಾವರಣ ಕಂಡುಬAದಿತ್ತು. ಆದರೆ, ಇದೀಗ ಮತ್ತೆ ವಾತಾವರಣದಲ್ಲಿ ಬದಲಾವಣೆ ಕಂಡುಬರುತ್ತಿದೆ. ಶನಿವಾರದಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಬಹುತೇಕ ಎಲ್ಲೆಡೆ ಮೋಡ ಕವಿದ ವಾತಾವರಣ ದೊಂದಿಗೆ ಅಲ್ಲಲ್ಲಿ ಮಳೆಯಾಗುತ್ತಿದೆ. ಹೆಚ್ಚಿನ ರಭಸ ಇಲ್ಲದಿದ್ದರೂ, ಆಗಾಗ್ಗೆ ಬಿರುಮಳೆ ಸುರಿಯುತ್ತಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಭಾನುವಾರ ಒಂದಷ್ಟು ಬಿರುಸಿನ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಮಳೆ ಸುರಿಯಿತು. ಇತರೆಡೆಗಳಲ್ಲೂ ಮಳೆಯಾಗುತ್ತಿದ್ದು, ಬಿಸಿಲಿನ ಸನ್ನಿವೇಶದೊಂದಿಗೆ ಒಂದಷ್ಟು ನಿರಾಳದಂತಿದ್ದ ಜನರು ಇದೀಗ ಮತ್ತೆ ಮಳೆಯ ಪರಿಸ್ಥಿತಿಗೆ ಹೊಂದಿಕೊಳ್ಳುವAತಾಗಿದೆ. ಪ್ರಸ್ತುತ ಮಖಾ ಮಳೆ ನಕ್ಷತ್ರವಿದ್ದು, ಇದು ತಾ. ೩೧ರವರೆಗೆ ಮುಂದುವರಿಯಲಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಈ ಬಾರಿ ಗೌರಿ -ಗಣೇಶೋತ್ಸವ ಎದುರಾಗುತ್ತಿದ್ದು, ಈ ವೇಳೆ ಸಹಜವಾಗಿ ಒಂದಷ್ಟು ಮಳೆ ಸಾಮಾನ್ಯವಾಗಿರುತ್ತದೆ ಎಂದು ಜನರು ಹಿಂದಿನ ಅನುಭವವನ್ನು ಮೆಲುಕು ಹಾಕುತ್ತಿದ್ದಾರೆ.