ಶ್ರಾವಣ ಮಾಸ ಕೃಷ್ಣ ಪಕ್ಷದ ಅಷ್ಟಮಿಯಂದು ರೋಹಿಣಿ ನಕ್ಷತ್ರದ ಇರುಳಲ್ಲಿ ದೇವಕಿ-ವಸುದೇವನ ಮಗನಾಗಿ ಶ್ರೀ ಕೃಷ್ಣ ಜನಿಸಿದ್ದು ದೇವಕಿಯ ಅಣ್ಣ ಕಂಸನ ಸೆರೆಮನೆಯಲ್ಲಿ. ಬೆಳೆದದ್ದು ಗೋಕುಲದ ನಂದ-ಯಶೋಧೆಯರ ಮಡಿಲಲ್ಲಿ. ಸಾಧಾರಣ ಗೊಲ್ಲರಂತೇ ಜೀವನ ನಡೆಸಿದವನು. ಬಾಲ್ಯವನ್ನು ಬೃಂದಾವನದಲ್ಲಿ ಕಳೆಯುವಾಗ ಕಂಸ ಬೇರೆ ಬೇರೆ ರಾಕ್ಷಸರನ್ನು ಕಳುಹಿಸಿ ಕೊಲ್ಲಿಸುವ ಪ್ರಯತ್ನ ಮಾಡುತ್ತಾನೆ. ಆದರೆ ಕೃಷ್ಣನ ಜಾಣ್ಮೆಯಿಂದ ಎಲ್ಲ ಅಸುರರು ಸಾವಿಗೀಡಾಗುತ್ತಾರೆ. ಸಾಧಾರಣವಾದ ಗೋಪ ಬಾಲಕನಾಗಿ ಕೊಳಲನ್ನೂದುತ್ತಾ ಗೋವುಗಳನ್ನು ಪಾಲನೆ ಮಾಡುತ್ತಾ ತುಂಟತನದಿAದ ಗೋಪಿಕೆಯರ ಕಾಡಿ ಮನಗೆದ್ದು ಬೆಳೆಯುತ್ತಾ ಸಾಂಧೀಪನಿ ಮಹರ್ಷಿಗಳ ಶಿಷ್ಯನಾಗಿ ವಿದ್ಯಾಭ್ಯಾಸ ಮಾಡುತ್ತಾನೆ. ಗೋಪಿಕೆಯರಲ್ಲಿ ಅಚ್ಚುಮೆಚ್ಚಿನವಳೆಂದರೆ ರಾಧೆ. ಕೃಷ್ಣ ರಾಧೆಯರಿಬ್ಬರು ಬೇರಾರೂ ಅಲ್ಲ ಜಗಕ್ಕೆ ಪ್ರೀತಿಯ ಗಾಢತೆಯನ್ನು ತಿಳಿಸಲು ಅವತಾರವೆತ್ತಿದ ಲಕ್ಷಿ÷್ಮ ವಿಷ್ಣುವಿನ ಸ್ವರೂಪ. ರಾಧೆಯೊಂದಿಗಿನ ಪ್ರೀತಿ ಎರಡು ದೇಹ ಒಂದು ಆತ್ಮವೆಂಬುದಕ್ಕೊAದು ಉದಾಹರಣೆ. ಮೊದಲು ಜನ್ಮತಾಳಿದ ರಾಧೆ ಕೃಷ್ಣನಿಂದ ದೊಡ್ಡವಳಾದರೂ ವಯಸ್ಸು ಅವರಿಬ್ಬರ ಪ್ರೇಮಕ್ಕೆ ಅಡ್ಡಬರಲಿಲ್ಲ. ಮಾನಸಿಕವಾಗಿ ಇಬ್ಬರೂ ತಮ್ಮನ್ನು ತಾವು ಅರ್ಪಿಸಿಕೊಂಡ ನಿಷ್ಕಲ್ಮಶ ಪ್ರೇಮಿಗಳು. ಆದರೆ ಕಂಸನ ಅಂತ್ಯ ಮಾಡಿ ಸೆರೆಮನೆಯಲ್ಲಿದ್ದ ಹೆತ್ತವರನ್ನು ಬಿಡಿಸಿಕೊಳ್ಳಲು ಕೃಷ್ಣ ಪ್ರೀತಿಯನ್ನು ತ್ಯಾಗ ಮಾಡಬೇಕಾಗುತ್ತದೆ. ಕರ್ತವ್ಯವೆಂದು ಮಥುರಾಕ್ಕೆ ರಾಧೆಯನ್ನು ಬಿಟ್ಟು ಹೊರಟು ಹೋಗುವಾಗ ಯಾವಾಗಲೂ ನುಡಿಸುತ್ತಿದ್ದ ಜೊತೆಗಾರನಂತಿದ್ದ ಕೊಳಲನ್ನು ಕೂಡಾ ಬೃಂದಾವನದಲ್ಲೇ ತ್ಯಜಿಸಿ ಹೊರಟುಹೋಗುತ್ತಾನೆ.

ಮಥುರಾಕ್ಕೆ ಬಂದವನು ಕಂಸನನ್ನು ವಧಿಸಿದ ಮೇಲೆ ಕಂಸನ ತಂದೆ ಉಗ್ರಸೇನನನ್ನು ರಾಜನನ್ನಾಗಿ ಮಾಡುತ್ತಾನೆ. ಜರಾಸಂದನು ತನ್ನ ಅಳಿಯ ಕಂಸನನ್ನು ಕೊಂದ ಕೃಷ್ಣನ ಮೇಲೆ ಸೇಡಿಟ್ಟುಕೊಂಡು ಆಗಾಗ್ಗೆ ಮಥುರಾಕ್ಕೆ ದಾಳಿ ಮಾಡುತ್ತಾ ಕಿರುಕುಳ ಕೊಡುತ್ತಿದ್ದ. ಇದನ್ನು ತಪ್ಪಿಸಲು ಪ್ರಜೆಗಳನ್ನು ಕಾಪಾಡಲು ಕೃಷ್ಣ ದ್ವಾರಕೆಯನ್ನು ಸಮುದ್ರ ಮಧ್ಯೆಯಲ್ಲಿ ನಿರ್ಮಿಸಿ ಮಥುರಾವನ್ನು ತೊರೆಯುತ್ತಾನೆ. ಸಿಂಹಾಸನದ ಮೇಲಿನ ಅಧಿಕಾರಕ್ಕಿಂತ ಸಮಾಜದ ಒಳಿತಿನ ಬಗ್ಗೆ ಗಮನ ಹರಿಸುತ್ತಾನೆ. ತಾನು ಜನ್ಮವೆತ್ತಿದ್ದು ದುಷ್ಟನಿಗ್ರಹಕ್ಕೆ ಶಿಷ್ಟರ ರಕ್ಷಣೆಗಾಗಿ ಎಂಬುದನ್ನು ಸಾಬೀತುಪಡಿಸಲು ಸಮಯ ಕಾಯುತ್ತಿರುತ್ತಾನೆ. ಅದೇ ರೀತಿ ಕಾಲಕೂಡಿ ಬಂದAತೆ ಪಾಂಡವರಿಗೆ ಕೃಷ್ಣನ ನೇರ ಪರಿಚಯವಾಗುವುದು ದ್ರೌಪದಿ ಸ್ವಯಂವರದಲ್ಲಿ. ಅಲ್ಲಿಂದ ಮುಂದೆ ಪಾಂಡವರಿಗೆ ಸಹಾಯ ಮಾಡುತ್ತಾ ಅವರಿಗೋಸ್ಕರ ಕುರುಸಭೆಯಲ್ಲಿ ಅವಮಾನವನ್ನೂ ಅನುಭವಿಸುತ್ತಾ ಕುರುಕ್ಷೇತ್ರ ಯುದ್ದದ ಗೆಲುವಿಗೆ ಕಾರಣವಾಗುತ್ತಾನೆ.

ಯದುರಾಜ ಶೂರಸೇನನ ಮಗ ವಸುದೇವ ಮತ್ತು ಕುಂತಿ ಅಣ್ಣ ತಂಗಿಯಾದ್ದರಿAದ ಕುಂತಿ ಪುತ್ರರಾದ ಪಾಂಡವರಿಗೆ ಶ್ರೀ ಕೃಷ್ಣನು ಸಂಬAಧದಲ್ಲಿ ಬಾವನಾಗುತ್ತಾನೆ. ಒಬ್ಬ ಒಳ್ಳೆಯ ಸ್ನೇಹಿತನಾಗಿ ಎಲ್ಲಾ ರೀತಿಯ ಸಹಾಯವನ್ನು ಪಾಂಡವರಿಗೆ ಮಾಡುತ್ತಾ ಗೆಳೆತನದ ಮಹತ್ವವನ್ನು ಸಮಸ್ತ ಜಗತ್ತಿಗೆ ಹೇಳಿಕೊಟ್ಟವನು. ಕುರುಕ್ಷೇತ್ರ ಯುದ್ಧರಂಗದಲ್ಲಿ ಬಂಧುಗಳೊಡನೆ ಹೋರಾಡಿ ರಕ್ತಪಾತ ಹರಿಸಲು ನನ್ನಿಂದಾಗದು ಕೃಷ್ಣ ಎಂದು ತನ್ನ ಧನಸ್ಸನ್ನು ಕೆಳಗಿಟ್ಟು ಹತಾಶನಾಗಿ ಕುಳಿತ ಅರ್ಜುನನಿಗೆ ವಿಶ್ವರೂಪ ದರ್ಶನ ಮಾಡಿ ಕರ್ತವ್ಯದ ಅರಿವನ್ನು ಗೀತಾಮೃತ ಮೂಲಕ ಅರುಹುತ್ತಾ ‘ಅರ್ಜುನಾ.. ಈಗ ನಡೆಯುತ್ತಿರುವ ಯುದ್ಧ ನಡೆದೇ ನಡೆಯುತ್ತೆ ಒಂದು ವೇಳೆ ನೀನು ಯುದ್ಧ ಮಾಡದಿದ್ದಲ್ಲಿ ನಾನು ಮಾಡುವೆ. ಈ ಯುದ್ಧ ವಿಧಿ ನಿರ್ಣಾಯಕ ನೀನು ಇದರ ನಿಮಿತ್ತಾ ಮಾತ್ರ’ ಎನ್ನುತ್ತಾ ಆತನ ಮನದ ಕ್ಷೋಭೆ ಹೋಗಲಾಡಿಸುತ್ತಾನೆ. ವಿಧಿಯ ಮುಂದೆ ಎಲ್ಲರು ತೃಣ ಸಮಾನರೆಂಬ ಗೀತಾಮೃತದ ಸಾರವೇ ಪವಿತ್ರ ಗ್ರಂಥ ಭಗವದ್ಗೀತೆ ಎನಿಸಿದೆ. ಯುದ್ಧ ಗೆದ್ದು ಪಾಂಡವರಿಗೆ ರಾಜ್ಯ ಕೊಡಿಸುವಲ್ಲಿ ಸಫಲನಾದರೂ ತನ್ನೆಲ್ಲಾ ಕುಡಿಗಳನ್ನು ಕಳೆದುಕೊಂಡ ಗಾಂಧಾರಿಯ ಕ್ರೋಧಕ್ಕೆ ತುತ್ತಾಗುತ್ತಾನೆ. ಅದರ ಫಲವಾಗಿ ‘ನಿನ್ನ ಯದುವಂಶವೆಲ್ಲಾ ನಿರ್ವಂಶವಾಗಲಿ ನೀನು ಅಸಹಾಯಕನಾಗಿ ನೋಡುವಂತಾಗಲಿ ನಿನಗೆ ವೀರೋಚಿತವಲ್ಲದ ಕ್ಷತ್ರಿಯರು ಬಯಸದ ಸಾವು ಬರಲಿ’ ಎಂಬ ಶಾಪಕ್ಕೆ ತುತ್ತಾಗುತ್ತಾನೆ. ಆಕೆ ಶಾಪ ಕೊಟ್ಟಾಗ ಧೃತಿಗೆಡದೆ ಕಿರುನಗುವಿನೊಂದಿಗೆ ಸೃಷ್ಠಿಯಲ್ಲಿ ಎಲ್ಲದರ ಅಂತ್ಯ ಇದ್ದೇ ಇರುತ್ತದೆ ಒಂದು ಸಾಯದೆ ಇನ್ನೊಂದರ ಹುಟ್ಟು ಸಾಧ್ಯವಿಲ್ಲ ಹುಟ್ಟು ಸಾವಿನ ಚಕ್ರ ನಡೆದೇ ತೀರುತ್ತದೆಂದು ತಿಳಿದಿದ್ದರಿಂದ ಶಾಪವನ್ನು ವರವೆಂದು ಸ್ವೀಕರಿಸುತ್ತಾನೆ.

ಒಮ್ಮೆ ದ್ವಾರಕೆಗೆ ಆಗಮಿಸಿದ ದೂರ್ವಾಸ ಮಹರ್ಷಿಯ ಬಳಿ ಯಾದವ ಯುವಕರೊಂದಿಗೆ ಕೃಷ್ಣನ ಮಗ ಸಾಂಬ ಗರ್ಭಿಣಿ ಸ್ತಿçÃವೇಷ ಧರಿಸಿ ‘ಅಯ್ಯಾ ಮುನಿಶ್ರೇಷ್ಠರೇ ನನಗೆ ಯಾವ ಮಗುವಿನ ಜನನವಾಗುವುದು’ ಎಂದು ಕೇಳುತ್ತಾನೆ. ದೂರದೃಷ್ಟಿವುಳ್ಳ ಮುನಿಯು ಅವನ ನಾಟಕ ಅರಿತು ನಿನಗೆ ಗಂಡು ಅಲ್ಲ ಹೆಣ್ಣು ಅಲ್ಲದ ಒನಕೆಯ ಜನನವಾಗುವುದು ಅದರಿಂದಲೇ ನಿಮ್ಮ ಕುಲದ ಅಂತ್ಯವಾಗುವುದೆAದು ಶಾಪ ನೀಡಿ ನಿರ್ಗಮಿಸುತ್ತಾರೆ. ಮುನಿಶಾಪ ನಿಜವಾದಾಗ ಬಲರಾಮನ ಮಾತಿನಂತೆ ಯಾದವರು ಒನಕೆಯನ್ನು ಪುಡಿ ಮಾಡಿ ಸಮುದ್ರಕ್ಕೆ ಎಸೆಯುತ್ತಾರೆ. ಆದರೆ ಆ ಪುಡಿಗಳು ಒಂದು ರೀತಿಯ ಗಡುಸಾದ ಹುಲ್ಲಿನ ರೂಪದ ಜೊಂಡಾಗಿ ಸಮುದ್ರ ತೀರದಲ್ಲಿ ಬೆಳೆಯುತ್ತದೆ.

ಅದೆಷ್ಟೋ ರಾಕ್ಷಸ ವೈರಿಗಳನ್ನು ಕೃಷ್ಣ ಬಲರಾಮರು ಸದೆ ಬಡಿದಿದ್ದರಿಂದ ಸುಖವನ್ನೇ ಉಣ್ಣುತ್ತಾ ಯಾವುದೇ ಕಷ್ಟವಿಲ್ಲದೆ ಯಾದವರು ಭೋಗ ಚಿಂತನೆಯಲ್ಲಿ ಮುಳುಗಿ ಕಾಲಹರಣ ಮಾಡುತ್ತಿರುತ್ತಾರೆ. ವಿಧಿ ನಿರ್ಧಾರದಂತೆ ಉತ್ಸವವೊಂದರಲ್ಲಿ ತಾವು ಕುಡಿದ ಸೋಮರಸದ ಪ್ರಭಾವದಿಂದ ತಮ್ಮ ತಮ್ಮೊಳಗೆ ಯುದ್ಧ ಮಾಡಲು ತೊಡಗುತ್ತಾರೆ. ಆಯುಧವನ್ನಾಗಿ ಸಮುದ್ರ ತೀರದಲ್ಲಿ ಬೆಳೆದ ಅದೇ ಜೊಂಡನ್ನು ಬಳಸಿಕೊಂಡು ದ್ವೇಷದಿಂದ ಕಾದಾಡುತ್ತಿದ್ದದನ್ನು ಕಂಡು ಬಲರಾಮ ಬೇಸರದಿಂದ ಧ್ಯಾನ ಮಾಡುತ್ತಾ ದೇಹತ್ಯಾಗ ಮಾಡುತ್ತಾನೆ. ಗಾಂಧಾರಿಯ ಶಾಪದಂತೆ ನಡೆಯುತ್ತಿರುವುದನ್ನು ನೆನೆದುಕೊಳ್ಳುತ್ತಾ ಕೃಷ್ಣ ಅಸಹಾಯಕನಾಗಿ ಆಯಾಸ ಪರಿಹರಿಸಿಕೊಳ್ಳಲು ಮರದಡಿ ವಿಶ್ರಮಿಸಿಕೊಳ್ಳುತ್ತಿರುತ್ತಾನೆ. ಅಲ್ಲೇ ಸ್ವಲ್ಪ ದೂರದಲ್ಲಿ ಜರ ಎಂಬ ಬೇಟೆಗಾರ ಬೇಟೆಯಾಡುತ್ತಿರುವಾಗ ವಿಶ್ರಾಂತಿ ಪಡೆಯುತ್ತಿರುವ ಕೃಷ್ಣನ ಕಾಲ್ಬೆರಳುಗಳು ಅಲ್ಲಾಡುತ್ತಿರುವುದನ್ನು ಕಂಡು ಯಾವುದೋ ಬೇಟೆಯಿರಬಹುದೆಂದು ಭಾವಿಸಿ ಬಾಣ ಬಿಟ್ಟಾಗ ಅದು ಅಂಗಾಲಿಗೆ ಚುಚ್ಚಿಕೊಳ್ಳುತ್ತದೆ. ಕೃಷ್ಣನ ವೇದನೆಯ ಕೂಗಿನಿಂದ ಅಲ್ಲಿಗೆ ಬಂದ ಬೇಟೆಗಾರನಿಗೆ ತಪ್ಪಿನ ಅರಿವಾಗಿ ಕ್ಷಮೆಯಾಚಿಸುವಾಗ ಆ ಬೇಟೆಗಾರನ ಜನ್ಮ ರಹಸ್ಯ ತಿಳಿಯುತ್ತದೆ. ಹಿಂದಿನ ಜನ್ಮದಲ್ಲಿ ವಾಲಿಯಾಗಿ ಜನಿಸಿದವನೇ ಈ ಬೇಟೆಗಾರ ಎಂದು ಕೃಷ್ಣ ದಿವ್ಯದೃಷ್ಠಿಯಿಂದ ಅರಿತುಕೊಳ್ಳುತ್ತಾನೆ. ತಾನು ತ್ರೇತಾಯುಗದಲ್ಲಿ ರಾಮನಾಗಿ ಜನ್ಮತಾಳಿದಾಗ ಕಾಳಗದಲ್ಲಿ ವಾಲಿಯನ್ನು ಮರದ ಮರೆಯಲ್ಲಿ ನಿಂತು ಬಾಣಬಿಟ್ಟು ಸಂಹರಿಸಿದನ್ನು ನೆನಪಿಸುತ್ತಾನೆ. ಆ ವಾಲಿಯೇ ಬೇಟೆಗಾರನಾಗಿ ಜನಿಸಿ ವಿಧಿಯಂತೆ ಬಾಣ ಪ್ರಯೋಗ ನಡೆದು ಗಾಂಧಾರಿಯ ಶಾಪದಂತೆ ಅಂತ್ಯವಾಗುವುದೆAಬ ಅರಿವಾಗುತ್ತದೆ. ಅದೇ ರೀತಿ ಹಿಂದೊಮ್ಮೆ ದೂರ್ವಾಸರು ‘ಕೃಷ್ಣ.. ನಿನ್ನ ಸಾವು ಅಂಗಾಲಿನಲ್ಲಿ’ ಎಂದರುಹಿದ್ದರು ಅದೂ ಕೂಡ ನಿಜವಾಗುತ್ತದೆ.

ತನ್ನ ಅಂತ್ಯವಾಗುವುದರೊಳಗೆ ಅಳಿದುಳಿದ ಪ್ರಜೆಗಳ ರಕ್ಷಣೆ ಮಾಡಬೇಕೆಂದು ಹಸ್ತಿನಾವತಿಯಲ್ಲಿದ್ದ ಅರ್ಜುನನಿಗೆ ಕೃಷ್ಣ ಸ್ವಪ್ನದಲ್ಲಿ ಕಾಣಿಸಿಕೊಂಡು ದ್ವಾರಕೆಯಲ್ಲಿರುವ ಎಲ್ಲ ಪ್ರಜೆಗಳನ್ನು ಸ್ಥಳಾಂತರ ಮಾಡಿ ಕಾಪಾಡಬೇಕೆಂದು ಹೇಳುತ್ತಾನೆ. ಅಂತೆಯೇ ಅರ್ಜುನ ದ್ವಾರಕೆಗೆ ದೌಡಾಯಿಸಿ ಬಂದಾಗ ಕೃಷ್ಣನ ಆತ್ಮ ದೇಹದಿಂದ ಹೊರಟುಹೋಗಿರುತ್ತದೆ. ಪ್ರಾಣ ಕಳೆದುಕೊಂಡ ಯಾದವರ ದೇಹಗಳ ಅಂತ್ಯಸAಸ್ಕಾರ ಕೈಗೊಂಡು ಕೃಷ್ಣ ಒಪ್ಪಿಸಿದ ಕರ್ತವ್ಯದಂತೆ ಬದುಕುಳಿದಿದ್ದ ಪ್ರಜೆಗಳನ್ನು ಹಸ್ತಿನಾವತಿಗೆ ಕರೆದೊಯ್ಯುತ್ತಿರುವಂತೆ ದ್ವಾರಕೆ ಸಮುದ್ರದೊಳಗೆ ಮುಳುಗುತ್ತದೆ. ಇಲ್ಲಿಗೆ ಕೃಷ್ಣನ ಅವತಾರ ಅಂತ್ಯಗೊಳ್ಳುತ್ತದೆ. ಆತ ವಿಷ್ಣುವಿನ ಅವತಾರವಾದರೂ ಭೂಮಿಯ ಮೇಲೆ ಒಬ್ಬ ಮನುಷ್ಯನಾಗಿ ಎಲ್ಲರಂತೆ ಕಷ್ಟಗಳನ್ನು ಅನುಭವಿಸಿ ಸಾಧಿಸುತ್ತಾನೆ. ದ್ರೌಪದಿಯನ್ನು ತುಂಬಿದ ಸಭೆಯಲ್ಲಿ ದುಶ್ಯಾಸನ ಸೀರೆಯೆಳೆದು ಅವಮಾನಿಸಿದಾಗ ಪಾಂಚಾಲಿಗೆ ಅಕ್ಷಯ ವಸ್ತç ಕೊಟ್ಟು ಮಾನ ಕಾಪಾಡಿ ಸಹೋದರನ ಕರ್ತವ್ಯ ನಿಭಾಯಿಸಿದ. ಕೃಷ್ಣನಲ್ಲಿ ಮಗುವಿನ ಮುಗ್ದತೆ, ತುಂಟತನ, ಅಣ್ಣನ ಕರ್ತವ್ಯ, ಪ್ರಾಣ ಸ್ನೇಹಿತ, ಹಿತೈಷಿ, ಪ್ರೀತಿಯ ವಿಷಯಕ್ಕೆ ಬಂದಾಗ ಒಬ್ಬ ಅದ್ಭುತ ಪ್ರೇಮಿ, ಸಖ, ಯಶಸ್ವಿ ರಾಜಕಾರಿಣಿ, ಸಾರಥಿ ಎಲ್ಲಾ ಗುಣಗಳನ್ನು ಕಾಣಬಹುದು. ಕೃಷ್ಣ ಅರ್ಜುನನಿಗೆ ಕೊಟ್ಟ ವಾಗ್ದಾನ ‘ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’ ಪಾಪ ಕರ್ಮವನ್ನೆಲ್ಲ ಅಳಿಸಿಹಾಕಿ ಧರ್ಮವನ್ನು ಮತ್ತೆ ಸ್ಥಾಪಿಸುವುದಕ್ಕಾಗಿ ನಾನು ಯುಗಯುಗಗಳಲ್ಲೂ ಪ್ರಕಟವಾಗುತ್ತೇನೆಂಬ ಮಾತಿನಂತೆ ಆಸ್ತಿಕರೆಲ್ಲರೂ ಈಗ ನಡೆಯುತ್ತಿರುವ ದೌರ್ಜನ್ಯ ವಿಪತ್ತು ಗಳಿಂದ ಕಾಪಾಡೆಂದು ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ ಎಂದು ಮೊರೆ ಹೋಗುವುದು ಉಚಿತವೆನಿಸುತ್ತದೆ.

- ಕುಕ್ಕುನೂರು ರೇಷ್ಮ ಮನೋಜ್, ಕುಶಾಲನಗರ. ಮೊ: ೮೨೭೭೪೧೯೫೩೮