ಮಡಿಕೇರಿ, ಆ. ೨೫: ಕೊಡಗು ಜಿಲ್ಲೆಯಲ್ಲಿ ಇನ್ನು ಮುಂದೆ ಉಪ ನೋಂದಣಿ ಕಚೇರಿಯ ಕೆಲಸ ಕಾರ್ಯ ಗಳನ್ನು ಜನರಿಗೆ ಸುಲಲಿತವಾಗಿ ಮಾಡಿಕೊಡುವ ನಿಟ್ಟಿನಲ್ಲಿ ಸರಕಾರ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಬಗ್ಗೆ ಆ.೨೦ರಂದು ಸರಕಾರಿ ಆದೇಶ ಪ್ರಕಟಿಸಲಾಗಿದ್ದು, ಇದಕ್ಕೆ ಸಂಬAಧಿಸಿದAತೆ ಅಗತ್ಯ ಸಿದ್ಧತೆ ನಡೆದಿದೆ. ಸೆಪ್ಟೆಂಬರ್ ಮೊದಲ ವಾರದಿಂದಲೇ ಈ ಪ್ರಕ್ರಿಯೆ ಜಾರಿಯಾಗಲಿದೆ. ಜಿಲ್ಲೆಯಲ್ಲಿ ಪ್ರಸ್ತುತ ಐದು ತಾಲೂಕುಗಳಾದ ಮಡಿಕೇರಿ, ವೀರಾಜಪೇಟೆ, ಪೊನ್ನಂಪೇಟೆ, ಸೋಮವಾರಪೇಟೆ, ಕುಶಾಲ ನಗರಗಳಲ್ಲಿ ಉಪ ನೋಂದಣಿ ಕಚೇರಿಗಳಿದ್ದು, ಆಯಾ ತಾಲೂಕಿಗೆ ಒಳಪಟ್ಟಂತೆ ಆಸ್ತಿ ನೋಂದಣಿ ಸೇರಿದಂತೆ ಈ ಕಚೇರಿಗಳಿಗೆ ಸಂಬAಧಿಸಿದ ಎಲ್ಲಾ ಕೆಲಸ ಕಾರ್ಯಗಳು ಆಯಾ ತಾಲೂಕು ವ್ಯಾಪ್ತಿಗೆ ಸೀಮಿತವಾಗಿ ನಡೆದು ಕೊಂಡು ಬರುತ್ತಿತ್ತು. ಇದೀಗ ನೂತನ ಕ್ರಮ ಜಾರಿಯಾಗಲಿದೆ. ಈ ವ್ಯವಸ್ಥೆ ಏನೆಂದರೆ ಯಾವುದೇ ತಾಲೂಕಿನ ಕಾರ್ಯವ್ಯಾಪ್ತಿ ಮಾತ್ರ ಇಲ್ಲದೆ ಜಿಲ್ಲೆಯೊಳಗೆ ಯಾರು ಬೇಕಾದರೂ ತಮ್ಮ ಕೆಲಸಗಳನ್ನು ಜಿಲ್ಲೆಯ ಇತರ ಯಾವುದೇ ತಾಲೂಕಿನ ಉಪ ನೋಂದಣಿ ಕಚೇರಿಗಳಲ್ಲಿ ಮಾಡಿಕೊಳ್ಳ ಬಹುದಾಗಿದೆ. ಉದಾಹರಣೆಗೆ ಮಡಿಕೇರಿ ತಾಲೂಕಿನ ಕರಿಕೆ ಭಾಗದ ಕೆಲಸಗಳನ್ನು ಪೊನ್ನಂಪೇಟೆ ತಾಲೂಕಿನಲ್ಲಾಗಲಿ ಅಥವಾ ಇತರ ತಾಲೂಕುಗಳಲ್ಲಾಗಲಿ ಮಾಡಿಕೊಳ್ಳ ಬಹುದು. ಕುಟ್ಟದ ಕೆಲಸವನ್ನು ಸೋಮವಾರಪೇಟೆ ತಾಲೂಕಿನ ಕಚೇರಿಯಲ್ಲೂ ಮಾಡಿಸಿಕೊಳ್ಳ ಬಹುದಾಗಿದೆ. ಆದರೆ, ಜನರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಸಂದರ್ಭ ಯಾವ ತಾಲೂಕು ಬೇಕು ಎಂಬುದನ್ನು ಪೂರ್ವ ನಿರ್ಧಾರ ಮಾಡಿ ಆಯ್ಕೆ ಮಾಡಿಕೊಳ್ಳಬೇಕು. ಆಯಾ ಕಚೇರಿಯಲ್ಲಿ ಕೆಲಸದ ಒತ್ತಡಗಳನ್ನು ಕಡಿಮೆ ಮಾಡಲು ಈ ವ್ಯವಸ್ಥೆ ತರಲಾಗಿದೆ ಎನ್ನಲಾಗಿದೆ. ಏಕೆಂದರೆ ಒಮ್ಮೊಮ್ಮೆ ಒಂದೇ ತಾಲೂಕಿನಲ್ಲಾದರೆ ಅಲ್ಲಿಗೆ ಸಂಬAಧಿಸಿ ದಂತೆ ಇರುವ ಕಚೇರಿಯಲ್ಲಿ ಹೆಚ್ಚಿನ ಒತ್ತಡವಿದ್ದಲ್ಲಿ ವಿಳಂಬವಾಗುತ್ತಿತ್ತು. ಇದೀಗ ಒಂದು ತಾಲೂಕಿನಲ್ಲಿ ಹೆಚ್ಚು ಒತ್ತಡ ಇದ್ದು, ಮತ್ತೊಂದು ತಾಲೂಕಿನ ಕಚೇರಿಯಲ್ಲಿ ಕಡಿಮೆ ಕೆಲಸ ಇದ್ದಲ್ಲಿ ಜನರು ಆ ತಾಲೂಕನ್ನು ತಮ್ಮ ಕೆಲಸಕ್ಕೆ ಆಯ್ಕೆ ಮಾಡಿಕೊಂಡು ಸುಲಲಿತವಾಗಿ ಪ್ರಯೋಜನ ಪಡೆಯಬಹುದಾಗಿದೆ. ಆಸ್ತಿ - ಪಾಸ್ತಿಗಳ ನೋಂದಣಿ, ಕ್ರಯಪತ್ರ, ಭೋಗ್ಯಪತ್ರ, ದಾನಪತ್ರ, ಪವರ್ ಆಫ್ ಅಟಾರ್ನಿ, ಒಪ್ಪಂದ ಪತ್ರ ಸೇರಿದಂತೆ ಉಪ ನೋಂದಣಿ ಕಚೇರಿಗಳಲ್ಲಿ ಬಹುತೇಕ ಪ್ರಮುಖ ಕೆಲಸ ಕಾರ್ಯಗಳ ಒತ್ತಡ ನಿರಂತರವಾಗಿರುತ್ತದೆ.

ಜಿಲ್ಲೆಯೊಳಗೆ ಆಂತರಿಕವಾಗಿ ಯಾವುದೇ ತಾಲೂಕಿನ ಕೆಲಸವನ್ನು ಸೀಮಿತ ಗಡಿಯ ಬದಲು ಇತರ ಯಾವುದೇ ತಾಲೂಕಿನಲ್ಲಿ ಮಾಡಿಸಿಕೊಳ್ಳುವ ಕ್ರಮದ ಕುರಿತ ಆದೇಶವನ್ನು ಆ. ೨೦ರಂದು ರಾಜ್ಯ ಸರಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ (ನೋಂದಾ ವಣೆ ಮತ್ತು ಸ್ಟಾö್ಯಂಪ್) ಎ.ಜೆ. ವೀಣಾ ಅವರು ಹೊರಡಿಸಿದ್ದಾರೆ.

೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ನೂತನ ವ್ಯವಸ್ಥೆಯಿಂದ ಕೆಲವೊಂದು ಕಚೇರಿಗಳಲ್ಲಿ ಜನರಿಗೆ ಆಗುತ್ತಿದ್ದ ಕಿರಿಕಿರಿ, ವಿಳಂಬ ಕಡಿಮೆಯಾಗ ಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ.

ನ್ಯಾಯಾಲಯಕ್ಕೆ ಸಂಬAಧಿತ ಪ್ರಕರಣಗಳ ಬಗ್ಗೆ ಗಮನ

ನ್ಯಾಯಾಲಯಕ್ಕೆ ಸಂಬAಧಿಸಿ ದಂತೆ ಇರುವ ಕೆಲವೊಂದು ಪ್ರಕರಣಗಳ ಬಗ್ಗೆ ಇದೀಗ ಹೆಚ್ಚು ಮುತುವರ್ಜಿ ವಹಿಸಬೇಕಾಗಿದೆ. ಏಕೆಂದರೆ ಕೋರ್ಟ್ ವಿಚಾರಗಳನ್ನು ಆಯಾ ತಾಲೂಕಿನ ಕಚೇರಿಗಳಲ್ಲಿ ಪುಸ್ತಕದಲ್ಲಿ ದಾಖಲು ಮಾಡಿಕೊಂಡು ಪರಿಶೀಲಿ¸ Àಲಾಗುತ್ತಿತ್ತು. ಇದೀಗ ಇವೆಲ್ಲವೂ ಕಂಪ್ಯೂಟರೀಕರಣª Áಗಬೇಕಿದ್ದು, ಡಾಟಾ ಎಂಟ್ರಿಯಾಗಬೇಕಿದೆ. ಆತನಕ ಆಯಾ ಕಚೇರಿಯವರು ತಮ್ಮಲ್ಲಿರುವ ಕೋರ್ಟ್ ವಿಚಾರಗಳ ದಾಖಲೆ ಪುಸ್ತಕವನ್ನು ಜೆರಾಕ್ಸ್ ಮಾಡಿ ಆ ಪುಸ್ತಕದ ಪ್ರತಿಯನ್ನು ಇತರ ತಾಲೂಕಿನ ಕಚೇರಿಗಳಿಗೂ ಕಳುಹಿಸಿಕೊಡಬೇಕಾಗುತ್ತದೆ. ಡಾಟಾ ಎಂಟ್ರಿ ತನಕ ಇದೊಂದು ತಾಂತ್ರಿಕ ಸಮಸ್ಯೆ ಎದುರಾಗಲಿದೆ ಎನ್ನಲಾಗಿದೆ. ಇದೀಗ ಈ ಬಗ್ಗೆಯೂ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದ್ದು, ಸೆಪ್ಟೆಂಬರ್ ೫ರ ನಂತರದಿAದ ಹೊಸ ವ್ಯವಸ್ಥೆ ಪರಿಪೂರ್ಣವಾಗಿ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.