ಚೆಟ್ಟಳ್ಳಿ, ಆ. ೨೫: ಸಂಕಷ್ಟದಲ್ಲಿರುವ ಬೆಳೆಗಾರರ ಕೃಷಿ ಸಾಲಮನ್ನಾ ಹಾಗೂ ಈ ಬಾರಿ ಹೆಚ್ಚಿನ ಬೆಳೆ ನಷ್ಟವಾಗಿದ್ದು ಬೆಳೆನಷ್ಟ ಪರಿಹಾರ ಬಿಡುಗಡೆಗೊಳಿ ಸಬೇಕೆಂದು ಚೆಟ್ಟಳ್ಳಿ ಪ್ರಾಥಮಿಕ ಕ್ರಷಿ ಪತ್ತಿನಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಆಗ್ರಹಿಸಿದರು.

ಇಲ್ಲಿನ ಶ್ರೀ ನರೇಂದ್ರ ಮೋದಿ ಭವನದಲ್ಲಿ ನಡೆದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಿಂದೆ ಊರಿನ ಹಲವು ಜಾಗದಾನಿಗಳ ಫಲವಾಗಿ ಚೆಟ್ಟಳ್ಳಿಯಲ್ಲಿ ಸಹಕಾರ ಸಂಘ ಸ್ಥಾಪನೆಗೊಂಡಿತು. ಸಂಘದ ಅಭಿವೃದ್ಧಿ ಸಹಿಸದ ಕೆಲವರು ಸಂಘದ ಜಾಗದ ಮೇಲೆ ಹಾಗೂ ಆಡಳಿತ ಮಂಡಳಿಯ ಮೇಲೆ ಲೋಕಾಯುಕ್ತರಿಗೆ, ಎಸಿ ಹಾಗೂ ಡಿಸಿ, ಕೋರ್ಟ್ಗೂ ದೂರು ನೀಡಿದ್ದು, ಹೈಕೋರ್ಟ್ವರೆಗೂ ದಾವೆ ಇದೆ. ನ್ಯಾಯಾಲಯದ ಹೋರಾಟದ ಖರ್ಚುವೆಚ್ಚದಿಂದಾಗಿ ಈ ವರ್ಷದ ಲಾಭಾಂಶದಲ್ಲಿ ಕುಂಠಿತವಾಯಿ ತೆಂದರು. ಪಾರದರ್ಶಕ ಆಡಳಿತ ನಡೆಸುತ್ತಿದ್ದು ಸಂಘದ ಅಭಿವೃದ್ಧಿ ಸಾಧ್ಯ ವಾಗಿದೆ. ಈ ಹಿಂದೆ ಸಂಘದ ವಿರುದ್ಧ ಚಟುವಟಿಕೆ ನಡೆಸಿದವರನ್ನು ಸಹಕಾರ ಸಂಘದ ನಿಯಮಾನುಸಾರ ಮಹಾಸ ಭೆಯ ತೀರ್ಮಾನದಂತೆ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ. ಜಾಗದ ವಿವಾದ ಬಗೆಹರಿದ ಕೂಡಲೇ ಅದೇ ಜಾಗದಲ್ಲಿ ಮತ್ತೊಂದು ಕಟ್ಟಡವನ್ನು ನಿರ್ಮಿಸಲಾಗುವುದೆಂದರು.

ಸAಘದ ಲಾಭಾಂಶದಲ್ಲಿ ಸಂಘ ಅಭಿವೃದ್ಧಿಯ ಜೊತೆಗೆ ಐನ್‌ಮನೆ, ಕೈಮಡ, ದೇವಾಲಯದ ಅಬಿವೃದ್ಧಿಗೆ ಧನ ಸಹಾಯ ನೀಡಲಾಗಿದೆ. ಕೆಲವೆಡೆ ಕಾಫಿ ತೋಟದ ಮಾಲೀಕರು ತೋಟವನ್ನು ಬೇರೆಯವರಿಗೆ ಗುತ್ತಿಗೆ ಹಾಗೂ ಕೃಷಿಯೇತರ ಚಟುವಟಿಕೆಗೆ ಮಾರಾಟ ಮಾಡುತ್ತಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಚೆಟ್ಟಳ್ಳಿ ಸಹಕಾರ ಸಂಘ ಅದೆಷ್ಟೋ ಬೆಳೆಗಾರರಿಗೆ ವಿವಿಧ ಸಾಲಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸುತ್ತಿದೆ ಎಂದರು.

ಸಭೆಯಲ್ಲಿ ವಾರ್ಷಿಕ ವರದಿ ಮಂಡನೆ, ಆಯವ್ಯಯ, ನಿವ್ವಳ ಲಾಭ ವಿಲೇವಾರಿ, ಬೈಲಾ ತಿದ್ದುಪಡಿ, ಲೆಕ್ಕಪರಿಶೋಧಕರ ನೇಮಕ ಹಾಗೂ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಚೆಟ್ಟಳ್ಳಿ ಸಹಕಾರ ಸಂಘ ಹಲವು ಅಬಿವೃದ್ಧಿ ಕಾರ್ಯ ವನ್ನು ಮಾಡಿದೆ. ಕಾಫಿಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಉತ್ತಮ ಕಾಫಿತಳಿಗಳ ಅಭಿವೃದ್ಧಿಯ ಬಗ್ಗೆ ಬೆಳೆಗಾರರಿಗೆ ಮಾಹಿತಿ ನೀಡಬೇಕೆಂದು ಹಿರಿಯ ಸದಸ್ಯ ಅಯ್ಯಂಡ್ರ ರಾಘವಯ್ಯ ಸಲಹೆ ನೀಡಿದರು.

ವೇದಿಕೆಯಲ್ಲಿ ನಿರ್ದೇಶಕರಾದ ಕೊಂಗೇಟಿರ ವಾಣಿಕಾಳಪ್ಪ,ಪುತ್ತರಿರ ಶಿವುನಂಜಪ್ಪ, ಬಿ.ಎಂ.ಕಾಶಿ,ಮುಳ್ಳAಡ ಮಾಯಮ್ಮ,ಅಕ್ಕಾರಿ ದಯಾನಂದ, ಬಟ್ಟೀರ ವೇಣುಗೋಪಾಲ, ಕರ್ಣಯ್ಯನ ಪ್ರಜ್ವಲ್, ಮರದಾಳು ಚೇತನ್, ಗಣೇಶ್. ಪಿ.ಟಿ, ನಿರ್ದೇಶಕರಾದ ಚೋಳಪಂಡ ವಿಜಯ, ಮುಕ್ಕಾಟಿ ಪಳಂಗಪ್ಪ ಆರ್ಥಿಕ ಬ್ಯಾಂಕ್ ಪ್ರತಿನಿಧಿ ಮಮತ, ಎಂ.ಈ. ಹಾಗೂ ಲೆಕ್ಕಪರಿಶೋಧಕ ಚಂದ್ರಶೇಖರ್ ಹಾಜರಿದ್ದರು.

ಮುಖ್ಯಕಾರ್ಯನಿರ್ವಹಣಾಧಿಕಾರಿ ನಂದಿನಿ ಕೆ.ಎಸ್.ಪ್ರಾರ್ಥಿಸಿ, ಬಲ್ಲಾರಂಡ ಮಣಿಉತ್ಯಪ್ಪ ಸ್ವಾಗತಿಸಿ, ಉಪಾಧ್ಯಕ್ಷ ಪೇರಿಯನ ಪೂಣಚ್ಚ ವಂದಿಸಿದರು.