ಮಡಿಕೇರಿ, ಆ. ೨೫: ಮಡಿಕೇರಿ ಬ್ರಾಹ್ಮಣರ ಬೀದಿಯಲ್ಲಿರುವ ಶತಮಾನ ಭವನದಲ್ಲಿ ತಾ.೨೧ ರಂದು ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ರಾಘವೇಂದ್ರ ಆರಾಧನೆ ಅಂಗವಾಗಿ ಪೂಜಾ ಕೈಂಕರ್ಯಗಳು ನಡೆದವು. ವರಮಹಾಲಕ್ಷಿö್ಮ ಪೂಜೆ ಹಾಗೂ ಗುರು ಮಠದಿಂದ ವಿಷ್ಣು ಸಹಸ್ರನಾಮ ಲೇಖನ ಯಜ್ಞ ನಡೆಯಿತು. ಶೋಭಾ ಭಟ್ ಅವರಿಂದ ಭಕ್ತಿ ಗೀತೆ ಗಾಯನ ಕಾರ್ಯಕ್ರಮ ನಡೆಯಿತು. ಕಾರ್ಯ ಕ್ರಮದ ಉದ್ಘಾಟನೆಯನ್ನು ರಾಜಲಕ್ಷಿö್ಮÃ ಗೋಪಾಲಕೃಷ್ಣ ಹಾಗೂ ನಿಧಿಯ ಆಡಳಿತ ಮಂಡಳಿಯ ಗೀತಾ ಗಿರೀಶ್, ಸವಿತಾ ಭಟ್, ಲಲಿತಾ ರಾಘವನ್, ಭರತೇಶ್ ಖಂಡಿಗೆ, ಸಂಪತ್ ಕುಮಾರ್, ಬಿ.ಜೆ ಜಗದೀಶ್ ಅವರುಗಳು ನೆರವೇರಿಸಿದರು.