ಮಡಿಕೇರಿ, ಆ. ೨೩ : ಮಡಿಕೇರಿ ನಗರದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಸಮಗ್ರ ಯೋಜನೆ ಯೊಂದಿಗೆ ನಾಗರಿಕರು, ವರ್ತಕರ ನ್ನೊಳಗೊಂಡ ಟಾಸ್ಕ್ ಫೋರ್ಸ್ ರಚನೆ ಸೂಕ್ತವೆಂದು ಮಡಿಕೇರಿ ಡಿ.ವೈಎಸ್.ಪಿ ಮಹೇಶ್ ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ನಗರದ ರೆಡ್‌ಬ್ರಿಕ್ಸ್ ಕಟ್ಟಡದ ಸತ್ಕಾರ ಸಭಾಂಗಣದಲ್ಲಿ ನಗರದ ಕೈಗಾರಿಕಾ ಬಡಾವಣೆ, ಕಾವೇರಿ ಹಾಲ್ ರಸ್ತೆ, ಕೆ.ಎಸ್.ಆರ್. ಟಿ.ಸಿ ನಿಲ್ದಾಣ ರಸ್ತೆ, ಗೌಳಿಬೀದಿ ರಸ್ತೆ, ಕೊಹಿನೂರು ರಸ್ತೆಯಲ್ಲಿನ ಟ್ರಾಫಿಕ್ ಹಾಗೂ ಪಾರ್ಕಿಂಗ್ ಸಮಸ್ಯೆ ಸಂಬAಧ ಸಾರ್ವಜನಿಕರು, ಸ್ಥಳೀಯ ವರ್ತಕರನ್ನು ಒಳಗೊಂಡು ಕರೆಯಲಾಗಿದ್ದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಮಡಿಕೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ದಿನನಿತ್ಯ ಆಗಮಿಸುತ್ತಾರೆ. ಟ್ರಾಫಿಕ್ ದಟ್ಟಣೆ ಅಧಿಕವಿರುವ ಕಾರಣ ಟ್ರಾಫಿಕ್ ಸಮಸ್ಯೆ ಬಗ್ಗೆ ಸಮಗ್ರ ಯೋಜನೆ ತಯಾರಾಗಬೇಕು. ಇದರಲ್ಲಿ ನಾಗರಿಕರು ಸೇರಿದಂತೆ ಹಲವು ಇಲಾಖೆಗಳ ಸಹಭಾಗಿತ್ವ ಕೂಡ ಅಗತ್ಯವಿದೆ. ಟ್ರಾಫಿಕ್ ನಿಯಂತ್ರಣ ನಿರಂತರ ಕಾರ್ಯ. ಇದಕ್ಕೆ ಶಾಶ್ವತ ಪರಿಹಾರವಿಲ್ಲ. ಮಡಿಕೇರಿ ನಗರ ಟ್ರಾಫಿಕ್ ಟಾಸ್ಕ್ ಫೋರ್ಸ್ ರಚಿಸಿ ವಿವಿಧ ಸಂಘ-ಸAಸ್ಥೆಗಳು, ಸ್ಥಳೀಯ ನಾಗರಿಕರನ್ನು ಸೇರಿಸಿ ಪೊಲೀಸ್ ಇಲಾಖೆ ಅಥವಾ ಜಿಲ್ಲಾಡಳಿತ ಅಡಿಯಲ್ಲಿ ಈ ಟಾಸ್ಕ್ ಫೋರ್ಸ್ ಎನ್.ಜಿ.ಒ ರೀತಿ ಕಾರ್ಯ ನಿರ್ವಹಿಸುವಂತೆ ಮಾಡುವ ಚಿಂತನೆ ಇದೆ ಎಂದು ಅವರು ಹೇಳಿದರು. ಪೊಲೀಸ್ ಸಿಬ್ಬಂದಿಗೆ ನಗರದಾದ್ಯಂತ ಟ್ರಾಫಿಕ್ ನಿಯಂತ್ರಣ ಮಾಡುವುದು ಕಷ್ಟ. ಇದಕ್ಕಾಗಿ ನಾಗರಿಕರನ್ನು ಟ್ರಾಫಿಕ್ ವಾರ್ಡನ್‌ಗಳಾಗಿ ಆಯ್ಕೆ ಮಾಡಿ ಟ್ರಾಫಿಕ್ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವ ಭರವಸೆ ಇತ್ತರು.

ಮಡಿಕೇರಿ ನಗರದ ನಾಗರಿಕರ, ವಿವಿಧ ಇಲಾಖೆಗಳ ಸೇರಿದಂತೆ ವರ್ತಕರ

(ಮೊದಲ ಪುಟದಿಂದ) ಸಮ್ಮುಖದಲ್ಲಿ ಪೊಲೀಸ್ ಇಲಾಖೆ ಟ್ರಾಫಿಕ್ ನಿಯಂತ್ರಣ ಸಂಬAಧ ಸಭೆ ನಡೆಸಿ ಸಲಹೆಗಳನ್ನು ಪಡೆದು ಸಮಸ್ಯೆಗಳ ಪರಿಹಾರ ಮಾಡಬೇಕೆಂಬ ಎಸ್.ಪಿ ಕೆ. ರಾಮರಾಜನ್ ಅವರ ಸೂಚನೆ ಮೇರೆಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಇಂದು ಕೈಗಾರಿಕಾ ಬಡಾವಣೆ, ಕಾವೇರಿ ಹಾಲ್ ರಸ್ತೆ, ಕೊಹಿನೂರ್ ರೋಡ್, ಗೌಳಿಬೀದಿ ರಸ್ತೆ, ಕೆ.ಎಸ್.ಆರ್.ಟಿ.ಸಿ ರಸ್ತೆಯ ಸಾರ್ವಜನಿಕರು, ವರ್ತಕರ ನ್ನೊಳಗೊಂಡ ಮೊದಲ ಸಭೆ ನಡೆದಿದೆ. ಮುಂದಿನ ದಿನಗಳಲ್ಲಿ ಇತರ ರಸ್ತೆಗಳಲ್ಲಿನ ಸಮಸ್ಯೆ ಬಗೆಹರಿಸಲು ಸಭೆಗಳು ನಡೆಯಲಿವೆ ಎಂದರು. ಹಲವು ಬದಲಾವಣೆಗೆ ಶಾಸಕರ ನೇತೃತ್ವದಲ್ಲಿ ಚರ್ಚೆ ಆಗಿದೆ ಎಂದ ಅವರು, ಬೆಂಗಳೂರಿ ನಲ್ಲಿರುವ ಟ್ರಾಫಿಕ್ ತಜ್ಞರನ್ನು ಕರೆಸಿ ಸಮಸ್ಯೆ ಪರಿಹಾರಕ್ಕೆ ಚಿಂತನೆ ಇದೆ. ನಗರದ ವಿವಿಧೆಡೆ ಟ್ರಾಫಿಕ್ ಸಿಗ್ನಲ್ ಅವಶ್ಯಕತೆ ಬಗ್ಗೆಯೂ ಚಿಂತನೆ ಇದೆ. ಒಟ್ಟಿನಲ್ಲಿ ನಗರದಲ್ಲಿ ಸಂಚಾರ ದಟ್ಟನೆ ಕಡಿಮೆ ಮಾಡಲು ಎಲ್ಲರೂ ಸೇರಿ ಪೊಲೀಸರೊಂದಿಗೆ ಕೈ ಜೋಡಿಸಬೇಕು ಎಂದರು.

ಸಾರ್ವಜನಿಕರ ಪರ 'ಶಕ್ತಿ' ಸಂಪಾದಕ ಜಿ.ಚಿದ್ವಿಲಾಸ್ ಮಾತನಾಡಿ, ನಗರದ ಕೊಹಿನೂರು ರಸ್ತೆ-ಕೈಗಾರಿಕಾ ಬಡಾವಣೆ ನಿರ್ಗಮನ ರಸ್ತೆ ಜಂಕ್ಷನ್ ಯಾವಾಗಲು ಇಕ್ಕಟ್ಟಿನಿಂದ ಕೂಡಿರುತ್ತದೆ. ಈ ಜಂಕ್ಷನ್‌ನಿAದ ಕೈಗಾರಿಕಾ ಬಡಾವಣೆಗೆ ತೆರಳಲು ನಿರ್ಬಂಧ ಇರುವ ಕಾರಣ ಇಲ್ಲಿ ಹೆಚ್ಚು ದಟ್ಟಣೆೆ ಆಗುತ್ತಿದೆ. ಸಮಸ್ಯೆ ಪರಿಹಾರಕ್ಕೆ ಕೈಗಾರಿಕಾ ಬಡಾವಣೆಯಲ್ಲಿರುವ ಏಕಮುಖ ಸಂಚಾರದ ದಿಕ್ಕನ್ನು ಬದಲಾಯಿಸುವುದು ಸೂಕ್ತ. ಖಾಸಗಿ ಬಸ್‌ಗಳ ಸಂಚಾರಕ್ಕೆ ಇತರ ಮಾರ್ಗ ಬಳಸುವ ವ್ಯವಸ್ಥೆ ಆಗಲಿ ಎಂದು ಸಲಹೆ ಇತ್ತರು. ತೋಟಗಾರಿಕಾ ಇಲಾಖೆ ಕಚೇರಿ ಎದುರು ಲಾರಿ ನಿಲ್ದಾಣವಿದ್ದು, ಖಾಸಗಿ ಬಸ್ ತಾಣದ ಮುಂದೆ ಇದನ್ನು ಸ್ಥಳಾಂತರ ಮಾಡುವುದು ಸೂಕ್ತ ಎಂದು ಲಾರಿ ಮಾಲೀಕರೇ ಅಭಿಪ್ರಾಯ ವ್ಯಕ್ತಪಡಿಸಿದ್ದರು; ಇದು ಆದಲ್ಲಿ ಇಲ್ಲಿ ವಾಹನ ಪಾರ್ಕಿಂಗ್‌ಗೆ ಜಾಗ ದೊರಕಲಿದ್ದು, ಸರಕಾರಿ ಬಸ್ ನಿಲ್ದಾಣ ರಸ್ತೆಯಲ್ಲಿ ವಾಹನ ದಟ್ಟಣೆÉ ಕಡಿಮೆಯಾಗಲಿದೆ. ನಗರದಲ್ಲಿ ಕೆಲ ವರ್ಕ್ಶಾಪ್ ವಾಹನಗಳು ರಸ್ತೆಯ ಬದಿಯಲ್ಲೇ ತಿಂಗಳು ಗಟ್ಟಲೆ ನಿಂತಿರುತ್ತವೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ವಹಿಸುವಂತೆ ಕೋರಿದರು. ಪ್ರೆಸ್‌ಕ್ಲಬ್ ರಸ್ತೆ ತಿರುವಿನಲ್ಲಿ ರಸ್ತೆಯನ್ನು ಭಾಗಶಃ ಆವರಿಸಿ ಆಟೋಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ತಿರುವಿನಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಸೂಕ್ತ ಸ್ಥಳದಲ್ಲಿ ಆಟೋ ನಿಲ್ಲಿಸುವ ವ್ಯವಸ್ಥೆ ಕಲ್ಪಿಸುವುದರಿಂದ ಸಮಸ್ಯೆ ಬಗೆಹರಿಸಬಹುದಾಗಿದೆ. ರಿಲಯನ್ಸ್ ಮಳಿಗೆ ಎದುರು ರಸ್ತೆ ಇಕ್ಕಟ್ಟಾಗಿದೆ. ಅಲ್ಲಿ ನಿತ್ಯ ವಾಹನ ಸಂಚಾರ ಸಮಸ್ಯೆಯಾಗುತ್ತಿದೆ ಎಂದರು. ಈ ರಸ್ತೆಯ ವಿಸ್ತರಣೆ ಮಾಡುವ ಅವಕಾಶ ಕೂಡ ಇರುವುದಾಗಿ ಈ ಸಂದರ್ಭ ಅಭಿಪ್ರಾಯ ವ್ಯಕ್ತಪಡಿಸಿದರು. ಸಾಯಿ ಟರ್ಫ್ ಮೈದಾನದೆದುರು ತಡೆಗೋಡೆ ನಿರ್ಮಾಣ ಕಾರ್ಯ ತ್ವರಿತವಾಗಿ ಆಗಬೇಕೆಂದು ಇದೇ ಸಂದರ್ಭ ಒತ್ತಾಯಿಸಿದರು. ಜೂನಿಯರ್ ಕಾಲೇಜು ರಸ್ತೆ ಕೂಡ ವಿಸ್ತರಣೆ ಮಾಡಿದಲ್ಲಿ ನಗರದಲ್ಲಿನ ಟ್ರಾಫಿಕ್ ನಿಯಂತ್ರಿಸಬಹುದೆAದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಸ್ತುತ ಇರುವ ಖಾಸಗಿ ಬಸ್ ನಿಲ್ದಾಣವನ್ನು ಹಳೆ ನಿಲ್ದಾಣವಿದ್ದ ಕಡೆಗೆ ಸ್ಥಳಾಂತರ ಮಾಡಿ ತೆರವಾದ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬಹುದು ಎಂಬ ಸಲಹೆಯನ್ನು ಕೂಡ ಅವರು ನೀಡಿದರು.

ಸ್ಥಳೀಯ ಉದ್ಯಮಿ ಮಹಮದ್ ಆಸಿಫ್ ಅವರು ಮಾತನಾಡಿ, ನಗರದಲ್ಲಿ ಶಂಕರ್ ಸ್ವಾಮಿ ರಸ್ತೆ ಹಾಗೂ ಜೂನಿಯರ್ ಕಾಲೇಜು ರಸ್ತೆ ಇಕ್ಕಟ್ಟಿನಿಂದ ಕೂಡಿದ್ದು, ಇಲ್ಲಿ ಟ್ರಾಫಿಕ್ ಸಮಸ್ಯೆ ಪ್ರತಿನಿತ್ಯ ಇದೆ. ಇದರ ಬಗ್ಗೆ ಕ್ರಮ ವಹಿಸುವಂತೆ ಕೋರಿದರು. ಉದ್ಯಮಿ ಶಬೀರ್ ಅವರು ಮಾತನಾಡಿ, ಪ್ರವಾಸಿಗರು ಗೂಗಲ್ ಮ್ಯಾಪ್ ಸಹಕಾರದಿಂದ ಜಿಲ್ಲೆಯಲ್ಲಿ ವಾಹನ ಸಂಚರಿಸುತ್ತಾರೆ. ಕೈಗಾರಿಕಾ ಬಡಾವಣೆಯಲ್ಲಿನ ಏಕಮುಖ ಸಂಚಾರದ ಬಗ್ಗೆ ಗೂಗಲ್‌ನಲ್ಲಿ ಮಾಹಿತಿ ಇಲ್ಲದಿರುವ ಕಾರಣ ಸಮಸ್ಯೆಯಾಗಿದೆ. ಗೂಗಲ್‌ನಲ್ಲಿ ಇದನ್ನು ಸರಿಪಡಿಸುವಂತೆ ಪೊಲೀಸ್ ಇಲಾಖೆ ಕ್ರಮ ವಹಿಸುವಂತೆ ಮನವಿ ಮಾಡಿದರು. ಹಾಗೂ ಕೈಗಾರಿಕಾ ಬಡಾವಣೆ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಗೆ ದ್ವಿಮುಖ ಸಂಚಾರದ ವ್ಯವಸ್ಥೆ ಕಲ್ಪಿಸುವಂತೆ ಕೋರಿದರು.

ಚರಣ್ ಅವರು ಮಾತನಾಡಿ, ಕಾಲೇಜು ರಸ್ತೆಯಲ್ಲಿ ನಾಲ್ಕು ಚಕ್ರ ವಾಹನ ನಿಲುಗಡೆ ಸ್ಥಳದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಾರೆ. ಹಾಗೂ ಹೆಚ್ಚಾಗಿ ಅಂಗಡಿ ಮಾಲೀಕರೇ ಬೆಳಿಗ್ಗೆಯಿಂದ ರಾತ್ರಿವರೆಗೆ ಅಂಗಡಿಗಳ ಮುಂದೆ ವಾಹನಗಳನ್ನು ನಿಲ್ಲಿಸುವುದರಿಂದ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದೆ ಎಂದರು. ಮಡಿಕೇರಿ ಹಿಲ್ ರಸ್ತೆಯಲ್ಲಿನ ವಾಹನ ದಟ್ಟಣೆ ಸಮಸ್ಯೆ ಬಗ್ಗೆ ಮಡಿಕೇರಿ ಲಾರಿ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಮೋಹನ್ ಅವರು ಗಮನ ಸೆಳೆದರು. ಸಾಜಿಲ್ ಅವರು ಮಾತನಾಡಿ, ಪ್ರೆಸ್ ಕ್ಲಬ್ ಮೀಟಿಂಗ್ ನಡೆದಾಗ, ಕಾವೇರಿ ಹಾಲ್‌ನಲ್ಲಿ ಮದುವೆ ಸಮಾರಂಭ ಇದ್ದರೆ ದಿನವಿಡೀ ಆ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು, ಸಂಚರಿಸಲು ಕಷ್ಟಸಾಧ್ಯವಾಗುತ್ತದೆ ಎಂದರು. ಜಗದೀಶ್ ಅವರು ಮಾತನಾಡಿ, ಕೆಲ ವರ್ಕ್ಶಾಪ್ ಗಾಡಿಗಳು ರಸ್ತೆಯಲ್ಲೆ ಶಾಶ್ವತವಾಗಿ ನಿಲ್ಲಿಸುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಡಾ .ರಾಘವನ್ ಅವರು ಮಾತನಾಡಿ, ಕೈಗಾರಿಕಾ ಬಡಾವಣೆಯಲ್ಲಿ ಪಾಳುಬಿದ್ದಿರುವ ಡಿ.ಐ.ಸಿಯ ಕಟ್ಟಡವನ್ನು ಮಲ್ಟಿಸ್ಟೋರಿ ಪಾರ್ಕಿಂಗ್ ಕಟ್ಟಡವಾಗಿ ಮಾರ್ಪಡಿಸಬಹುದೆಂಬ ಸಲಹೆಯನ್ನು ನೀಡಿದರು. ಅವಿನಾಶ್ ಅವರು ಮಾತನಾಡಿ, ಕೊಹಿನೂರ್ ರಸ್ತೆಯಲ್ಲಿ ಆಟೋ ನಿಲ್ಲಿಸುವ ಜಾಗದಲ್ಲಿ ಖಾಸಗಿ ವಾಹನವನ್ನು ಕೆಲವರು ನಿಲ್ಲಿಸುವುದನ್ನು ತಡೆಯಬೇಕೆಂದರು.

ನಗರಸಭಾ ಇಂಜಿನಿಯರ್ ಸೌಮ್ಯ ಅವರು ಮಾತನಾಡಿ, ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಮಲ್ಟಿಸ್ಟೋರಿ ಪಾರ್ಕಿಂಗ್ ವ್ಯವಸ್ಥೆ ಮಾಡುವ ಯೋಜನೆಗೆ ನಗರೋತ್ಥಾನ ಯೋಜನೆ ಯಡಿಯಲ್ಲಿ ರೂ.೧೦ ಕೋಟಿ ಅನುದಾನವಿದೆ. ಇದರ ನಕ್ಷೆ ತಯಾರಾಗಿದ್ದು, ೨೦೦ ವಾಹನಗಳನ್ನು ಇಲ್ಲಿ ನಿಲ್ಲಿಸಬಹುದು. ಈ ಯೋಜನೆ ಪೂರ್ಣಗೊಂಡರೆ ನಗರದ ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ ಎಂದರು.

ಸಲಹೆ ಆಧರಿಸಿ ಸಮಸ್ಯೆ ಬಗೆಹರಿಸುವ ಯತ್ನ - ವೃತ್ತ ನಿರೀಕ್ಷಕ ರಾಜು

ನಗರದಲ್ಲಿ ಪಾರ್ಕಿಂಗ್ ತೊಂದರೆ, ಸಂಚಾರದಲ್ಲಿ ತೊಂದರೆ ಸಂಬAಧ ನಾಗರಿಕರೊಂದಿಗೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಯಬೇಕು. ಪ್ರವಾಸಿಗರು, ಸ್ಥಳೀಯರು, ವರ್ತಕರು, ವಿದ್ಯಾರ್ಥಿಗಳು ಎಲ್ಲರನ್ನು ಗಮನದಲ್ಲಿಟುಕೊಂಡು ನಾಗರಿಕರ ಸಲಹೆಗಳನ್ನು ಆಧರಿಸಿ ಸಂಚಾರಿ ವ್ಯವಸ್ಥೆ ಸರಿಪಡಿಸುವುದಾಗಿ ಮಡಿಕೇರಿ ವೃತ್ತ ನಿರೀಕ್ಷಕ ರಾಜು ಅವರು ಭರವಸೆ ಇತ್ತರು. ಕೈಗಾರಿಕಾ ಬಡಾವಣೆಯಲ್ಲಿನ ಏಕಮುಖ ಸಂಚಾರದ ದಿಕ್ಕು ಬದಾಲವಣೆ ಉತ್ತಮ ಸಲಹೆಯಾಗಿದ್ದು, ಈ ಸಂಬAಧ ಮೇಲಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಪ್ರವಾಸಿಗರಿಗೆ ಏಕಮುಖ ಸಂಚಾರದ ಬಗ್ಗೆ ಅರಿವು ಇರುವುದಿಲ್ಲ. ಗೂಗಲ್ ಮ್ಯಾಪ್‌ನಲ್ಲಿ ಈ ಬಗ್ಗೆ ಮಾಹಿತಿ ಲಭ್ಯವಾಗುವುದಿಲ್ಲ. ಈ ಮಾಹಿತಿ ಮ್ಯಾಪ್‌ನಲ್ಲಿ ಅಳವಡಿಸಲು ಸಂಬAಧಿಸಿದವರೊAದಿಗೆ ಚರ್ಚಿಸಲಾಗುವುದು ಎಂದರು. ಕೆಲವು ವರ್ಕ್ಶಾಪ್‌ನವರು ವಾಹನಗಳನ್ನು ರಸ್ತೆ ಬದಿ ಹಲವಾರು ತಿಂಗಳುಗಳ ಕಾಲ ನಿಲ್ಲಿಸಿರುತ್ತಾರೆ. ಇಂತಹ ವಾಹನಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು. ಲಾರಿ ನಿಲ್ದಾಣ ಸ್ಥಳಾಂತರ ಬಗ್ಗೆಯೂ ಅಧಿಕಾರಿ ಗಳೊಂದಿಗೆ ಚರ್ಚಿಸಲಾಗುವುದು ಎಂದರು. ಪ್ರೆಸ್ ಕ್ಲಬ್ ಎದುರು ಆಟೋ ಪಾರ್ಕಿಂಗ್, ರಿಲಯನ್ಸ್ ಮಾರ್ಟ್ ರಸ್ತೆಯಲ್ಲಿನ ಸಂಚಾರ ದಟ್ಟಣೆ ಸಂಬAಧ ಕ್ರಮ ಕೈಗೊಳ್ಳುವ ಭರವಸೆ ಇತ್ತರು. ಕೈಗಾರಿಕಾ ಬಡಾವಣೆಯಲ್ಲಿ ರಸ್ತೆಯ ಬಲಬದಿ ಪಾರ್ಕಿಂಗ್ ನಿಷೇಧ ಎಂಬ ಫಲಕವನ್ನು ಅಳವಡಿಸುವ ಸಂಬAಧ ಹಾಗೂ ಎಡಬದಿಯಲ್ಲಿ ಪಾರ್ಕಿಂಗ್‌ಗೆ ಬಿಳಿಪಟ್ಟಿ ಮೂಲಕ ಸ್ಥಳ ಗುರುತು ಮಾಡುವ ಸಂಬAಧ ಕೂಡ ಕ್ರಮ ಕೈಗೊಳ್ಳಲಾಗುವುದಾಗಿ ಹೇಳಿದರು. ಸಾಯಿ ಟರ್ಫ್ ಕ್ರೀಡಾಂಗಣ ಬಳಿ ತಡೆಗೋಡೆ ಕಾಮಗಾರಿ ಶೀಫ್ರ ಪ್ರಾರಂಭ ಮಾಡುವಂತೆ ಸಂಬAಧಿಸಿದ ಇಲಾಖೆಗೆ ತಿಳಿಸಲಾಗುವುದು. ಜೂನಿಯರ್ ಕಾಲೇಜು ರಸ್ತೆ ವಿಸ್ತರಣೆ, ಸಿ.ಪಿ.ಸಿ ಲೇಔಟ್ ಖಾಲಿ ಜಾಗ ಹಾಗೂ ಡಿ.ಐಸಿ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಸಂಬAಧವೂ ಚರ್ಚಿಸಲಾಗುವುದು ಎಂದರು. ಮಡಿಕೇರಿ ನಗರದಲ್ಲಿ ಅಂಗಡಿಗಳ ಸಂಖ್ಯೆ ಜಾಸ್ತಿಯಾಗಿದೆ. ವಾಹನಗಳು ಹೆಚ್ಚಾಗಿವೆ. ಒಂದೇ ಅಂಗಡಿಗೆ ತೆರಳುವವರು ಒಂದೇ ವಾಹನದಲ್ಲಿ ಬಂದರೆ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಇಳಿಮುಖವಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿನ ಸಲಹೆಗಳನ್ನು ಆಧರಿಸಿ ೩ ತಿಂಗಳೊಳಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿ ಮತ್ತೆ ಸಭೆ ನಡೆಸಲಾಗುವುದು ಎಂದರು. ಕಾರ್ಯಕ್ರಮವನ್ನು ಮಡಿಕೇರಿ ಎ.ಎಸ್.ಐ ನಂದ ನಿರೂಪಿಸಿದರು. ನಗರ ಸಂಚಾರಿ ಠಾಣಾಧಿಕಾರಿ ಶ್ರೀಧರ್ ಅವರು ವಂದನಾರ್ಪಣೆಗೈದರು. ಎಸ್.ಐ ತಮ್ಮಯ್ಯ, ಇಲಾಖಾ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಜರಿದ್ದರು.