ಬಹುಶಃ ಮೇಲಿನ ಶೀರ್ಷಿಕೆ ಮತ್ತು ಮುಂದಿನ ಬರಹವನ್ನು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಅವರಂತೂ ಪ್ರಶಂಶಿಸಿಯಾರು !
ಸುಮಾರು ೧೦ ವರ್ಷಗಳ ಹಿಂದೆ ಮಡಿಕೇರಿಯ ವಾಹನ ದಟ್ಟಣೆ ಈಗಿನಂತಿರಲಿಲ್ಲ. ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ ಜೊತೆ ಜೊತೆಯಲ್ಲೇ ಇದ್ದವು. ಸಾರಿಗೆ ಇಲಾಖೆ ಕಚೇರಿ ಕೂಡಾ ನಗರ ಮಧ್ಯಯೇ ಕಾರ್ಯನಿರ್ವಹಿಸುತ್ತಿತ್ತು. ಹಾಗಾಗಿ ನಗರದಲ್ಲಿ ಸ್ವಲ್ಪ ಪ್ರಮಾಣದ ವಾಹನಗಳು ಬಂದರೂ ಸಂಚಾರ ವ್ಯವಸ್ಥೆಯಲ್ಲಿ ಏರು ಪೇರು ಉಂಟಾಗುತ್ತಿತ್ತು. ಗ್ರಾಮಾಂತರ ಪ್ರದೇಶದ ಜನರು ಖಾಸಗಿ ಬಸ್ಗಳನ್ನೇ ಅವಲಂಬಿಸಿದ್ದ ಕಾಲ ಅದಾಗಿದ್ದರಿಂದ ಆ ಬಸ್ಗಳ ನಿಲುಗಡೆಗೆ ಪ್ರತ್ಯೇಕ ಜಾಗಬೇಕೆಂಬ ಕೂಗು ಎದ್ದಿದ್ದು, ಸಹಜವೇ ಆಗಿತ್ತು.
ದೂರದ ವೆಬ್ಸ್ ಬಳಿ ಎರಡು ಎಕರೆ ಕೃಷಿ ವಿಜ್ಞಾನ ಕೇಂದ್ರದ ಜಾಗವನ್ನೂ ಪಡೆದು ಖಾಸಗಿ ಬಸ್ ನಿಲ್ದಾಣವನ್ನು ಅಲ್ಲಿಗೆ ಸ್ಥಳಾಂತರಿಸುವ ಪ್ರಕ್ರಿಯೆಗೆ ಚಾಲನೆಯೂ ದೊರಕಿತು. ಸರಕಾರ ೫ ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಿತು.
ಕಾಮಗಾರಿ ಆರಂಭವಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ, ಸ್ಪಷ್ಟ ರೂಪುರೇಷೆಯೂ ಇಲ್ಲದ, ಬಸ್ ನಿಲುಗಡೆ, ಪ್ರಯಾಣಿಕರ ತಂಗುದಾಣ, ಶೌಚಾಲಯ, ನೀರು ಹೀಗೆ ಯಾವದೂ ಕೂಡಾ ವ್ಯವಸ್ಥಿತವಾಗಿ ಮಾಡದೆ ಕಾಮಗಾರಿ ಪೂರ್ಣಗೊಂಡು ೫ ಕೋಟಿ ಹಣ ಖರ್ಚು ಮಾಡಲಾಯಿತು, ಹಲವು ಲಕ್ಷ ರೂಪಾಯಿ ಕೆಲವರ ಪಾಲಿಗೂ ಸೇರಿತು.
ನೂತನ ಬಸ್ ನಿಲ್ದಾಣಕ್ಕೆ ಭೂಮಿ ಪೂಜೆ ಮಾಡಿದ್ದ ಅಂದಿನ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೇ ಕೊನೆಗೆ ಸ್ಥಳಾಂತರ ಸರಿಕಾಣಲಿಲ್ಲ. ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಅವರಂತೂ ಅದನ್ನು ವಿರೋಧಿಸುತ್ತಲೇ ಇದ್ದರು. ಸರಕಾರ ಬದಲಾಗಿ ಎಂ.ಆರ್. ಸೀತಾರಾಂ ಅವರು ಉಸ್ತುವಾರಿ ಸಚಿವರಾಗಿ ಬಂದ ಮೇಲೆ ಸಹಜವಾಗಿಯೇ ಖಾಸಗಿ ಬಸ್ ನಿಲ್ದಾಣ ೨೦೧೮ರಲ್ಲಿ ಸ್ಥಳಾಂತರಗೊAಡಿತು.
ನAತರದ ಮಳೆ ಅನಾಹುತ, ಕೊರೊನಾ ಸಮಸ್ಯೆಗಳು ಜಿಲ್ಲೆಯಲ್ಲಿ ಇತರ ಕ್ಷೇತ್ರಗಳಂತೆ ಖಾಸಗಿ ಬಸ್ಗಳ ಆದಾಯವನ್ನು ಕಸಿದುಕೊಂಡವು. ತೀವ್ರ ನಷ್ಟಕ್ಕೆ ಒಳಗಾದ ಈ ಕ್ಷೇತ್ರದಿಂದ ಕಂಗೆಟ್ಟ ಹಲವಾರು ಮಂದಿ ತಮ್ಮ ಬಸ್ಗಳನ್ನು ಮಾರಾಟ ಮಾಡಿದರು. ಇನ್ನೂ ಕೆಲವರು ಪರವಾನಗಿಯನ್ನು ಸರಕಾರದ ವಶಕ್ಕೆ ಒಪ್ಪಿಸಿದರು. ಮಡಿಕೇರಿಗೆ ದಿನಂಪ್ರತಿ ೪೦೦ ರಷ್ಟು ಟ್ರಿಪ್ ಚಾಲನೆಯಾಗುತ್ತಿದ್ದುದು ಇದೀಗ ಶೇ. ೫೦ಕ್ಕೆ ಇಳಿದಿದೆ.
ಮಡಿಕೇರಿಯ ವಾಹನ ದಟ್ಟಣೆಯ ಚಿತ್ರಣವೂ ಮೊದಲಿಗಿಂತಾ ಊಹಿಸಲಾಗದಷ್ಟು ಬದಲಾಗಿದೆ. ವಾರಾಂತ್ಯಗಳಲ್ಲಿ ಜನರಲ್ ತಿಮ್ಮಯ್ಯ ವೃತ್ತ, ರಾಜಾಸೀಟು, ನಗರದ ಮುಖ್ಯ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವುದಿರಲಿ, ನಡೆದುಕೊಂಡು ಓಡಾಡಲೂ ಸಾಧ್ಯವಾಗದಷ್ಟು ವಾಹನಗಳು ತುಂಬಿಕೊAಡಿರುತ್ತವೆ. ಜನರಲ್ ತಿಮ್ಮಯ್ಯ ವೃತ್ತದಿಂದ ಹಳೇ ಖಾಸಗಿ ಬಸ್ನಿಲ್ದಾಣ ತಲುಪಲು ಕೆಲವೊಮ್ಮೆ ಗಂಟೆಗಳ ಅವಧಿ ಬೇಕಾಗಿದೆ. ಸಂಚಾರಿ ಪೊಲೀಸರು ಹೈರಾಣಾಗುತ್ತಿದ್ದಾರೆ. ತಿಮ್ಮಯ್ಯ ವೃತ್ತದಿಂದ ರಾಜಾಸೀಟು ಮಾರ್ಗವಾಗಿ ನೂತನ ಖಾಸಗಿ ಬಸ್ ನಿಲ್ದಾಣ ತಲುಪಲು ಖಾಸಗಿ ಬಸ್ನವರು ತೀವ್ರ ತೊಂದರೆ ಪಡುತ್ತಿದ್ದಾರೆ. ತಲುಪಿದ ಮೇಲೂ ಅಲ್ಲಿಂದ ಪ್ರೆಸ್ಕ್ಲಬ್ನ ಕಿಷ್ಕಿಂದೆ ಜಂಕ್ಷನ್, ಕೈಗಾರಿಕಾ ಬಡಾವಣೆ ಮೂಲಕ ಡಿಐಸಿ ಜಂಕ್ಷನ್ನಲ್ಲಿ ಮತ್ತೆ ಪರದಾಟ; ಬಳಲಿ ಹಳೆಯ ಖಾಸಗಿ ಬಸ್ನಿಲ್ದಾಣ ತಲುಪುವಷ್ಟರಲ್ಲೇ ಚಾಲಕರಿಗೆ ಸಾಕಷ್ಟು ಎಡವಟ್ಟುಗಳಾಗುತ್ತಿವೆ.
ರಾಜ್ಯ ಸರಕಾರದಿಂದ ಮಹಿಳೆಯರಿಗೆ ಉಚಿತ ಪ್ರಯಾಣದ ಬಿಸಿ ಖಾಸಗಿ ಬಸ್ನವರಿಗೆ ಚೇತರಿಸಿಕೊಳ್ಳಲಾರದ ಪೆಟ್ಟು ನೀಡಿದೆ. ಜೊತೆಯಲ್ಲಿ ಪ್ರಯಾಣಿಕರು ಇತ್ತೀಚಿನ ವರ್ಷಗಳಲ್ಲಿ ತಮ್ಮ ಸ್ವಂತ ವಾಹನ ಹೊಂದುವ ಸಾಮರ್ಥ್ಯದಿಂದ ಖಾಸಗಿ ಬಸ್ಗಳ ಬಳಕೆಗೂ ಕಡಿವಾಣ ಬಿದ್ದಿದೆ. ನೂತನ ಬಸ್ ನಿಲ್ದಾಣಕ್ಕೆ ಬಂದು ಬಸ್ ಏರುವವರ ಸಂಖ್ಯೆಗಿAತಾ ಹಳೆಯ ಬಸ್ನಿಲ್ದಾಣದಲ್ಲಿರುವ ಮುಳಿಯ ತಂಗುದಾಣದಲ್ಲೇ ಪ್ರಯಾಣಿರ ಸಂಖ್ಯೆ ಹೆಚ್ಚಿರುವುದು ವಾಸ್ತವ. ಜೊತೆಗೆ ಗಣನೀಯವಾಗಿ ಬಸ್ಗಳ ಸಂಖ್ಯೆ ಕಡಿಮೆಯಾಗಿದ್ದು, ಒಂದು ಬಾರಿ ಹೆಚ್ಚ್ಚೆಂದರೆ ೧೦ ಬಸ್ಗಳು ಒಂದೇ ಸಮಯಕ್ಕೆ ನಿಲ್ಲುತ್ತಿವೆ.
ಖಾಸಗಿ ಬಸ್ಗಳ ಓಡಾಟಕ್ಕೆಂದು ಹಲವೆಡೆ ಏಕರೂಪ ಸಂಚಾರ ವ್ಯವಸ್ಥೆ ಮಾಡಿರುವುದರಿಂದ ಎಲ್ಲಾ ವಾಹನ ಚಾಲಕರಿಗೆ ಗೊಂದಲದ ವಾತಾವರಣವೂ ಸೃಷ್ಟಿಯಾಗುತ್ತಿದೆ. ಜಿಲ್ಲಾ ಕೈಗಾರಿಕಾ ಕೇಂದ್ರದ ಬಳಿ ಬರುವ ವಾಹನಗಳಿಗೆ ಎರಡು ಕಡೆಗಳಲ್ಲೂ ಸಂಚಾರ ನಿಷೇಧವಿದ್ದು, ಕಿರಿದಾದ ಕೊಹಿನೂರು ರಸ್ತೆಯತ್ತ ವಾಹನ ತಿರುಗಿಸಬೇಕಿದೆ.
ಇಂದಿನ ಪರಿಸ್ಥಿತಿಯಲ್ಲಿ ಹಿಂದಿನAತೆ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲೇ ಖಾಸಗಿ ಬಸ್ನವರಿಗೆ ಅವಕಾಶ ಕಲ್ಪಿಸಿದಲ್ಲಿ ನಗರದ ಒಳಗಿನ ಹಲವು ರಸ್ತೆಗಳ ಸಂಚಾರದ ಗೊಂದಲ ನಿವಾರಣೆಯಾಗಲಿದೆ.
ಪಾರ್ಕಿಂಗ್ಗೆ ಬಳಸಬಹುದು
ನಗರದಲ್ಲಿ ಪಾರ್ಕಿಂಗ್ಗೆ ಸೂಕ್ತವಾದ ಜಾಗದ ಹುಡುಕಾಟದಲ್ಲಿ ಆಡಳಿತದವರು ತೊಡಗಿದ್ದಾರೆ. ಖಾಸಗಿ ಬಸ್ನಿಲ್ದಾಣ ಸ್ಥಳಾಂತರಗೊAಡಲ್ಲಿ ಈಗಿರುವ ನೂತನ ಬಸ್ನಿಲ್ದಾಣವನ್ನು ಬೃಹತ್ ಪ್ರಮಾಣದ ವಾಹನ ಪಾರ್ಕಿಂಗ್ಗೆ ಬಳಸಲು ಅನುಕೂಲವಾಗುತ್ತದೆ. ಈ ಹಿಂದೆ ನಗರಸಭೆಯಲ್ಲಿ ಪ್ರಸ್ತಾವನೆಯಾಗಿದ್ದ ಖಾಸಗಿ ಹೂಡಿಕೆದಾರರನ್ನು ಆಹ್ವಾನಿಸಿದರೆ, ಹಲವು ಅಂತಸ್ತಿನ ವಾಹನ ನಿಲುಗಡೆ ವ್ಯವಸ್ಥೆ ಕೂಡಾ ಮಾಡಬಹುದಾಗಿದೆ.
ಸಾಧ್ಯಾಸಾಧ್ಯತೆ ಬಗ್ಗೆ ಆಡಳಿತದ ಮಂದಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಿ.
ಜಿ. ಚಿದ್ವಿಲಾಸ್
ಸಂಪಾದಕ