ಮಡಿಕೇರಿ, ಆ. ೨೩: ತಮಿಳುನಾಡಿನ ಕೊಯಮತ್ತೂರಿನ ಶ್ರೀ ಕೃಷ್ಣ ಗೌಡರ್ ಮಂಟಪದಲ್ಲಿ ಇತ್ತೀಚೆಗೆ ನಡೆದ ೧೭ನೆ Iಒಉಏಂ ರಾಷ್ಟಿçÃಯ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಕೊಡಗಿನ ಮಿಲನ್ ಕುಮಾರ್ ವಿ.ವೈ ಟೀಮ್ ಕಥಾ ವಿಭಾಗದಲ್ಲಿ ಪ್ರಥಮ, ಕಥಾ ವಿಭಾಗದಲ್ಲಿ ದ್ವಿತೀಯ ಹಾಗೂ ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿ ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚು ಪದಕಗಳನ್ನು ಗಳಿಸಿದ್ದಾರೆ. ಮಡಿಕೇರಿ ಸಂತ ಮೈಕಲರ ಶಾಲೆಯಲ್ಲಿ ೧೦ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಿಲನ್ ಕುಮಾರ್, ಮಡಿಕೇರಿ ಶಾಸ್ತçನಗರ ನಿವಾಸಿ ಒಕ್ಕಲಿಗರ ಯೋಗೇಶ್ ಕುಮಾರ್ ವಿ.ಆರ್ ಹಾಗೂ ರೇಖಾ ದಂಪತಿಯ ಪುತ್ರ. ವೀರಾಜಪೇಟೆಯ ಕರಾಟೆ ಶಿಕ್ಷಕ ಸೆನ್ಸಾಯಿ ಎಂ.ಬಿ ಚಂದ್ರನ್ ಅವರಲ್ಲಿ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.