ಕುಶಾಲನಗರ, ಆ. ೨೩: ಕುಶಾಲನಗರ ವ್ಯಾಪ್ತಿಯ ಕಾವೇರಿ ನದಿ ತಟದ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವದೊಂದಿಗೆ ಆತಂಕ ಮೂಡಿಸಿದ ಘಟನೆ ಶುಕ್ರವಾರ ಬೆಳಗಿನ ವೇಳೆ ನಡೆದಿದೆ.
ಹೆಬ್ಬಾಲೆ, ಹಕ್ಕೆ, ಕೂಡು ಮಂಗಳೂರು, ಮುಳ್ಳುಸೋಗೆ, ಕುಶಾಲನಗರ, ಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ ಸುಮಾರು ೬.೩೦ ರಲ್ಲಿ ಭೂಮಿ ಕಂಪಿಸಿರುವುದಾಗಿ ತಮ್ಮ ಅನುಭವಗಳನ್ನು ಗ್ರಾಮಗಳ ಜನರು ಹಂಚಿಕೊAಡಿದ್ದಾರೆ. ಕೆಲವೇ ಸೆಕೆಂಡುಗಳ ಕಾಲ ನಡೆದ ಈ ಘಟನೆಯಿಂದ ಈ ಭಾಗದ ಗ್ರಾಮಾಂತರ ಪ್ರದೇಶದ ಜನತೆ ತಲ್ಲಣಗೊಂಡ ದೃಶ್ಯ ಗೋಚರಿಸಿತು.
ಈ ಬಗ್ಗೆ ಅಲ್ಲಲ್ಲಿ ಜನರಿಂದ ಮಾಹಿತಿಗಳು ಹೊರ ಬಿದ್ದರೂ,, ಭೂಕಂಪನ ಬಗ್ಗೆ ಖಚಿತ ಮಾಹಿತಿಗಳು ಮಾತ್ರ ಎಲ್ಲಿಯೂ ಹೊರಬಿದ್ದಿಲ್ಲ.
ಯಾವುದೇ ಭೂಕಂಪನ ಮಾಪಕ ಕೇಂದ್ರಗಳಲ್ಲಿ ಭೂಮಿ ಕಂಪಿಸಿದ ಬಗ್ಗೆ ಎಲ್ಲಿಯೂ ದಾಖಲೆಗಳು ಕಂಡುಬAದಿಲ್ಲ ಎಂದು ಬೆಂಗಳೂರಿನ ಹಿರಿಯ ಭೂವಿಜ್ಞಾನಿ ಡಾ ಎಚ್ ಎಸ್ ಎಂ ಪ್ರಕಾಶ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದೇ ಅವಧಿಯಲ್ಲಿ ಹರಿಯಾಣ ಮತ್ತು ಮಣಿಪುರ ಭಾಗಗಳಲ್ಲಿ ಅಲ್ಪ ಪ್ರಮಾಣದ ಭೂಕಂಪನ ನಡೆದಿರುವುದಾಗಿ ದಾಖಲೆಗಳು ಕಂಡು ಬಂದಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇತ್ತ ಕೊಡಗು ಜಿಲ್ಲಾಡಳಿತದ ಎನ್ ಡಿ ಆರ್ ಎಫ್ ಉಸ್ತುವಾರಿ ಅನನ್ಯ ವಾಸುದೇವ್ ಕೂಡ ತಮಗೆ ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.