ನಾಪೋಕ್ಲು, ಆ. ೨೩: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಬದಿಗೆ ಸರಿದು ಕೂದಲೆಳೆಯ ಅಂತರದಲ್ಲಿ ಪ್ರಯಾಣಿಕರು ಪಾರಾದ ಘಟನೆ ಸಮೀಪದ ಮರಂದೋಡ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಸಂಭವಿಸಿದೆ.
ಇಲ್ಲಿಗೆ ಸಮೀಪದ ಕುಂಜಿಲ ಗ್ರಾಮದ ಸಂಬAಧಿಕರ ಮನೆಗೆ ಕೇರಳದಿಂದ ಬಂದ ಕುಟುಂಬ ವೊಂದು ಹಿಂತಿ ರುಗುವ ಸಂದರ್ಭ ಕಕ್ಕಬೆ ಯ ಮರಂದೋಡ ಗ್ರಾಮದ ಕಬ್ಬಿನ ಕಾಡು ತಿರುವಿನಲ್ಲಿ ಈ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಬಳಿಕ ಸ್ಥಳಿಯ ಗ್ರಾಮಸ್ಥರು ಕಾರನ್ನು ಮೇಲೆತ್ತಿ ಸಹಕರಿಸಿದರು.