ಗೋಣಿಕೊಪ್ಪಲು, ಆ. ೨೨: ಇತಿಹಾಸ ಪ್ರಸಿದ್ಧ ವೀರಾಜಪೇಟೆ ಶ್ರೀ ಬಸವೇಶ್ವರ ದೇವಸ್ಥಾನ ಅಶ್ರಯದಲ್ಲಿ ೨೦೨೪ ನೇ ಸಾಲಿನ ಅದ್ಧೂರಿ ಗೌರಿ ಗಣೇಶೋತ್ಸವ ಅಚರಿಸಲಾಗುವದು ಎಂದು ಗೌರಿ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಎನ್. ಗೋಪಾಲಕೃಷ್ಣ ಕಾಮತ್ ತಿಳಿಸಿದ್ದಾರೆ.
ಕೊಡಗನ್ನು ಆಳಿದ್ದ ದೊಡ್ಡ ವೀರರಾಜೇಂದ್ರ ಒಡೆಯರ್ ೧೭೯೨ ರಲ್ಲಿ ವೀರಾಜಪೇಟೆ ನಗರವನ್ನು ನಿರ್ಮಾಣ ಮಾಡಿದ್ದ ಸಂದರ್ಭ ಬಸವೇಶ್ವರ ದೇವಸ್ಥಾನವೂ ನಿರ್ಮಾಣವಾಗಿತ್ತು. ಅಂದಿನಿAದಲೂ ದೇವಸ್ಥಾನದಲ್ಲಿ ವರ್ಷಂಪ್ರತಿ ಭಕ್ತಿ ಭಾವದೊಂದಿಗೆ ವಿಜೃಂಭಣೆಯಿAದ ಗೌರಿ ಗಣೇಶೋತ್ಸವವನ್ನು ಆಚರಿಸುತ್ತಾ ಬರುತ್ತಿರುವದಾಗಿ ಮಾಹಿತಿ ನೀಡಿದ್ದಾರೆ.
ಗೌರಿ ತದಿಗೆಯಂದು ಗೌರಿ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಕೂರಿಸಿ ವೀರಾಜಪೇಟೆ ನಗರಾದ್ಯಂತ ಮೆರವಣಿಗೆ ಮಾಡುವದು ವಿಶೇಷವಾಗಿದ್ದು ಮಂತರೆಯರು, ಕುಮಾರಿಯರು, ಮಹಿಳೆಯರು ಗೌರಮ್ಮನಿಗೆ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸುವ ಸಂಪ್ರದಾಯ ಹಿಂದಿನಿAದಲೂ ನಡೆದು ಬಂದಿದೆ ಎಂದರು.
ಈ ಬಾರಿ ಸೆ.೬ ರಂದು ಗೌರಿ ಪಲ್ಲಕ್ಕಿ ಮೆರವಣಿಗೆ ಹಾಗೂ ಪ್ರತಿಷ್ಠಾಪನೆ, ಸೆ.೭ ರಂದು ವಿನಾಯಕನ ಪ್ರತಿಷ್ಠಾಪನೆ ಮತ್ತು ಸೆ.೮ ರಿಂದ ಸೆ.೧೬ ರವರೆಗೆ ಮಧ್ಯಾಹ್ನ ಹಾಗೂ ರಾತ್ರಿ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ತಾ.೮ ರಿಂದ ರಾತ್ರಿ ೮ ಗಂಟೆಗೆ ನಿತ್ಯವೂ ಸಭಾ ಕಾರ್ಯಕ್ರಮ ಮತ್ತು ವಿವಿಧ ಕಲಾ ತಂಡಗಳಿAದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶ್ರೀ ಬಸವೇಶ್ವರ ದೇವಸ್ಥಾನ ಹಾಗೂ ಎನ್.ವೆಂಕಟೇಶ ಕಾಮತ್ ಟ್ರಸ್ಟ್ ನೇತೃತ್ವದಲ್ಲಿ ವಾಯ್ಸ್ ಆಫ್ ವೀರಾಜಪೇಟೆ ಸಂಗೀತ ಸ್ಪರ್ಧೆ ಕಾರ್ಯಕ್ರಮ ಸೆ.೧೫ ರವಿವಾರ ಪೂರ್ವಾಹ್ನ ೧೧.೦೦ ಗಂಟೆಗೆ ಆರಂಭವಾಗಲಿದೆ. ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಕೊಡಗು ಜಿಲ್ಲೆಯ ಸಂಕೇತ್ ಪೂವಯ್ಯ ನೆರವೇರಿಸಲಿದ್ದಾರೆ.
ಸ್ಪರ್ಧಾ ಕಾರ್ಯಕ್ರಮದ ಮಾಹಿತಿಯನ್ನು ವೀರಾಜಪೇಟೆ ಮಹಾವೀರ ಮೆಡಿಕಲ್ಸ್ ಮಾಲೀಕರಾದ ಜೆ.ಎನ್. ಸಂಪತ್ ಕುಮಾರ್ (೯೦೦೮೫೦೯೯೨೯) ಇವರಿಂದ ಹೊಂದಿಕೊಳ್ಳಬಹುದಾಗಿದೆ.
ಕಾರ್ಯಕ್ರಮದಲ್ಲಿ ಏನಾದರೂ ಬದಲಾವಣೆ ಇದ್ದಲ್ಲಿ ಮುಂಚಿತವಾಗಿ ತಿಳಿಸಲಾಗುವದು ಎಂದು ಸ್ಪರ್ಧಾ ಕಾರ್ಯಕ್ರಮ ಹಾಗೂ ಹಬ್ಬದ ಉಸ್ತುವಾರಿ ವಹಿಸಿರುವ ವಕೀಲರಾದ ಎನ್.ರವೀಂದ್ರನಾಥ್ ಕಾಮತ್ ತಿಳಿಸಿದ್ದಾರೆ.
ಸೆ.೧೬ ರಂದು ಬಾಳುಗೋಡು ಫೆಡರೇಷನ್ ಆಫ್ ಕೊಡವ ಸಮಾಜ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರಿಗೆ ೨೦೨೪ ನೇ ಸಾಲಿನ 'ಬಸವ ಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಗುವದು.
ಅಂದಿನ ಸಮಾರೋಪ ಕಾರ್ಯಕ್ರಮದಲ್ಲಿ ಮೈಸೂರು ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ ಮತ್ತು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಗೋಪಾಲಕೃಷ್ಣ ಕಾಮತ್ ತಿಳಿಸಿದ್ದಾರೆ.