ಮಡಿಕೇರಿ, ಆ. ೨೨: ಪಕ್ಕದ ಮನೆಯಲ್ಲಿ ಮಹಿಳೆ ಒಂಟಿಯಾಗಿದ್ದ ಸಂದರ್ಭ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಮಾಡಿ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ಸೇರಿದಂತೆ ಇತರ ಆಭರಣಗಳನ್ನು ಎಗರಿಸಿದ್ದಲ್ಲದೆ, ಮೊಬೈಲ್ ಕೂಡ ಕಸಿದು ಪರಾರಿಯಾಗಲು ಯತ್ನಿಸಿದ್ದ ಚೋರನೋರ್ವನನ್ನು ಭಾಗಮಂಡಲ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸುವ ಮೂಲಕ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭಾಗಮಂಡಲ ಪೊಲೀಸ್ ಠಾಣೆ ವ್ಯಾಪ್ತಿಗೊಳಪಡುವ ಚೇರಂಬಾಣೆ ಬಳಿಯ ತೊಟ್ಲುಕುಂಞೆ ನಿವಾಸಿ ಸುಧಾಕರ್ ಎಂಬವನೇ ಕಳ್ಳತನ ಮಾಡಲು ಹೋಗಿ ಪೊಲೀಸರಿಗೆ ಸೆರೆಯಾದ ಯುವಕ.

ಪಕ್ಕದ ಮನೆಗೆ ನುಗ್ಗಿದ...!

ತೊಟ್ಲುಕುಂಞÉಯಲ್ಲಿ ನೆಲೆಸಿರುವ ಸುಧಾಕರ್ (೨೪) ಎಂಬಾತ ಇಂದು ಬೆಳಿಗ್ಗೆ ೧೧ ಗಂಟೆ ವೇಳೆಗೆ ಪಕ್ಕದ ಮನೆಯಲ್ಲಿ ವಾಸವಿರುವ ಪುಷ್ಪ (೭೫) ಎಂಬವರ ಮನೆಗೆ ನುಗ್ಗಿದ್ದಾನೆ. ಪುಷ್ಪ ಅವರ ಪುತ್ರ ಕೆಲಸಕ್ಕೆ ಹೋಗಿದ್ದನ್ನು ಖಾತ್ರಿ ಪಡಿಸಿಕೊಂಡು ನುಗ್ಗಿದ ಸುಧಾಕರ್ ಆಕೆಯನ್ನು ಥಳಿಸಿ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರಗಳು, ಬ್ರೇಸ್‌ಲೇಟ್, ಓಲೆಗಳನ್ನು (ಅಂದಾಜು ೪ ಲಕ್ಷ ಮೊತ್ತದ ೮ ಪವನ್ ಆಭರಣ) ಕಿತ್ತುಕೊಂಡಿದ್ದಾನೆ. ಆಕೆಯ ಬಳಿಯಿದ್ದ ಮೊಬೈಲ್ ಅನ್ನು ಕೂಡ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.

ಗ್ರಾಮಸ್ಥರ ಹುಡುಕಾಟ...!

ಪಕ್ಕದ ಮನೆಯ ಹುಡುಗನೇ ಕಳ್ಳತನ ಮಾಡಿರುವುದರಿಂದ ಸುಲಭವಾಗಿ ಗುರುತು ಪತ್ತೆಹಚ್ಚಿದ ಪುಷ್ಪ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಆತಂಕಗೊAಡ ಗ್ರಾಮಸ್ಥರು ಕ್ಷಣಮಾತ್ರದಲ್ಲಿ ಗ್ರಾಮದಲ್ಲಿ ಸೇರಿ ತೊಟ್ಲುಕುಂಞÉ, ಚೇರಂಬಾಣೆ, ಚೆಟ್ಟಿಮಾನಿ, ಭಾಗಮಂಡಲ ಮುಂತಾದೆಡೆ ಹುಡುಕಾಡಿದ್ದಾರೆ. ಆದರೆ ಯಾವುದೇ ಸುಳಿವು ಸಿಗಲಿಲ್ಲ!

ಮೊಬೈಲ್ ಸ್ವಿಚ್ ಆಫ್...!

ಘಟನೆ ಬಗ್ಗೆ ವಿಷಯ ತಿಳಿದ ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಚೋರನ ಹುಟುಕಾಟದಲ್ಲಿ ತೊಡಗಿದ್ದಾರೆ. ಗ್ರಾಮಸ್ಥರೊಂದಿಗೆ ಪೊಲೀಸರು ಹುಡುಕಾಟದಲ್ಲಿ ಸೇರಿಕೊಂಡಿದ್ದಾರೆ